;

ನಾಯಕನಹಟ್ಟಿ: ಓಬಯ್ಯನಹಟ್ಟಿ ಗ್ರಾಮದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ಆಹಾರ ಕಿಟ್ಟು ವಿತರಿಸಿದ ನಿವೃತ್ತಿ ಅಧಿಕಾರಿ.!

ವರದಿ.ಮಂಜುನಾಥ್, ಎಚ್

ಚಿತ್ರದುರ್ಗ: ನಾಯಕನಹಟ್ಟಿ: ಸಮೀಪದ ಓಬಯ್ಯನಹಟ್ಟಿ ಗೊಲ್ಲರ ಹಟ್ಟಿ ಗ್ರಾಮದಲ್ಲಿ ಭಾನುವಾರ 450 ಕುಟುಂಬಗಳಿಗೆ ಆಹಾರ ಕಿಟ್‌ಗಳನ್ನು ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷ ಈ.ದೊಡ್ಡನಾಗಯ್ಯ ವಿತರಿಸಿದರು. ನಂತರ ಮಾತನಾಡಿದ ಅವರು, ಓಬಯ್ಯನಹಟ್ಟಿ ಗೊಲ್ಲರಹಟ್ಟಿ ಗ್ರಾಮದಲ್ಲಿ ಸುಮಾರು 450 ಕುಟುಂಬಗಳಿದ್ದು, ಗ್ರಾಮದಲ್ಲಿ ಈರಚಿಕ್ಕಮ್ಮ ಮತ್ತು ಬೋಸದೇವರ ಗುಡಿ ಇದೆ. ಹಲವು ವರ್ಷಗಳಿಂದ ದೇವಾಲಯ ಹಳೆಯದಾಗಿ ಬೀಳುವ ಹಂತ ತಲುಪಿತ್ತು. ಗ್ರಾಮಸ್ಥರೆಲ್ಲರೂ ಸೇರಿ ದೇವಾಲಯವನ್ನು ದುರಸ್ಥಿಗೊಳಿಸಲು ತಮುಂದಾದರು. ಇದು ದೇವಾಲಯ ದುರಸ್ಥಿಗೊಂಡು ಪೂಜೆ ಮನಸ್ಕಾರಗಳು ಆರಂಭಗೊಂಡ ನಿಮಿತ್ತ ಅನ್ನದಾಸೋಹ ವ್ಯವಸ್ಥೆ ಏರ್ಪಡಿಸಬೇಕಾಗಿತ್ತು. ಆದರೆ ಕೊರೋನಾ ಸೋಂಕು ವೇಗವಾಗಿ ಹರಡುತ್ತಿರುವ ತಹಿನ್ನೆಲೆಯಲ್ಲಿ ಅನ್ನದಾಸೋಹದ ಬದಲಿಗೆ ಗ್ರಾಮದಲ್ಲಿರುವ ಸುಮಾರು 450 ಕುಟುಂಬಗಳಿಗೆ ಆಹಾರ ಕಿಟ್ ವಿತರಿಸುವ ಮೂಲಕ ಜನರು ಅವರ ಮನೆಗಳಲ್ಲಿಯೇ ಸಿಹಿ ಊಟವನ್ನು ಸವಿಯಲು ವ್ಯವಸ್ಥೆ ಮಾಡಲಾಗಿದೆ ಎಂದರು. ಈ ಸಂದರ್ಭದಲ್ಲಿ ತಿಮ್ಮಪ್ಪಯ್ಯನಹಳ್ಳಿ ಗ್ರಾಪಂ ಅಧ್ಯಕ್ಷ ಬಂಡೆಕಪಿಲೆ ಓಬಣ್ಣ ಗ್ರಾಮಸ್ಥರಾದ ದೊಡ್ಡಜ್ಜಯ್ಯ, ಚಿನ್ನೋಬಯ್ಯ, ದಾಸಣ್ಣ, ನಾಗಣ್ಣ, ರವಿ, ಬಸವರಾಜಪ್ಪ, ಬೋಸಯ್ಯ, ಮುನಿಯಪ್ಪ, ಸಣ್ಣನಾಗೇಂದ್ರಪ್ಪ ಮತ್ತಿತರರು ಉಪಸ್ಥಿತರಿದ್ದರು.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;