;

ಬಳ್ಳಾರಿಯಲ್ಲಿ ಇಂದು ಬೆಲೆ ಏರಿಕೆಯನ್ನು ವಿರೋಧಿಸಿ ಪ್ರತಿಭಟನಾ ಧರಣಾ ಹಮ್ಮಿಕೊಳ್ಳಲಾಯಿತು…!!!

ವರದಿ. ಎಂ. ಎಲ್. ವೆಂಕಟೇಶ್ ಬಳ್ಳಾರಿ

ಇಂದು ಬಳ್ಳಾರಿಯಲ್ಲಿ SUCI (ಕಮ್ಯುನಿಸ್ಟ್) ಪಕ್ಷದ ವತಿಯಿಂದ ಎಲ್ಲಾ ಅಗತ್ಯ ವಸ್ತು ಬೆಲೆ ಏರಿಕೆ ಪೆಟ್ರೋಲ್ ಡಿಸೇಲ್ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯನ್ನು ವಿರೋಧಿಸಿ ಪ್ರತಿಭಟನಾ ಧರಣಾ ಹಮ್ಮಿಕೊಳ್ಳಲಾಯಿತು

ನಗರದ ನಾರಯಣರಾವ್ ಪಾರ್ಕ್ (ಕಾಗೆ ಪಾರ್ಕ್)ನಿಂದ ಪ್ರತಿಭಟನಾ ರ್ಯಾಲಿ ಪ್ರಾರಂಭವಾಗಿ ಜಿಲ್ಲಾಧಿಕಾರಿ ಕಛೇರಿ ಬಳಿ ಧರಣಾ ಕುಳಿತುಕೊಳ್ಳಲಾಯಿತು

ಈ ಸಂದರ್ಭದಲ್ಲಿ SUCI ಕಮ್ಯುನಿಸ್ಟ್ ಪಕ್ಷದ ರಾಜ್ಯ ಸಮಿತಿ ಸದಸ್ಯರಾದ ಕೆ.ಸೋಮಶೇಖರ್ ಈ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು

ಕೇಂದ್ರ ಸರ್ಕಾರವು ಅತ್ಯಂತ ಜನ ವಿರೋಧಿ ನೀತಿಗಳನ್ನು ತರುತ್ತಿದೆ ಕಾರ್ಪೊರೇಟ್ ಮನೆತನಗಳನ್ನು ಉದ್ದಾರ ಮಾಡುವುದಕ್ಕಾಗಿ ಜನಗಳ ಜೇಬಿಗೆ ಕತ್ತರಿ ಹಾಕುತ್ತಿದೆ ಇಂತಹ ಪರಿಸ್ಥಿತಿಯಲ್ಲಿ ಜನ ಬೀದಿಗಿಳಿದು ಹೋರಾಟ ಮಾಡಬೇಕು ಹೋರಾಟ ಒಂದೇನೆ ನಮಗಿರುವಮಾರ್ಗ ಎಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡಬೇಕು ಎ೦ದು ಕರೆ ನೀಡಿದರು.

ಪ್ರತಿಭಟನೆಯ ಅಧ್ಯಕ್ಷತೆಯನ್ನು ಜಿಲ್ಲಾ ಕಾಯ೯ದರ್ಶಿ ರಾಧಕೃಷ್ಣ ಉಪಾಧ್ಯ ವಹಿಸಿಕೊಂಡಿದ್ದರು
ಜಿಲ್ಲಾ ಸಮಿತಿ ಸದಸ್ಯರಾದ MN ಮಂಜುಳಾ D ನಾಗಲಕ್ಷ್ಮೀ ಎ.ದೇವದಾಸ್‌ ಇ ಹನುಮಪ್ಪ R ಸೋಮಶೇಖರ್ ಗೌಡ ಎ.ಶಾಂತ ಗೋವಿಂದ್ ಸೇರಿದಂತೆ ವಿವಿಧ ಬಡವಾಣೆಯ ನಾಗರಿಕರು ಭಾಗವಹಿಸಿದ್ದರು.
ಇಂದು ಬಳ್ಳಾರಿಯಲ್ಲಿ BCM ಇಲಾಖೆಯು ಪದವಿ ಹಾಗೂ ಪದವಿ ಪೂರ್ವ ವಿದ್ಯಾರ್ಥಿ ನಿಲಯಗಳನ್ನು ಸ್ಥಗಿತಗೊಳಿಸಿರುವುದನ್ನು ಖಂಡಿಸಿ ಪ್ರತಿಭಟನೆ AIDSO ವಿದ್ಯಾರ್ಥಿ ಸಂಘಟನೆ ವತಿಯಿಂದ ಪ್ರತಿಭಟನೆ ಮಾಡಿ ಮನವಿ ಪತ್ರ ಸಲ್ಲಿಸಿಲಾಯಿತು.

ಮನವಿ ಸ್ವಿಕರಿಸಿದ ಅಧಿಕಾರಿಗಳು ಈ ಕೂಡಲೇ ಎಲ್ಲಾ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ AIDSO ಜಿಲ್ಲಾ ಕಾರ್ಯದರ್ಶಿಗಳಾದ ರವಿಕಿರಣ್.ಜೆ.ಪಿ ಮತ್ತು ಜಿಲ್ಲಾ ಸೇಕ್ರೆಟರಿಯಟ್ ಸದಸ್ಯರಾದ ಕೆ.ಈರಣ್ಣ, ನಿಂಗರಾಜ್ ಹಾಗೂ ಸದಸ್ಯರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;