ವರದಿ. ಧನಂಜಯ್

ನಾಣ್ಯಾಪುರ:ಪುರಾತನ ದೇವಸ್ಥಾನ ಸಂರಕ್ಷಿಸಿ-ಗ್ರಾಮಸ್ಥರ ಒತ್ತಾಯ*-
ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕು ನಾಣ್ಯಾಪುರ ಗ್ರಾಮದ,ಹೊರವಲಯದಲ್ಲಿ ಪುರಾತ ಸಂಗನ ಬಸವೇಶ್ವರ ದೇವರ ಮೂರ್ತಿ ಬಟಾ ಬಯಲಿನಲ್ಲಿದ್ದು.ಇದು ಪುರಾತನ ಕಾಲದ ಬಳಪದ ಕಲ್ಲಿನ ಬಸವಣ್ಣ ವಿಗ್ರವಾಗಿದೆ ಮತ್ತು ಸುತ್ತಲೂ ಪುರಾತನ ಕಾಲದಲ್ಲಿ ನಿರ್ಮಿಸಲಾಗಿದೆ ಎನ್ನಲಾದ ಕುಸಿದ ಕಲ್ಲಿನ ಕಟ್ಟಡದ ಅವಶೇಷಗಳಿವೆ,ಹತ್ತಿರದಲ್ಲಿ ಶರಣರನ್ನ ಐಕ್ಯಮಾಡಿರುವ ಕುರುಹುಗಳಿವೆ ಇವೆಲ್ಲಾ ಗಮನಿಸಿದರೆ ಗ್ರಾಮಸ ಹುಟ್ಟು ಇಲ್ಲಿಂದಲೇ ಆಗಿರಬಹುದೆಂದು.ಇಲ್ಲಿ ಸಂಗಪ್ಪಜ್ಜನ ಮಠ ಇತ್ತೆಂದಲೂ ಜಾನಪದೀಯ ಅಂತೆ ಕಂತೆಗಳ ಕಂತೆಯನ್ನ ಬಿಚ್ಚಿಡುತ್ತಾರೆ ನಾಣ್ಯಾಪುರದ ಗ್ರಾಮದ ಹಿರಿಯರು.
*ಪವಾಡ ಮೂರ್ತಿ-ಶ್ರೀ ಸಂಗನ ಬಸವ*-
ಪುರಾತನ ಕಾಲದ ನಂದಿ ವಿಗ್ರಹ ಸಂಗನ ಬಸವೇಶ್ವರ ದೇವರ ಪವಾಡ ಅಗಣಿತ,ಬಟಾ ಬಯಲಿನಲ್ಲಿ ಕಲ್ಲಿನ ಕಟ್ಟೆಯಾಕರಾದ ಗದ್ದಿಗೆ ಮೇಲೆ ಪ್ರತಿಷ್ಠಾಪಿತ ಬಸವಣ್ಣ ಬಾರಿ ಶಕ್ತಿದೇವರಾಗಿದ್ದಾನೆ.ಬಸವಣ್ಣನವುಅಸಂಖ್ಯಾತ ಪವಾಡಗಳಿವೆ ಎನ್ನುತ್ತಾರೆ ಗ್ರಾಮದ ಹಿರಿಯರು.ಶ್ರಾವಣ ಮಾಸದಲ್ಲಿ ಗ್ರಾಮಸ್ಥರೆಲ್ಲರೂ ಸೇರಿ ಸಾಮೂಹಿಕವಾಗಿ ಹೋಳಿಗೆ ಹೊದಿಕೆ ಮಾಡಿ,ಹೋಳಿಗೆ ಪರ್ವ ವಿಶೇಷ ಸಾಮೂಹಿಕ ಆರಾಧನೆ ನಡೆಸಲಾಗುತ್ತದೆ.
ಬಸವೇಶ್ಬರ ಮೂರ್ತಿ ಬಟಾಬಯಲಿನಲ್ಲಿರುವುದರಿಂದಾಗಿ ಗಾಳಿ,ಮಳೆ,ಬಿಸಿಲಿಗೆ ಹಾನಿಯಾಗುವ ಸಾಧ್ಯತೆ ಇದ್ದು. ರಕ್ಷಣಾತ್ಮಕವಾಗಿ ದೇವಸ್ಥಾನ ನಿರ್ಮಾಣ ಮಾಡಿದ್ದಲ್ಲಿ ಮೂರ್ತಿ ಬಹುಕಾಲ ಸುರಕ್ಷಿತವಾಗಿರಲು ಸಾಧ್ಯ ಎಂಬ ಅಭಿಪ್ರಾಯವಿದ್ದು.ರಾಜ್ಯ ಪುರಾತತ್ವ ಇಲಾಖೆ ಇತ್ತ ಗಮನ ಹರಿಸಬೇಕಿದೆ ಸ್ಥಳಕ್ಕೆ ಬೆಟ್ಟಿನೀಡಿ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಬೇಕಿದೆ, ಸ್ಥಳೀಯ ಜನಪ್ರತಿನಿಧಿಗಳು ಮೂರ್ತಿ ಹಾಗೂ ಮಠದ ಸಂರಕ್ಷಣೆಗೆ ಮುಂದಾಗಬೇಕಿದೆ.ಸ್ಥಳೀಯ ಆಡಳಿತ ದೇವಸ್ಥಾನವನ್ನು ಪುನರ್ ಸ್ಥಾಪಿಸಿ,ಕ್ಷೇತ್ರ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಶೀಘ್ರವೇ ಕ್ರಮ ಜರುಗಿಸಬೇಕಿದ್ದು,ಇ ನಿಟ್ಟಿನಲ್ಲಿ ಶೀಘ್ರವೇ ಸಹಕರಿಸಬೇಕೆಂದು ತಾಲೂಕು ಹಾಗೂ ಜಿಲ್ಲಾಡಳಿತಕ್ಕೆ, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಗ್ರಾಮದ ಹಿರಿಯರು ಈ ಮೂಲಕ ಒತ್ತಾಯಿಸಿದ್ದಾರೆ…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
