- ಉತ್ತರ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕದಲ್ಲಿ ಪಕ್ಷ ಬಲವರ್ಧನೆಯ ಪ್ರಕ್ರಿಯೆ
ಜೆ ಡಿ ಎಸ್ ನಾಯಕರಾದ ಮಾಜಿ ಮುಖ್ಯಮಂತ್ರಿ ಗಳಾದ ಶ್ರೀಯುತ ಕುಮಾರಸ್ವಾಮಿ ಇತ್ತೀಚೆಗೆ ಬೇಟಿಮಾಡಿದ್ದೆವು. ಪಕ್ಷದ ಜವಾಬ್ದಾರಿ ಕೊಟ್ಟ ಹಿನ್ನೆಲೆಯಲ್ಲಿ ಹೈದರಾಬಾದ್ ಕರ್ನಾಟಕದ ವೀಕ್ಷಕರನ್ನಾಗಿ ಹೂವಿನ ಹಡಗಲಿ ತಾಲೂಕಿನ ಯುವ ಮುಖಂಡರಾದ ಪುತ್ರೇಶ್ ಅವರನ್ನ ನೇಮಕ ಮಾಡಿದೆ.ಅದೇ ಹಿರಿಯರಾದ ನಾಡಗೌಡ್ರು, ಬಂಡೆಪ್ಪ,ರಾಜುವೆಂಕಟಪ್ಪ ನಾಯಕರು,ಮಾಜಿ ಶಾಸಕ ಬೊಮ್ಮಣ್ಣ ಎಲ್ಲರೂ ಸೇರಿ ವಿಜಯನಗರ ಜಿಲ್ಲೆ ಹೊಸ ಜಿಲ್ಲೆಯಾಗಿರುವುದರಿಂದ ಜಿಲ್ಲಾಧ್ಯಕ್ಷರ ನೇಮಕ ಮತ್ತು ಉತ್ತರ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕದ ಭಾಗದಲ್ಲಿ ಪಕ್ಷದ ಬಲವರ್ಧನೆಗಾಗಿ ಮತ್ತು ಎಲ್ಲಾ ರೀತಿಯ ಶಕ್ತಿ ತುಂಬುವ ಹೋರಾಟಗಾರರು ಮತ್ತು ಉದ್ಯಮಿಗಳನ್ನ ಪಕ್ಷಕ್ಕೆ ಸೆಳೆಯುವ,ಹಾಗೂ ಕವಿರಾಜ್ ಅರಸು ಹೊಸಪೇಟೆ ಇವರನ್ನು ಪಕ್ಷಕ್ಕೆ ಸೇರ್ಪಡೆ ಮಾಡುವ ಕುರಿತು ಮತ್ತು ಕುಮಾರಸ್ವಾಮಿ ಅವರೊಂದಿಗೆ ಮಾತು ಕತೆ ಆಗಿದೆ,ಅವರನ್ನ ಗೌರವಯುತವಾಗಿ ಪಕ್ಷದ ಜವಾಬ್ದಾರಿ ನೀಡುವ ಕುರಿತು ಚರ್ಚೆ ಮಾಡಲಾಯಿತು. ಒಟ್ಟಾರೆ ಹೈದರಾಬಾದ್ ಕರ್ನಾಟಕ ಮತ್ತು ಉತ್ತರ ಕರ್ನಾಟಕದ ಪಕ್ಷ ಬಲವರ್ಧನೆಗೆ ಪ್ರಮಾಣಕ ಹೋರಾಟಗಾರರು ,ಮಾಜಿ ಮಂತ್ರಿಗಳು,ಮಾಜಿ ಶಾಸಕರು ಮತ್ತು ಉದ್ಯಮಿಗಳನ್ನ ಕುಮಾರಸ್ವಾಮಿ ಅವರ ಮಾರ್ಗದರ್ಶನದಂತೆ ಪಕ್ಷಕ್ಕೆ ಕರೆತರುವ ಪ್ರಕ್ರಿಯೆ ಈಗ ನಡಿತಾ ಇದೆ.
ಉತ್ತರ ಕರ್ನಾಟಕ ಮತ್ತು ಹೈದ್ರಾಬಾದ್ ಕರ್ನಾಟಕ ಕ್ಕೆ ಹೆಚ್ಚಿನ ಅನುದಾನವನ್ನ ಕೊಟ್ಟವರು ಸನ್ಮಾನ್ಯ ದೇವೆಗೌಡದರು.ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಿಗೆ ಕುಡಿಯುವ ನೀರಿನ ಸೌಲಭ್ಯ ಆಲಮಟ್ಟಿ ಜಲಾಶಯದ ಮೂಲಕ ಸಾಧ್ಯವಾಗಿದೆ.ಕೃಷ್ಣ ಮೇಲ್ದಂಡೆ ಯೋಜನೆ.ಇವುಗಳನ್ನ ಸ್ಮರಿಸುತ್ತಾ ಹಿರಿಯರ ಮಾರ್ಗ ದರ್ಶನದಲ್ಲಿ ಪಕ್ಷವನ್ನು ಕಟ್ಟುವ ಪ್ರಯತ್ನ ನಡೆಯುತ್ತಿದೆ ಎಂದು ಯುವ ಮುಖಂಡರಾದ ಶ್ರೀ ಪುತ್ರೇಶ್ ಅವರು ಮಾಹಿತಿ ಅಂಚಿಕೊಂಡರು…

ವರದಿ. ಅಜಯ್, ಚ. ಹೂವಿನಹಡಗಲಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
