ಬೈಕು, ಟಿವಿ, ಫ್ರಿಡ್ಜ್ ಹೊಂದಿದವರ ಪಡಿತರ ಚೀಟಿ ರದ್ದಾಗುವುದೇ? | ಕೊನೆಗೂ ಸ್ಪಷ್ಟನೆ ನೀಡಿದ ಇಲಾಖೆ
ಬೆಂಗಳೂರು: ಬೈಕು, ಟಿವಿ, ಫ್ರಿಡ್ಜ್ ಹೊಂದಿರುವ ಬಿಪಿಎಲ್ ಕಾರ್ಡ್ ದಾರರ ಕಾರ್ಡ್ ಗಳನ್ನು ರದ್ದುಪಡಿಸಲಾಗಿದೆ ಎನ್ನುವ ಮಾಧ್ಯಮ ವರದಿಗಳಿಗೆ ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಸ್ಪಷ್ಟನೆ ನೀಡಿದ್ದು, ಈ ವರದಿ ಸತ್ಯಕ್ಕೆ ದೂರವಾದದ್ದು ಎಂದು ಸ್ಪಷ್ಟಪಡಿಸಿದೆ.
ರಾಜ್ಯದಲ್ಲಿ ಬೈಕ್, ಟಿವಿ ಹಾಗೂ ಫ್ರಿಡ್ಜ್ ಹೊಂದಿದ್ದಾರೆ ಎಂಬ ಕಾರಣಕ್ಕೆ ಯಾವುದೇ ಅಂತ್ಯೋದಯ ಅನ್ನ ಮತ್ತು ಬಿಪಿಎಲ್ ಕಾರ್ಡ್ ಪಡಿತರ ಚೀಟಿದಾರರ ಕಾರ್ಡ್ ಗಳನ್ನು ರದ್ದುಪಡಿಸಿಲ್ಲ. ಬೈಕ್, ಟಿವಿ, ಫ್ರಿಡ್ಜ್ ಹೊಂದಿರುವ ಕುಟುಂಬಗಳು ಕೂಡ ಬಿಪಿಎಲ್ ಚೀಟಿ ಹೊಂದಲು ಸರ್ಕಾರದ ನಿಯಮದಲ್ಲಿ ಅವಕಾಶವಿದೆ ಎಂದು ಇಲಾಖೆಯು ತಿಳಿಸಿದೆ.
ಬೈಕ್, ಟಿವಿ ಹಾಗೂ ಫ್ರಿಡ್ಜ್ ಹೊಂದಿದ ಕುಟುಂಬಗಳ ಕಾರ್ಡ್ ರದ್ದುಪಡಿಸಲಾಗಿದೆ ಎನ್ನುವ ಸುದ್ದಿಗಳು ಆಧಾರ ರಹಿತವಾಗಿದೆ. ಇಂತಹ ಯಾವುದೇ ನಿರ್ದೇಶನ ಅಥವಾ ಆದೇಶಗಳನ್ನು ರಾಜ್ಯ ಸರ್ಕಾರ ಯಾವುದೇ ಜಿಲ್ಲೆಗೆ ನೀಡಿಲ್ಲ ಎಂದು ಇಲಾಖೆಯು ಸ್ಪಷ್ಟಪಡಿಸಿದೆ..

ವರದಿ.ಪ್ರತಾಪ್, ಸಿ, ಹರಪನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
