;

ಬಿ,ಜೆ,ಪಿ,ಸರ್ಕಾರದ ಕಳೆದೆರಡು ವರ್ಷಗಳಿಂದ ಆಡಳಿತದ ಬಗ್ಗೆ ಜನಾಭಿಪ್ರಾಯ ಮತ್ತು ಜನಾಶೀರ್ವಾದ…!!!

ಜನಾಭಿಪ್ರಾಯ ಮತ್ತು ಜನಾಶೀರ್ವಾದ

ದೇಶದಾದ್ಯಂತ ಕೇಂದ್ರ ಸಚಿವರನ್ನು ಪರಿಚಯಿಸುವ ಮತ್ತು ಸರ್ಕಾರದ ವಿವಿಧ ಯೋಜನೆಗಳನ್ನು ಪ್ರಚುರಪಡಿಸುವ ಉದ್ದೇಶದಿಂದ ಜನಾಶೀರ್ವಾದ ಯಾತ್ರೆ ‘ ಅರಂಭಿಸಿದೆ ಇದು ರಾಜ್ಯದ ಸರಣಿ ಚುನಾವಣೆಗಳಿಗೆ ಬಿಜೆಪಿ ತಂತ್ರ.!

ಕೇಂದ್ರದ ನವೀಕರಿಸಬಹುದಾದ ಇಂಧನ ಮೂಲ, ರಾಸಾಯನಿಕ ಮತ್ತು ರಸಗೊಬ್ಬರ ರಾಜ್ಯ ಖಾತೆಯ ನೂತನ ಸಚಿವ, ಲಿಂಗಾಯತ ಮುಖಂಡ ಭಗವಂತ ಖೂಬಾ ನೇತೃತ್ವದಲ್ಲಿ ಬೀದರ್ ನಲ್ಲಿ ಜನಾಶೀರ್ವಾದ ಯಾತ್ರೆ ಕೈಗೊಂಡರು. ಈ ಪ್ರದೇಶದಲ್ಲಿ ಸಮುದಾಯದ ಸಂಖ್ಯೆ ಅಧಿಕವಾಗಿದೆ. ಜನಾಶೀರ್ವಾದ ಯಾತ್ರೆಯನ್ನು ಕೋವಿಡ್ ನಿಮಯಗಳ ಉಲ್ಲಂಘಿಸಿ ಮಾಡಿದ‌ ಕಾರಣ ನಗರದ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಕೋವಿಡ್ ಸೋಂಕು ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಎಲ್ಲ ರೀತಿಯ ಬಹಿರಂಗ ಸಭೆ, ಸಮಾವೇಶ, ಸಮಾರಂಭ ಮತ್ತು ಕಾರ್ಯಕ್ರಮಗಳಿಗೆ ನಿರ್ಬಂಧ ವಿಧಿಸಲಾಗಿದೆ. ಮೇಲಾಗಿ ಮಹಾರಾಷ್ಟ್ರದ ಗಡಿ ಹೊಂದಿಕೊಂಡಿದ್ದರಿಂದ ರಾತ್ರಿ 9ರಿಂದ ಕರ್ಫ್ಯೂ ಕೂಡ ಜಾರಿ ಮಾಡಲಾಗಿದೆ. ಆದರೆ, ಇಲ್ಲಿನ ವೀರಶೈವ ಕಲ್ಯಾಣ ಮಂಟಪದಲ್ಲಿ ಮಂಗಳವಾರ ರಾತ್ರಿ ಕೋವಿಡ್ ನಿಯಮಾವಳಿಗಳು ಹಾಗೂ ರಾತ್ರಿ ಕರ್ಫ್ಯೂ ಲೆಕ್ಕಿಸದೆ 9 ಗಂಟೆ ನಂತರವೂ ಜನಾಶೀರ್ವಾದ ಯಾತ್ರೆಯ ಸಮಾರಂಭ ನಡೆಸಹಾರಿಸಲಾಗಿದೆ. ರಾಜಕಾರಣಿಗಳು ಯಾವುದಾದರೂ ಕಾರ್ಯಕ್ರಮಗಳಿಗೆ ಹೋದರೆ ಹೂ ಮಾಲೆ ಹಾಕಿ, ಪುಷ್ಪ ಗುಚ್ಛ ನೀಡಿ ಸ್ವಾಗತ ಮಾಡುತ್ತಾರೆ. ಆದರೆ, ಕೇಂದ್ರ ಸಚಿವ ಭಗವಂತ್ ಖೂಬಾ ಅವರಿಗೆ ಸ್ಥಳೀಯರು ಬಂದೂಕು ನೀಡಿ, ನಾಡ ಬಂದೂಕಿನಿಂದ ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ವಿಭಿನ್ನವಾಗಿ ಸ್ವಾಗತವನ್ನ ಕೋರಿದ್ದಾರೆ.
ಖೂಬಾ ಆಗಮನ ಹಿನ್ನಲೆಯಲ್ಲಿ ಅಲ್ಲಿನ ಕಾರ್ಯಕರ್ತರು ನಾಡ ಬಂದೂಕುಗಳನ್ನು ಸಿದ್ಧ ಮಾಡಿಕೊಂಡಿದ್ದರು. ಜೆಸಿಬಿಗಳ ಮೂಲಕ ಪುಷ್ಪ ವೃಷ್ಟಿ ಮಾಡಿದರು. ಪಟಾಕಿ ಹೊಡೆದು ಅದ್ದೂರಿ ಸ್ವಾಗತ ಮಾಡಿದರು. ಹಾಗೂ ನೂರಾರು ಕಾರ್ಯಕರ್ತರ ಮಧ್ಯೆ ಗಾಳಿಯಲ್ಲಿ ಗುಂಡು ಹಾರಿಸಿದ್ದು, ಇದೀಗ ವಿವಾದಕ್ಕೆ ಕಾರಣವಾಗಿದೆ. ಕೇಂದ್ರ ಸಚಿವ ಭಗವಂತ ಖೂಬಾಗೆ ಮಾಜಿ ಸಚಿವ ಬಾಬೂರಾವ್ ಚಿಂಚನಸೂರು, ಶಾಸಕರಾದ ರಾಜೂಗೌಡ, ವೆಂಕಟರೆಡ್ಡಿ ಮುದ್ನಾಳ ಸೇರಿದಂತೆ ಸ್ಥಳೀಯ ಮುಖಂಡರು ಸಾಥ್ ನೀಡಿದ್ದರು.
ಇನ್ನು, ಸರ್ಕಾರಿ ಕಾರ್ಯಕ್ರಮದಲ್ಲಿ ಹೂ ಹಾಗೂ ಪುಷ್ಪ ಗುಚ್ಛಗಳನ್ನು ಬಳಸದಂತೆ ಬದಲಾಗಿ ಪುಸ್ತಕಗಳನ್ನ ನೀಡಬೇಕು ಎಂದು ನೂತನ ಸಿಎಂ ಬಸವರಾಜ್ ಬೊಮ್ಮಾಯಿ ಅವರೇ ಸ್ವತಃ ಸೂಚನೆ ನೀಡಿ ಆದೇಶವನ್ನು ಮಾಡಿದ್ದಾರೆ. ಆದರೂ ಕೂಡ ಬಿಜೆಪಿಯ ಜನಾಶೀರ್ವಾದ ಯಾತ್ರೆಯಲ್ಲಿ ಜೆಸಿಬಿ ಮೂಲಕ ನಾಯಕನಿಗೆ ಹೂಗಳನ್ನು ಸುರಿಸಲಾಗಿದ್ದು, ಗುಂಡು ಹಾರಿಸಲಾಗಿದೆ.

ನಾಡ ಬಂದೂಕಿನಿಂದ ಗುಂಡು ಹಾರಿಸಿದ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರ ವಿರುದ್ಧ ಪ್ರಕರಣವನ್ನ ದಾಖಲು ಮಾಡಿಕೊಂಡಿದ್ದು, ನಾಲ್ವರನ್ನೂ ಬಂಧಿಸಿದ್ದಾರೆ. ಮತ್ತು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಇಲಾಖೆ ಸಿಬ್ಬಂದಿಗಳನ್ನು ಅಮಾನತುಗೊಳಿದ ವಿಷಯ ಗುರುವಾರ ಬೆಳಗ್ಗೆ ಬಹಿರಂಗವಾಗುತ್ತಿದ್ದಂತೆ ಮಾಜಿ ಸಚಿವ ಬಾಬುರಾವ್ ಚಿಂಚನಸೂರ ಕೈಯಲ್ಲಿ ಬಂದೂಕು ಹಿಡಿದಿದ್ದು ಇನ್ನೊಂದು ವಿವಾದಕ್ಕೆ ಕಾರಣವಾಗಿದೆ.
ಆದರೆ, ಅಮಾಯಕ ನಾಲ್ಕು ಜನರ ಮೇಲೆ ಪ್ರಕರಣ ದಾಖಲಿಸಿ ಜೈಲಿಗಟ್ಟಿದ್ದು ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಪ್ರಯೋಗ ಮಾಡಿದಂತೆ ಮೂರು ಜನ ಪೊಲೀಸರನ್ನು ಅಮಾನತುಗೊಳಿಸಿದ್ದು, ಸ್ಥಳದಲ್ಲಿದ್ದ ಹಿರಿಯ ಪೊಲೀಸ ಅಧಿಕಾರಿಗಳು ಎಲ್ಲಾ ಘಟನಾವಳಿಗಳನ್ನು ಗಮನಿಸಿ ಯೂ ಏಕೆ ತಡೆಯಲಿಲ್ಲ ಎನ್ನುವ ಕುರಿತು ತೀವ್ರ ಅಸಮಾಧಾನ ವ್ಯಕ್ತವಾಗುತ್ತಿದೆ.

ಇನ್ನೊಂದೆಡೆ ಇಂಡಿಯಾ ಟುಡೇಯ “ಮೂಡ್ ಆಫ್ ದಿ ನೇಷನ್” ಸಮೀಕ್ಷೆಯ ಪ್ರಕಾರ, ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆಯ ರೇಟಿಂಗ್ ಒಂದು ವರ್ಷದಲ್ಲಿ ಶೇ.66 ರಿಂದ ಶೇ.24 ಕ್ಕೆ ಇಳಿದಿದೆ ಎಂದು ತಿಳಿದುಬಂದಿದೆ. ಕೋವಿಡ್ -19 ಬಿಕ್ಕಟ್ಟಿನ ನಿರ್ವಹಣೆಯನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರ ಸರಿಯಾಗಿ ನಿಭಾಯಿಸಿಲ್ಲ ಎಂದು ಸಮೀಕ್ಷೆಯಲ್ಲಿ ಜನ ಪ್ರತಿಕ್ರಿಯೆ ನೀಡಿರುವುದು ನರೇಂದ್ರ ಮೋದಿ ಅವರ ಜನಪ್ರಿಯತೆಯ ರೇಟಿಂಗ್ ಕಡಿಮೆಯಾಗಲು ಪ್ರಾಥಮಿಕ ಕಾರಣವಾಗಿದೆ ಎಂದು ಹೇಳಲಾಗಿದೆ.

ಅಜಯ.ಚ
(ಹುಗಲೂರು)
ಹೂವಿನ ಹಡಗಲಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;