;

ಯಾಳವಾರದಿಂದ ಸೋಮನಾಥಹಳ್ಳಿಗೆ ಹೋಗಲು ರಸ್ತೆ ಕಲ್ಪಿಸುವಂತೆ ಒತ್ತಾಯ:  ಬಸವಂತ್ರಾಯ ಗೌಡ ಮಾಲಿ ಪಾಟೀಲ…!!!

ಯಾಳವಾರದಿಂದ ಸೋಮನಾಥಹಳ್ಳಿಗೆ ಹೋಗಲು ರಸ್ತೆ ಕಲ್ಪಿಸುವಂತೆ ಒತ್ತಾಯ:  ಬಸವಂತ್ರಾಯ ಗೌಡ ಮಾಲಿ ಪಾಟೀಲ.

 

ಜೇವರ್ಗಿ: ತಾಲ್ಲೂಕಿನ ಯಾಳವಾರ ಗ್ರಾಮದಿಂದ ಸೋಮನಾಥನಹಳ್ಳಿಗೆ ಹೋಗುವ ಗ್ರಾಮದ ನಡೆದ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಮಾಡಲು ಸ್ಥಳಾವಕಾಶ ಒದಗಿಸುವಂತೆ ಒತ್ತಾಯಿಸಿ ಗ್ರಾಮಸ್ಥರು ಮಿನಿ ವಿಧಾನಸೌಧ ಕಚೇರಿ ಹೊರಭಾಗದಲ್ಲಿ ಸತ್ಯಾಗ್ರಹ ನಡೆಸಿದರು.

 

“ಬಿಜಾಪುರ ರಸ್ತೆಯಿಂದ ವಿಧಾನಸೌಧದ ವರೆಗೆ ಡೊಳ್ಳು ಮತ್ತು ಅಲ್ಲಿಗೆ ಮೂಲಕ ಮೆರವಣಿಗೆ ಹೊರಟ ಗ್ರಾಮಸ್ಥರು.”

ಸತ್ಯಾಗ್ರಹವನ್ನು ಉದ್ದೇಶಿಸಿ ಸೋಮನಾಥ ಹಳ್ಳಿಯ ಮುಖಂಡರಾದ ಬಸವಂತ್ರಾಯ ಗೌಡ ಮಾಲಿ ಪಾಟೀಲ ಮಾತನಾಡಿದರು. ಯಾಳವಾರ ಗ್ರಾಮದಿಂದ ಸೋಮನಾಥ ಹಳ್ಳಿಗೆ ಹೋಗಲು ಸಿಸಿ ರಸ್ತೆ ಹಾಗೂ ಚರಂಡಿ ರಸ್ತೆ ಅಗಲೀಕರಣ ಅವಶ್ಯಕವಾಗಿರುತ್ತದೆ. ಇಲಾಖೆ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ರಸ್ತೆಯ ಅಗಲೀಕರಣ ಕುರಿತು ಸ್ಥಳ ಮಾರ್ಕ ಮಾಡಿ ಹೋಗಿದ್ದಾರೆ. ರಸ್ತೆ ಬದಿಯಲ್ಲಿರುವ ಮನೆಗಳು ಮತ್ತು ಅನಧಿಕೃತ ಕಟ್ಟಡಗಳು ತೆರವುಗೊಳಿಸುವಂತೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ನೋಟಿಸ್ ನೀಡಿದರೂ ಕೂಡ ಅಲ್ಲಿಯ ಜನರು ತೆಗೆಯುತ್ತಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಕೂಡಲೇ ಮಾನ್ಯ ತಾಲೂಕ ದಂಡಾಧಿಕಾರಿಗಳು ನಮ್ಮ ಗ್ರಾಮಕ್ಕೆ ಹೋಗಲು ಸರಿಯಾದ ರಸ್ತೆ ಕಲ್ಪಿಸಿಕೊಡಬೇಕೆಂದು ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿದ್ದೇವೆ.

 

ಯಾಳವಾರ ಗ್ರಾಮದಿಂದ ಸೋಮನಾಥ್ ಹಳ್ಳಿಗೆ ಸಂಚರಿಸುವ ಸಾರ್ವಜನಿಕರು ತಮ್ಮ ಜೀವನ ಕೈಯಲ್ಲಿ ಹಿಡಿದುಕೊಂಡು ತಿರುಗಾಡುವಂತಾಗಿದೆ ಎಂದು ಹೇಳಿದರು. ರಸ್ತೆ ತುಂಬಾ ಚರಂಡಿ ನೀರು ಬಂದು ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಉಂಟು ಮಾಡುತ್ತದೆ ಅದಕ್ಕಾಗಿ ಕೂಡಲೇ ಪಕ್ಕದಲ್ಲಿರುವ ಮನೆಗಳನ್ನು ತೆರವುಗೊಳಿಸಿ ನಮ್ಮ ಗ್ರಾಮಕ್ಕೆ ರಸ್ತೆ ನಿರ್ಮಾಣ ಮಾಡುವ ಅವಕಾಶ ಮಾಡಿಕೊಡಬೇಕೆಂದು ಒತ್ತಾಯಿಸಿದರು.

 

ಒಂದು ವೇಳೆ ಅನುಕೂಲ ಮಾಡದೇ ಹೋದಲ್ಲಿ ಜಿಲ್ಲಾ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ಕೊಡುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ಸುಭಾಷ್ಚಂದ್ರ ಗೌಡ ಮಾಲಿಪಾಟೀಲ, ಧೂಳಪ್ಪ ಗೌಡ ಮಾಲಿ ಪಾಟೀಲ, ಅಯ್ಯಣಗೌಡ ಪೊಲೀಸ್ ಪಾಟೀಲ, ಗುರುನಾಥ ಕಣಮೇಶ್ವರ, ಕರೆಪ್ಪ ಪೂಜಾರಿ ಕಣಮೇಶ್ವರ, ಶಾಂತಪ್ಪ ಕಣಮೇಶ್ವರ, ಸಾಯಿಬಣ್ಣ ಕವಾಲ್ದಾರ, ಬಸವರಾಜ ಕಣಮೇಶ್ವರ, ಇಬ್ರಾಹಿಂ ಪಟೇಲ್, ಬಸವರಾಜ್ ಹಿರೇಗೌಡ, ಸೋಮನಾಥನ ಹಳ್ಳಿ ಗ್ರಾಮಸ್ಥರು ಮಹಿಳೆಯರು ಉಪಸ್ಥಿತರಿದ್ದರು..

ವರದಿ. ಬಸವರಾಜ್, ಹಿರೇಮಠ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;