ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಪಟ್ಟಣದಲ್ಲಿರುವ (ಸೆ-27) ಇಂದು ಪಟ್ಟಣದಲ್ಲಿ ಕೆ.ಆರ್.ಆರ್.ಎಸ್ ಹಾಗೂ ಡಿ.ಎಸ್.ಎಸ್ ಮತ್ತು ಸಿ.ಐ.ಟಿ.ಯು, ಸಿ.ಪಿ.ಐ ಸೇರಿದಂತೆ ವಿವಿಧ ಸಂಘಟನೆಗಳು ಇಂದು ಬೆಳಗ್ಗೆ 11ಗಂಟೆಯಿಂದ ಕೆಇಬಿ ವೃತ್ತದಿಂದ ಆರಂಭವಾದ ಪ್ರತಿಭಟನೆಯು ಖಾಸಗಿ ಬಸ್ ನಿಲ್ದಾಣವರೆಗೂ ಪ್ರತಿಭಟನೆ 12 ಘಂಟೆಯವರೆಗೂ ನಡೆಸಲಾಯಿತು. ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರಗಳು ಬೃಹತ್ ಉದ್ದಿಮೆದಾರರ ಏಜೆಂಟ್‌ರಂತೆ ಕೆಲಸ ನಡೆಸುತ್ತಿದೆ. ಅಲ್ಲದೇ ಸರ್ಕಾರಿ ಸ್ವಾಮ್ಯದ ಆಸ್ತಿಗಳನ್ನು ಖಾಸಗೀಕರಣ ಮಾಡುವ ಹುನ್ನಾರ ನಡೆಯುತ್ತಿದೆ. ಬಿಜೆಪಿ ಪಕ್ಷ ಆಡಳಿತ ನಡೆಸುತ್ತಿರುವ ರಾಜ್ಯಗಳಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದೆ. ಅಲ್ಲದೇ ಕೃಷಿಕರಿಗೆ, ಕಾರ್ಮಿಕರಿಗೆ ಮತ್ತು ಜನ ಸಾಮಾನ್ಯರಿಗೆ ವಿರೋಧವಾದಂಥ ಕಾಯ್ದೆಗಳನ್ನು ಜಾರಿಗೆ ತರುವ ಮೂಲಕ ಜನ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ. ಡಿಸೆಲ್, ಪೆಟ್ರೋಲ್, ಅಡುಗೆ ಅನಿಲ, ದಿನ ಬಳಕೆ ವಸ್ತುಗಳ ಬೆಲೆ ಏರಿಕೆಯಾಗಿವೆ. ನಿರುದ್ಯೋಗ, ಶಿಕ್ಷಣ ಆರೋಗ್ಯ ಕ್ಷೇತ್ರಗಳನ್ನು ಕಾರ್ಪೋರೇಟೀಕರಣ ಮಾಡುವ ಮೂಲಕ ಭೀಕರ ದುರಂತಕ್ಕೆ ಕೇಂದ್ರ ಸರ್ಕಾರ ಕಾರಣವಾಗುತ್ತಿದೆ. ಅಲ್ಲದೇ ಕೃಷಿ ಕಾನೂನುಗಳ ವಿರುದ್ಧ ರೈತರು ಕಳೆದ ಮತ್ತು ತಿಂಗಳುಗಳಿಂದ ದೇಶಾದ್ಯಂತ ಹೋರಾಟ ನಡೆಸುತ್ತಿದ್ದರೂ ಸಹ ಅದಕ್ಕೆ ಸ್ಪಂದಿಸದ ಕೇಂದ್ರ ಸರ್ಕಾರವು ತನ್ನ ಮೊಂಡುತನ ಪ್ರದರ್ಶಿಸುತ್ತಿದೆ. ಇಲ್ಲಿಯವರೆಗೂ ಸುಮಾರು 600ಕ್ಕೂ ಹೆಚ್ಚು ರೈತರು ಮೃತಪಟ್ಟಿದ್ದಾರೆ. ಆದರೂ ಕೇಂದ್ರ ಸರ್ಕಾರ ಯಾವುದೇ ಸ್ಪಂದನೆ ಮಾಡುತ್ತಿಲ್ಲ. ರೈತರಾದ ನಾವುಗಳು ಅವರ ಅವೈಜ್ಞಾನಿಕವಾದ ಯಾವುದೇ ಸಂಧಾನಕ್ಕೂ ಬಗ್ಗದೇ ಆಶ್ವಾಸನೆಯಿಂದ ನಮ್ಮ ಹೋರಾಟ ಮುಂದುವರಿಯಲಿದೆ. ರಾಷ್ಟ್ರಪತಿಗಳಾದ ತಾವುಗಳು ಮಧ್ಯ ಪ್ರವೇಶಿಸಿ ಅವೈಜ್ಞಾನಿಕ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯಲು ಕೇಂದ್ರ ಸರ್ಕಾರಕ್ಕೆಸೂಚಿಸುವುದರ ಮುಖಾಂತರ ರೈತರ ಹಿತ ಕಾಯಬೇಕು ಮೊಳಕಾಲ್ಮೂರು ತಾಲೂಕು ಕಚೇರಿಯ ಆವರಣದಲ್ಲಿ ತಹಸೀಲ್ದಾರ್ ಟಿ ಸುರೇಶ್ ಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು…

ವರದಿ. ಮಂಜುನಾಥ್, ಎಚ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
