;

ಬಿಜೆಪಿಗೆ ಅಧಿಕಾರ ಮಾತ್ರ ಬೇಕು, ಜನರ ಯೋಗ ಕ್ಷೇಮ ಬೇಡ…!!!

ಬಿಜೆಪಿಗೆ ಅಧಿಕಾರ ಮಾತ್ರ ಬೇಕು, ಜನರ ಯೋಗ ಕ್ಷೇಮ ಬೇಡ..
ಸತೀಶ್ ಜಾರಕಿಹೊಳಿ
ಬೆಳಗಾವಿ: ಕಳೆದ ಬಾರಿ ಆಗಿರುವ ನೆರೆ ಪರಿಹಾರವೇ ಜನರಿಗೆ ಸಿಕ್ಕಿಲ್ಲ. ಸರ್ಕಾರದ ಆಂತರಿಕ ಕಿತ್ತಾಟದಲ್ಲಿ ಜನರು ಬಲಿಪಶುಗಳಾಗುತ್ತಿದ್ದಾರೆ. ಅವರಿಗೆ ಅಧಿಕಾರ ಬೇಕಾಗಿದೆಯೇ ಹೊರತು, ಜನರ ಯೋಗಕ್ಷೇಮ ಬೇಡ ಎಂದು ರಾಜ್ಯ ಸರ್ಕಾರದ ವಿರುದ್ಧ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಗೊಳಿ ವಾಗ್ದಾಳಿ ನಡೆಸಿದರು.

ನಗರದಲ್ಲಿಂದು ಮಹಿಳಾ ಕಾಂಗ್ರೆಸ್ ಸಮಾರಂಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನೆರೆ ಹಾನಿಯ ಬಗ್ಗೆ ಅಧ್ಯಯನ ಮಾಡುತ್ತಿದ್ದೇವೆ. ಸಿ.ಎಲ್.ಪಿ. ಟೀಮ್ ನಿಂದ ಈಗಾಗಲೇ ಎಲ್ಲೆಲ್ಲಿ ಹಾನಿಯಾಗಿದೆಯೋ ಅಲ್ಲಿ ಪರಿಹಾರ ನೀಡುವಂತೆ ಜಿಲ್ಲಾಡಳಿತದ ಗಮನಕ್ಕೆ ತರಲಾಗುತ್ತದೆ ಎಂದು ಅವರು ಹೇಳಿದರು.

ಚುನಾವಣೆಗೆ ಇನ್ನೂ ಅಭ್ಯರ್ಥಿಗಳನ್ನು ನಾವು ಇನ್ನೂ ನಿಶ್ಚಯ ಮಾಡಿಲ್ಲ. ಕಾಂಗ್ರೆಸ್ ಬೇರೆ, ಜೆಡಿಎಸ್ ಬೇರೆ. ನಮ್ಮ ಕಾರ್ಯವೈಖರಿಯೇ ಭಿನ್ನವಾಗಿದೆ. ಬಿಜೆಪಿಯವರು ಸುಮಾರು 2 ವರ್ಷಗಳಿಂದ ಕಿತ್ತಾಟ ನಡೆಸುತ್ತಿದ್ದಾರೆ. ಅವರಿಗೆ ಅಧಿಕಾರ ಬೇಕೇ ಹೊರತು ಜನರ ಯೋಗ ಕ್ಷೇಮ ಬೇಕಿಲ್ಲ ಎಂದು ಅವರು ಹೇಳಿದರು..

ವರದಿ. ಪ್ರತಾಪ್, ಸಿ, ಹರಪನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;