;

ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ದಿ ಮಾಂದ್ಯ ಆಶ್ರಮಕ್ಕೆ ದುದ್ದುಪುಡಿಡ್ರೈ ಫುಡ್ಸ್ ಮತ್ತು ಇನ್ನೂ ಅನೇಕ ಹಲವಾರು ಸಲಕರಣೆಗಳನ್ನು ವಿತರಿಸಿದರು…!!!

ಸಿಂಧನೂರು :ಪಾಟೀಲ್ ಅಕಾಡೆಮಿ ಬಾಷಾ ಕಂಪನಿಯ ಭಾಷ್ ಬ್ರಿಡ್ಜ್ ಕೋರ್ಸ್ ಉಪಸ್ಥಿತಿಯಲ್ಲಿ ನಗರದ ಕುಷ್ಟಗಿ ರಸ್ತೆಯಲ್ಲಿರುವ ಶ್ರೀಮಠ ಸೇವಾ ಟ್ರಸ್ಟ್ (ರಿ) ಹರೇಟನೂರು,ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ದಿ ಮಾಂದ್ಯ ಆಶ್ರಮಕ್ಕೆ ದುದ್ದುಪುಡಿ ಮಹಿಳಾ ಮಹಾವಿದ್ಯಾಲಯ ಮೂಲಕ ಆಶ್ರಮಕ್ಕೆ ಬೇಕಾದಂತಹ ಆರೋಗ್ಯ ಸಲಕರಣೆಗಳಾದ ಬಿಪಿ ಮಷೀನ್, ಶುಗರ್ ಮಷೀನ್, ಅಕ್ಸೋಮೀಟರ್, ನೆಬುಲೈಝರ್ ಸಲಕರಣೆ, ಪಲ್ಸ್ ಮೀಟರ್, ಕೊರೋನ ತಪಾಸಣಾ ಮೀಟರ್ ಹಾಗೂ ನಾಲ್ಕು ಬಗೆಯ ಅತ್ಯುತ್ತಮವಾದ ಡ್ರೈ ಫುಡ್ಸ್ ಮತ್ತು ಇನ್ನೂ ಅನೇಕ ಹಲವಾರು ಸಲಕರಣೆಗಳನ್ನು ವಿತರಿಸಿದರು.

ಈ ಕಾರ್ಯಕ್ರಮದಲ್ಲಿ ಪಾಟೀಲ್ ಅಕಾಡೆಮಿ ದುದ್ದು ಪುಡಿ ಮಹಿಳಾ ಕಾಲೇಜಿನ ಕಾರ್ಯದರ್ಶಿಗಳಾದ ಸನ್ಮಾನ್ಯ ಶ್ರೀ ಆರ್.ಸಿ. ಪಾಟೀಲ್ ಕಾಲೇಜಿನ ಭಾಷ್ ಬ್ರಿಡ್ಜ್ ಕೋರ್ಸಿನ ಮುಖ್ಯಸ್ಥರಾದ ಭೀಮಸೇನಾಚಾರ್ಯ ಗಂಗಾವತಿ, ಪ್ರಾಂಶುಪಾಲರಾದ ಆನಂದ. ಕೆ.ಪುರೋಹಿತ, ಉಪನ್ಯಾಸಕರಾದ ಚನ್ನಬಸವ, ಶ್ರೀಮತಿ ಸುಮಿತ್ರ ಪಾವನಿ ಹಾಗೂ ಪದವಿಪೂರ್ವ ಪ್ರಾಂಶುಪಾಲರಾದ ಶ್ರೀ ಮಾರುತಿ, ಕಾಲೇಜಿನ ಭಾಷ್ ಬ್ರಿಡ್ಜ್ ಕೋರ್ಸಿನ ಎಲ್ಲಾ ವಿದ್ಯಾರ್ಥಿಗಳು ಭಾಗಿಯಾಗಿ ಎಲ್ಲಾ ಸಲಕರಣೆಗಳನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಆರ್. ಸಿ. ಪಾಟೀಲ್ ಕಾರುಣ್ಯಾಶ್ರಮದ ಸೇವೆ ಅಮೋಘವಾದದ್ದು, ಸೇವೆಯನ್ನು ಗುರುತಿಸಿ ಭಾಷ್ ಕಂಪನಿ ಈ ಎಲ್ಲಾ ಸಲಕರಣೆಗಳನ್ನು ವಿತರಿಸಿದೆ. ಇಂತಹ ಜನಪರ ಸೇವೆಗೆ ನಮ್ಮ ಪಾಟೀಲ್ ಅಕಾಡೆಮಿ ನಿರಂತರ ಸೇವೆ ಸಲ್ಲಿಸುತ್ತಿದೆ”ನಿಮ್ಮೊಂದಿಗೆ ನಾವಿದ್ದೇವೆ ” ಎನ್ನುವ ಅನಾಥಪರ ಶಕ್ತಿಯನ್ನು ಕಾರುಣ್ಯ ಆಶ್ರಮಕ್ಕೆತುಂಬಿದರು.

ಈ ಕಾರ್ಯಕ್ರಮದಲ್ಲಿ ಕಾರುಣ್ಯ ಆಶ್ರಮದ ಪದಾಧಿಕಾರಿಗಳಾದ ಚನ್ನಬಸವಸ್ವಾಮಿ ಹಿರೇಮಠ, ಮೇಲ್ವಿಚಾರಕರಾದ ಸುಜಾತ, ಚನ್ನಬಸವಸ್ವಾಮಿ, ಸೇವಾಕರ್ತರುಗಳಾದ ಮಹೇಶ ವಿಶ್ವಕರ್ಮ, ಪಂಪಯ್ಯ ಸ್ವಾಮಿ ಜವಳಗೇರಾ, ಸುರೇಶ ಪಂಪಯ್ಯಸ್ವಾಮಿ ಹಚ್ಚೋಳ್ಳಿ, ಲಕ್ಷ್ಮೀನಾರಾಯಣ, ಗೀತಾ ಕುಲಕರ್ಣಿ, ಸಂಗನಗೌಡ ಗೋನವಾರ, ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು….

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *