;

ಭಾರತದ ಇತಿಹಾಸದಲ್ಲಿ ಇದುವರೆಗಿನ ಅತ್ಯಂತ ಆದರ್ಶ ಹಾಗೂ ಸುಂದರ ದಂಪತಿಗಳು ಫುಲೆ ದಂಪತಿಗಳು…!!!

ಭಾರತದ ಇತಿಹಾಸದಲ್ಲಿ ಇದುವರೆಗಿನ ಅತ್ಯಂತ ಆದರ್ಶ ಹಾಗೂ ಸುಂದರ ದಂಪತಿಗಳು ಫುಲೆ ದಂಪತಿಗಳು..

ಸಂಧರ್ಭ: ಕಪಲ್ ಚಾಲೆಂಜ್

ಸುಮಾರು ಒಂದು ವರ್ಷದಿಂದ ಫೇಸ್ಬುಕ್ ನಲ್ಲಿ ಕಪಲ್ ಚಾಲೆಂಜ್ ನಡಿತಿದೆ. ಎಲ್ಲರು ತಮ್ಮ ತಮ್ಮ ಮಡದಿಯರ, ಗೆಳೆಯ-ಗೆಳತಿಯರ, ನೆಚ್ಚಿನ ಸಿನಿಮಾ ನಟ-ನಟಿಯರ, ಕ್ರಿಡಾಪಟುಗಳ ಜೋಡಿ ಫೋಟೋ ಹಾಕಿ ಕಪಲ್ ಚಾಲೆಂಜ್ ನಲ್ಲಿ ಭಾಗವಹಿಸುತಿದ್ದಾರೆ. ನಾನು ಸಹ ನನ್ನ ಜೀವನ ಸಂಗಾತಿಯ ಜೋತೆಗಿರುವ ಫೋಟೋ ಹಾಕಿ ಈ ಕಪಲ್ ಚಾಲೆಂಜಿನಲ್ಲಿ ಭಾಗವಹಿಸಿದ್ದೆ.

ಆದರೆ ನನ್ನ ಪ್ರಕಾರ ಭಾರತದ ಇತಿಹಾಸದಲ್ಲಿ ಅತ್ಯಂತ ಆದಶ೯ ಹಾಗೂ ಸುಂದರ ದಂಪತಿಗಳೆಂದರೆ ರಾಷ್ಟ್ರಪಿತಾ ಜ್ಯೋತಿಬಾ ಫುಲೆ ಹಾಗೂ ವಿಧ್ಯಾ ಮಾತೆ ಸಾವಿತ್ರಿಬಾಯಿ ಫುಲೆ.

ಫುಲೆ ದಂಪತಿಗಳು ಒಂದು ಆದಶ೯ವಾದ ಜೀವನವನ್ನು ನಡೆಸಿ ಪತಿ-ಪತ್ನಿ ಹೇಗಿರಬೇಕು ಎಂದು ತೋರಿಸಿಕೊಟ್ಟಿದ್ದಾರೆ. ಇಬ್ಬರೂ ಪ್ರತಿಯೊಂದು ಹಂತದಲ್ಲೂ ಸಮಾನ ಜೀವನವನ್ನು ನಡೆಸಿದರು.ಸ್ವಾತಂತ್ರ ಚಿಂತನೆಯ ಈ ದಂಪತಿಗಳು ಸಂಪ್ರದಾಯವಾದಿಗಳ ದಬ್ಬಾಳಿಕೆಯ ಕಾಲದಲ್ಲಿ ಹೆಣ್ಣು ಕೆವಲ ಮನೆಯ ಕೆಲಸ ಮಾಡಬೇಕು, ತನ್ನ ಗಂಡನ ಸೇವೆಯಲ್ಲಿ ಇಡಿ ಜೀವನ ಕಳೆಯಬೆಕು ಎಂಬ ಸಂಪ್ರದಾಯವನ್ನು ಮುರಿದು ತೋರಿಸಿದರು. ಕೇವಲ ಪುರುಷ ಮಾತ್ರ ಹೋರಗಡೆ ಕೆಲಸ ಮಾಡಬೇಕು ಎಂಬ ಅವಧಾರಣೆಯನ್ನು ಅವರು ನಿರಾಕರಿಸಿದರು. ಸ್ವತಃ ಜೋತಿರಾವ್ ಫುಲೆ ಮತ್ತು ಸಾವಿತ್ರಿಬಾಯಿ ಫುಲೆ ತಮ್ಮ ಜೀವನದುದ್ದಕ್ಕೂ ವೈಯಕ್ತಿಕ ಜೀವನ ಮತ್ತು ಸಾಮಾಜಿಕ ಜೀವನದ ಹೋರಾಟಗಳಲ್ಲಿ ಹೆಗಲಿಗೆ ಹೆಗಲುಕೊಟ್ಟು ಕೆಲಸ ಮಾಡಿದರು. ಇಬ್ಬರನ್ನು ಒಟ್ಟಿಗೆ ಮನೆಯಿಂದ ಹೊರಹಾಕಲಾಯಿತು. ಪುಣೆಯಲ್ಲಿ ಇಬ್ಬರು ಸೇರಿ ಗಾರೆ ಕೆಲಸ ಮಾಡಿದರು, ಒಟ್ಟಿಗೆ ಶಾಲೆಗಳನ್ನು ತೆರೆದರು. ಭ್ರೂಣ ಹತ್ಯೆ ತಡೆಯಲು ವಿಧವೆಯರಿಗಾಗಿ ವಿಧವಾ ಆಶ್ರಮ ತೆರೆದರು. ಇಬ್ಬರೂ ಸೇರಿ ಸತ್ಯಶೋಧಕ ಸಮಾಜವನ್ನು ಸ್ಥಾಪಿಸಿದರು. ಇಬ್ಬರೂ ಸತ್ಯಶೋಧಕ ವಿವಾಹ ವ್ಯವಸ್ಥೆಯ ರಚನೆಯಲ್ಲಿ ಪಾತ್ರವಹಿಸಿದರು. ಬರಗಾಲ ಪೀಡಿತರಿಗೆ ಸಹಾಯ ಮಾಡಲು ಇಬ್ಬರೂ ಒಟ್ಟಿಗೆ ಹೊರಟರು ಮತ್ತು ಯಾರು ಏನು ಹೇಳುತ್ತಾರೆಂದು ಚಿಂತಿಸದೆ ಅವರು ಸಂಪೂರ್ಣ ಸಮರ್ಪಣೆಯೊಂದಿಗೆ ವಿವಿಧ ಸ್ಥಳಗಳಲ್ಲಿ ಮಾನವ ಸೇವೆಯ ಮಹತ್ಕಾರ್ಯದಲ್ಲಿ ತೊಡಗಿದರು. ಅಂದರೆ, ಜೀವನದ ಪ್ರತಿ ಹೆಜ್ಜೆಯಲ್ಲೂ ಇಬ್ಬರೂ ಸಮಾನ ಜವಾಬ್ದಾರಿಗಳನ್ನು ಮತ್ತು ಕರ್ತವ್ಯಗಳನ್ನು ನಿರ್ವಹಿಸುವಾಗ ಪರಸ್ಪರ ಬೆಂಬಲಿಸುತ್ತಲೇ ಇದ್ದರು. ಇಬ್ಬರು ಶೂದ್ರ-ಅತಿಶೂದ್ರ ಮತ್ತು ಮಹಿಳೆಯರಿಗಾಗಿ ತಮ್ಮ ಪ್ರಾಣವನ್ನೆ ಅರ್ಪಿಸಿದರು. ಇಬ್ಬರಲ್ಲಿಯು ಆಧುನಿಕ ಪ್ರಜ್ಞೆ ಹಾಗೂ ಮಾನವ ಸಂವೇದನೆಯಿಂದ ಕೂಡಿದ ಶ್ರೇಷ್ಠ ವ್ಯಕ್ತಿತ್ವ ಅಡಗಿತು. ಸ್ವಾತಂತ್ರ್ಯ, ಸಮಾನತೆ ಮತ್ತು ನ್ಯಾಯ ಅವರ ಜೀವನದ ಆದಶ೯ಗಳಾಗಿದ್ದವು. ಇವು ಭಾರತದ ಪ್ರತಿಯೊಂದು ನಾಗರಿಕರಿಗೆ ಸಿಗಬೇಕೆಂಬುದು ಅವರ ಕನಸಾಗಿತ್ತು. ಇಬ್ಬರದ್ದು ಒಂದೇ ಕನಸು, ಒಂದೇ ಉದ್ದೇಶ, ಒಂದೆ ಮಾಗ೯ ಹಾಗೂ ಒಂದೇ ಗುರಿ ಇತ್ತು.

ಈ ದೇಶವು ವರ್ಣ ಹಾಗೂ ಜಾತಿಪದ್ಧತಿಯ ಆಮಲಿನಲ್ಲಿ ಇರುತಿರಲಿಲ್ಲ ಅಂದರೆ, ಮೇಲ್ಜಾತಿ ಮನಸ್ಥಿತಿಯ ಚಿಂತಕರ-ಬರಹಗಾರರ ಪ್ರಾಬಲ್ಯವಿಲ್ಲದಿದ್ದರೆ, ಈ ದೇಶದ ಜನರಿಗೆ ಫುಲೆ ದಂಪತಿಗಳು ಆದರ್ಶ ದಂಪತಿಗಳು ಎಂದು ಕಲಿಸಲಾಗುತ್ತಿತ್ತು ಮತ್ತು ಅವರು ತೋರಿಸಿದ ಮಾರ್ಗವನ್ನು ಅನುಸರಿಸಿ ಅವರಿಂದ ಪ್ರೇರಣೆ ಪಡೆಯಲಾಗುತಿತ್ತು…

ವರದಿ. ಪ್ರತಾಪ್, ಸಿ, ಹರಪನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;