;

ಗಡ್ಡಧಾರಿಗಳಿಗೆ ಸಿಹಿ ಸುದ್ದಿ: ಮುಂದಿನ ಅವಧಿಯಲ್ಲಿ ನೀವೂ ಸಿಎಂ ಆಗುವ ಸಾಧ್ಯತೆ ಇದೆ!!!

ಗಡ್ಡಧಾರಿಗಳಿಗೆ ಸಿಹಿ ಸುದ್ದಿ: ಮುಂದಿನ ಅವಧಿಯಲ್ಲಿ ನೀವೂ ಸಿಎಂ ಆಗುವ ಸಾಧ್ಯತೆ ಇದೆ!

ಬಳ್ಳಾರಿ: ಯಡಿಯೂರಪ್ಪನವರ ನಂತರ ಬಸವರಾಜ್ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಆದರೆ ಇದೀಗ ಸ್ವಾಮೀಜಿಯೋರ್ವರು, ಬಸವರಾಜ್ ಬೊಮ್ಮಾಯಿ ಅವರು ಅಧಿಕಾರ ಪೂರ್ಣಗೊಳಿಸುವುದಿಲ್ಲ ಎಂದು ಶಾಕಿಂಗ್ ಭವಿಷ್ಯ ನುಡಿದಿದ್ದಾರೆ.

ಹೂವಿನಹಡಗಲಿಯ ಮೈಲಾರಲಿಂಗೇಶ್ವರ ದೇವಸ್ಥಾನದ ಧರ್ಮಕರ್ತ ವೆಂಕಪ್ಪ ಒಡೆಯರ್ ಅವರ ಭವಿಷ್ಯದ ಪ್ರಕಾರ, ಮುಂದಿನ 6-7 ತಿಂಗಳ ಕಾಲ ಬಸವರಾಜ್ ಬೊಮ್ಮಾಯಿ ಅಧಿಕಾರದಲ್ಲಿರಲಿದ್ದಾರೆ. ಆ ಬಳಿಕ ಗಡ್ಡಧಾರಿಯೊಬ್ಬರು ಮುಖ್ಯಮಂತ್ರಿಯಾಗುತ್ತಾರೆ ಎಂದು ಅವರು ಭವಿಷ್ಯ ನುಡಿದಿದ್ದಾರೆ.

ಮೈಲಾರ ಅವರ ಭವಿಷ್ಯದಿಂದಾಗಿ ಇದೀಗ ಗಡ್ಡಧಾರಿಗಳು ಗಡ್ಡನೇವರಿಸಿಕೊಂಡು ನಾನೂ ಮುಖ್ಯಮಂತ್ರಿಯಾಗುತ್ತೇನಾ? ಎಂದು ಯೋಚಿಸುವಂತೆ ಮಾಡಿದೆ. ಇವರ ಭವಿಷ್ಯವಾಣಿ ನಿಜವಾದರೆ, ಈ ಅವಧಿಯಲ್ಲಿ ಕರ್ನಾಟಕ ರಾಜ್ಯದಲ್ಲಿ ನಾಲ್ಕು ಜನರು ಮುಖ್ಯಮಂತ್ರಿಗಳಾದಂತಾಗುತ್ತದೆ ಎಂಬ ಅಭಿಪ್ರಾಯಗಳು ಕೇಳಿ ಬಂದಿದೆ.ಇದರ ಜೊತೆಗೆ ಗಡ್ಡಧಾರಿ ರಾಜಕಾರಣಿಗಳನ್ನು ಅನುಮಾನದಿಂದ ನೋಡುವಂತಾಗಿದೆ..

ವರದಿ. ಪ್ರತಾಪ್, ಸಿ, ಹರಪನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;