“ನಾಡು ರಕ್ಷಣೆಗಾಗಿ ಚಿತ್ರದುರ್ಗ ಚಲೋ”
ರಿಸನಂ 142 144 145 147 148, 149 ಸರ್ಕಾರಿ ಗೋಮಾಳವಾಗಿದ್ದು ಬೂದಿಯಳ್ಳಿ ಗ್ರಾಮದ ಜಾನುವಾರುಗಳ ಮೇವಿನ ಕೊರತೆಯನ್ನು ನೀಗಿಸಲು ಸರ್ಕಾರಿ ಗೋಮಾಳವನ್ನು ಕಾಯ್ದಿರಿಸಿದೆ ಇತ್ತೀಚಿಗೆ ಗ್ರಾಮದ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ತಾವು ಜಮೀನು ಹೊಂದಿದ್ದರೂ ಸಹ ಸರ್ಕಾರದ ಗೋಮಾಳವನ್ನುಉಳಿಮೆ ಮಾಡುವ ಮೂಲಕ ಸಾವಿರಾರು ಜಾನುವಾರುಗಳ ಮೇವಿಗೆ ಕಂಟಕವಾಗಿದ್ದಾರೆ ಗ್ರಾಮದ ಸದರಿ ಜಮೀನು ಬಿಟ್ಟರೆ ಬೇರೆ ಎಲ್ಲೂ ಜಮೀನು ಇಲ್ಲದ ಕಾರಣ ಸಾವಿರಾರು ಜಾನುವಾರುಗಳಿಗೆ ಸರ್ಕಾರಿ ಗೋಮಾಳ ಆಸರೆಯಾಗಿದೆ ಇದನ್ನು ತೆರವುಗೊಳಿಸಲು 2003ರಲ್ಲಿ ಮಾನ್ಯ ಉಚ್ಚ ನ್ಯಾಯಾಲಯ ನಿರ್ದೇಶನ ನೀಡಿತ್ತು ತೆರವು ಗೊಳಿಸಲು ಹಾಗೂ 7 ಏಪ್ರಿಲ್ 2021 ರಂದು ಮಾನ್ಯ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಸಹ ಆದೇಶ ನೀಡಿತ್ತು ಅನರ್ಹರನ್ನ ತೆರವು ಗೊಳಿಸಲು ಆದರೂ ಸಹ ಯಾವುದೇ ತೆರವು ಕಾರ್ಯಾಚರಣೆ ಕಾರ್ಯ ಆರಂಭಿಸದೆ ನ್ಯಾಯಾಲಯದ ಆದೇಶ ಪಾಲಿಸದೇ ಕಾನೂನು ಉಲ್ಲಂಘನೆ ಮಾಡುತಿದ್ದರೆ ಅಂದ್ರೆ ಯಾವುದೇ ನ್ಯಾಯಲಯದ ಆದೇಶವನ್ನು 30 ದಿನದ ಒಳಗಡೆ ಆದೇಶವನ್ನ ಪಾಲಿಸಬೇಕು ಪಾಲಿಸಿಲ್ಲವಾದ್ರೆ ಕಾನೂನು ಉಲ್ಲಂಘನೆ ಮಾಡಿದಂತೆ ಅದ ಕಾರಣ ಬೂದಿಹಳ್ಳಿ ಗ್ರಾಮಸ್ಥರಾದ ತಾವುಗಳು ಮಾನ್ಯ ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿಗಳು ತಾಸಿಲ್ದಾರರು ಹಾಗೂ ಪೊಲೀಸ್ ಅಧೀಕ್ಷಕರಿಗೂ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿರುವುದಿಲ್ಲ ಆದಕಾರಣ 20 ಜುಲೈ 2021 ರಂದು ಬೂದಿಹಳ್ಳಿಯಿಂದ ಚಿತ್ರದುರ್ಗದ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿತ್ತು ಆದರೆ ಆ ದಿನ ಮಾನ್ಯ ತಾಸಿಲ್ದಾರರು ಹಾಗೂ ಪರಶುರಾಂಪುರ ಪೊಲೀಸ್ ಉಪನಿರೀಕ್ಷಕರು ತಮ್ಮ ಗ್ರಾಮಕ್ಕೆ ಭೇಟಿ ನೀಡಿ ಇನ್ನು 15 ದಿನಗಳು ಕಾಲಾವಕಾಶ ಬೇಕು ಹಾಗೂ ಇನ್ನು 15 ದಿನದೊಳಗೆ ತೆರವುಗೊಳಿಸುತ್ತವೇ ಎಂದು ಸಮಯಾವಕಾಶವನ್ನು ತೆಗೆದುಕೊಂಡು ನಮ್ಮ ಪಾದಯಾತ್ರೆಯನ್ನು ನಿಲ್ಲಿಸಿದ್ದರು ಆದರೆ 15 ದಿನ ಮುಗಿದರು ಯಾವುದೇ ತೆರವು ಕಾರ್ಯಾಚರಣೆ ಆರಂಭಿಸಲು ಹಾಗೂ ಕನಿಷ್ಠಪಕ್ಷ ನಮ್ಮೂರಿಗೆ ಭೇಟಿ ಸಹ ಮಾಡಿರುವುದಿಲ್ಲ ತಾವು 15 ದಿನಗಳೊಳಗೆ ಸುಮಾರು ಐದರಿಂದ ಆರು ಸಾರಿ ತಾಸಿಲ್ದಾರ ಕಚೇರಿಗೆ ಅಲೆದು ಅವರನ್ನು ಭೇಟಿ ಮಾಡಿ ನಮ್ಮೂರಿನ ಬಗ್ಗೆ ಸುಮಾರು ಸಾರಿ ಹೇಳಿ ಮಾನ್ಯ ಜಿಲ್ಲಾಧಿಕಾರಿಗಳ ನ್ಯಾಯಾಲಯದ ಆದೇಶ ಪ್ರತಿಯನ್ನು ಸಲ್ಲಿಸಿ ಇದರ ಬಗ್ಗೆ ಕೋರಿಕೆ ಮಾಡಿಕೊಂಡಿದ್ದರು ಸಹ ಅವರು ಸುಮ್ಮನೆ ಸಬೂಬು ನೀಡಿ ಯಾವುದೇ ಸಮಸ್ಯೆಯನ್ನು ಬಗೆಹರಿಸಿಲ್ಲ ಆದಕಾರಣ ತಾವುಗಳು ಇದೇ 10ಆಗಸ್ಟ್ 2021 ರಂದು ರಂದು ಬೂದಿಹಳ್ಳಿ ಗ್ರಾಮದಿಂದ ಮಾನ್ಯ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ಜಾನುವಾರುಗಳೊಂದಿಗೆ ಅನಿರ್ದಿಷ್ಟಾವಧಿ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿತ್ತು ಆದ್ರೆ ದಿನಾಂಕ 09ಆಗಸ್ಟ್ 2021 ರಂದು ಮಾನ್ಯ ತಹಸೀಲ್ದಾರ್ ಬೂದಿಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಇನ್ನು 10 ದಿನದ ಒಳಗಾಗಿ ತೆರವು ಗೊಳಿಸುತ್ತೇನೆ ನನ್ನನ್ನು ನಂಬಿ ಎಂದು ಹೇಳಿ ಹೋಗಿದ್ದು ಅಷ್ಟೇ 15 ದಿನ ಕಳೆದರು ಯಾವುದೇ ತೆರವು ಕಾರ್ಯಾಚರಣೆ ಹಾಗಿಲ್ಲ ಇದಕ್ಕೆ ನಮಗೆ ಯಾವುದೇ ಸಂಬಂಧ ಇಲ್ಲ ಅನ್ನುವ ಹಾಗೆ ಇದ್ದರೆ ಆದಕಾರಣ ನಾವು ಇದೆ 25 ಆಗಸ್ಟ್ 2021 ರಂದು “ನಾಡು ರಕ್ಷಣೆಗಾಗಿ ಚಿತ್ರದುರ್ಗ ಚಲೋ “ಎನ್ನುವ ಶೀರ್ಷಿಕೆಯಡಿ ಬೂದಿಹಳ್ಳಿ ಇಂದ ಚಿತ್ರದುರ್ಗದ ವರೆಗೂ ಸಾವಿರಾರು ಜಾನುವಾರುಗಳೊಂದಿಗೆ ಪಾದಯಾತ್ರೆ ಹಮ್ಮಿಕೊಳ್ಳಲು ಬೂದಿಹಳ್ಳಿ ಗ್ರಾಮಸ್ಥರ ತೀರ್ಮಾನಿಸಿದ್ದೇವೆ ಹಾಗೂ ಅದೇ ರೀತಿಯಾಗಿ ಮಾನ್ಯ ಉಚ್ಚ ನ್ಯಾಯಾಲಯದಲ್ಲಿಆದೇಶ ಪಾಲಿಸದ ಕಾರಣ ಭ್ರಷ್ಟ ಅಧಿಕಾರಿಗಳ ವಿರುದ್ಧ ಕಾನೂನು ಹೋರಾಟ ಸಹ ಮಾಡಬೇಕೆಂದು ನಮ್ಮ ಹಳ್ಳಿ ಗ್ರಾಮದ ಕಾನೂನು ಸಮಿತಿ ತೀರ್ಮಾನ ಕೈಗೊಳ್ಳಲಾಗಿದೆ…

ವರದಿ. ಶಶಿಕುಮಾರ್ ಚಳ್ಳಕೆರೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
