;

46.1 ಲಕ್ಷ ಮೊಬೈಲ್ ಬಳಕೆದಾರರನ್ನು ಕಳೆದುಕೊಂಡ ಏರ್ ಟೆಲ್!..!!!

46.1 ಲಕ್ಷ ಮೊಬೈಲ್ ಬಳಕೆದಾರರನ್ನು ಕಳೆದುಕೊಂಡ ಏರ್ ಟೆಲ್!

ನವದೆಹಲಿ: ಭಾರ್ತಿ ಏರ್ ಟೆಲ್ ಕಂಪೆನಿಯು ಮೇ ತಿಂಗಳಿನಲ್ಲಿ 46.1 ಲಕ್ಷ ಮೊಬೈಲ್ ಬಳಕೆದಾರರನ್ನು ಕಳೆದುಕೊಂಡಿದೆ ಎಂದು ವರದಿಯಾಗಿದ್ದು, ಇದೇ ಸಮಯದಲ್ಲಿ ರಿಲಯನ್ಸ್ ಜಿಯೋ ಕಂಪೆನಿಯು 35.54 ಲಕ್ಷ ಬಳಕೆದಾರರನ್ನು ಗಳಿಸಿಕೊಂಡಿದೆ.

ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ಮಾಹಿತಿಯನ್ನು ನೀಡಿದೆ. ಮೇ ತಿಂಗಳಿನಲ್ಲಿ ಭಾರತದ ಮೊಬೈಲ್ ಮಾರುಕಟ್ಟೆಯು 62.7 ಲಕ್ಷ ಬಳಕೆದಾರರನ್ನು ಕಳೆದುಕೊಂಡಿದೆ. ಇದರಿಂದಾಗಿ ಒಟ್ಟಾರೆಯಾಗಿ ಬಳಕೆದಾರರ ಸಂಖ್ಯೆಯು 117.6 ಕೋಟಿಗೆ ಇಳಿಯಾಗಿದೆ ಎಂದು ತಿಳಿದು ಬಂದಿದೆ.

ಮೇ ತಿಂಗಳಿನಲ್ಲಿ ಜಿಯೋ ಹೊಸದಾಗಿ 35.54 ಲಕ್ಷ ಮೊಬೈಲ್ ಬಳಕೆದಾರರು ಸೇರ್ಪಡೆಯಾಗಿದ್ದು, ಒಟ್ಟು ಬಳಕೆದಾರರ ಸಂಖ್ಯೆ 43.12 ಕೋಟಿಗೆ ಏರಿಕೆಯಾಗಿದೆ. ವೋಡಾಫೋನ್ ಐಡಿಯಾ ಕಂಪೆನಿ ಕೂಡ 42.8 ಲಕ್ಷ ಬಳಕೆದಾರರನ್ನು ಕಳೆದುಕೊಂಡೊದೆ. ಇದರ ಒಟ್ಟು ಬಳಕೆದಾರರ ಸಂಖ್ಯೆ 27.7ರಷ್ಟು ಇಳಿಕೆ ಕಂಡಿದೆ.

ನಿನ್ನೆಯಷ್ಟೇ ಏರ್ ಟೆಲ್ ಅಗ್ಗದ(ಕಡಿಮೆಯ) ಪ್ಲಾನ್ ಗಳನ್ನು ರದ್ದುಗೊಳಿಸಿ, ದುಬಾರಿ ಪ್ಲಾನ್ ಗಳನ್ನು ಮಾತ್ರವೇ ಚಾಲ್ತಿಯಲ್ಲಿಟ್ಟಿದೆ. ಇದರ ಪರಿಣಾಮ ಇನ್ನಷ್ಟು ಬಳಕೆದಾರರನ್ನು ಏರ್ ಟೆಲ್ ಕಳೆದುಕೊಳ್ಳಲಿದೆ ಎಂದು ಹೇಳಲಾಗುತ್ತಿದೆ. ಏರ್ ಟೆಲ್, ವೋಡಫೋನ್ ಐಡಿಯಾ ಬಳಕೆದಾರರು ಕಡಿಮೆಯಾಗುತ್ತಿದ್ದರೆ, ಜಿಯೋ ಬಳಕೆದಾರರಲ್ಲಿ ಏರಿಕೆಯಾಗುತ್ತಲೇ ಇದೆ..

ವರದಿ. ಪ್ರತಾಪ್, ಸಿ, ಹರಪನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;