ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು ಪಟ್ಟಣದ ಗುರುಭವನದಲ್ಲಿ (ಸೆಪ್ಟೆಂಬರ್-5) ಸಾರ್ವಜನಿಕ ಶಿಕ್ಷಣ ಇಲಾಖೆ, ಶಿಕ್ಷಕರ ದಿನಾಚರಣೆ ಸಮಿತಿ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಶಿಕ್ಷಕರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಶಿಕ್ಷಕರ ಸೇವೆ ಅಮೂಲ್ಯವಾದದು. ಶಿಕ್ಷಕರಿಗೆ ಸಿಗುವ ಗೌರವ ಬೇರೆಲ್ಲಿಯೂ ಸಿಗುವುದಿಲ್ಲ. ಸಂಸ್ಕಾರ ವಂತರನಾಗಿಸಿ ಸಮಾಜ ನಿರ್ಮಾಣ ಮಾಡುವಲ್ಲಿ ಶಿಕ್ಷಕರ ಶ್ರಮ ಅವಿಸ್ಮರಣೀಯವಾದದು, ಸದೃಢವಂತ ಸಮಾಜ ನಿರ್ಮಾಣ ಮಾಡುವಲ್ಲಿ ಶಿಕ್ಷಕರ ಸೇವೆ ಹಿರಿದು ಎಂದು ತಹಸೀಲ್ದಾರ್ ಟಿ.ಸುರೇಶ ಕುಮಾರ್ ಹೇಳಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಯುವರಾಜ ನಾಯ್ಕ ಮಾತನಾಡಿ, ಸ್ಪರ್ಧಾತ್ಮಕ ಪ್ರಪಂಚದಲ್ಲಿ ಮಕ್ಕಳನ್ನು ಆಧುನಿಕ ಜಗತ್ತಿಗೆ ಪರಿಚಯಿಸುವಲ್ಲಿ ಶಿಕ್ಷಕರ ಸೇವೆ ಅಮೂಲ್ಯವಾದದು ಎಂದರು. ಕಸಾಪ ನಿಕಟ ಪೂರ್ವ ತಾಲೂಕು ಅಧ್ಯಕ್ಷ ಟಿ. ರೇವಣ್ಣ ಮಾತನಾಡಿ, ಶಿಕ್ಷಕರ ಸೇವೆ ಅಮೂಲ್ಯವಾದದು ಸರ್ಕಾರಿ ನೌಕರರಲ್ಲಿ ಶಿಕ್ಷಕರಿಗೆ ಸಿಗುವ ಗೌರವ ಬೇರೆಲ್ಲಿಯೂ ಸಿಗುವುದಿಲ್ಲ. ಮಕ್ಕಳನ್ನು ಸಂಸ್ಕಾರವಂತರನ್ನಾಗಿಸುವ ಉತ್ತಮ ದೇಶ ಕಟ್ಟುವ ಕಾರ್ಯದಲ್ಲಿ ನಿಮ್ಮಗಳ ಸೇವೆ ಅಪಾರವಾದದು ಎಂದು ತಿಳಿಸಿದರು. ತಾಪಂ ಇ.ಒ ಜಾನಕೀರಾಂ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷರು ಪಿ ಲಕ್ಷ್ಮಣ್ ಅಧ್ಯಕ್ಷ ವಹಿಸಿಕೊಂಡರು. ಸ್ವಾಗತ ಕಾರ್ಯಕ್ರಮ ಹನುಮಂತಪ್ಪ ಕ್ಷೇತ್ರ ಸಮನ್ವಯಾಧಿಕಾರಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಈರಣ್ಣ, ಕಾರ್ಯದರ್ಶಿ ಮಲ್ಲೇಶಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಜಿ.ಎನ್.ತಿಪ್ಪೇಸ್ವಾಮಿ, ಕಾರ್ಯದರ್ಶಿ ಪ್ರದೀಪ್ ಕುಮಾರ್, ಮಾಲೀಕ್ ಖಾಜಿ, ಗೌರವ ಅಧ್ಯಕ್ಷ ಎ.ಕೆ.ಸಣ್ಣಯಲ್ಲಪ್ಪ, ಶ್ರೀನಿವಾಸ ಮೂರ್ತಿ, ಬಿಆರ್‌ಪಿ ಶಿವಣ್ಣ, ಉಮೇಶಯ್ಯ, ಇಸಿಒ ಓಂಕಾರಪ್ಪ, ಚಂದ್ರಪ್ಪ, ಉಮೇಶ, ಸಿಪಿಒ ಶಿವಕುಮಾರ್, ಹಾಗೂ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರು ಓಬಣ್ಣ ಬಿ ನಿರೂಪಣೆ ಮಾಡಿದರು, ಎಂ.ಮಲ್ಲಿಕಾರ್ಜುನ, ಡಿ.ಬಿ.ಕೃಷ್ಣ ಮೂರ್ತಿ, ಸೇರಿದಂತೆ ಇನ್ನುಮುಂದಾದರೂ ಉಪಸ್ಥಿತರಿದ್ದರು…
ವರದಿ. ಮಂಜುನಾಥ್, ಎಚ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

