ವರದಿ. ಮಂಜುನಾಥ್. ಎನ್

ಗೊಲ್ಲರಹಳ್ಳಿ:108ನಲ್ಲಿ ಹೆರಿಗೆ*-ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕು ಗೊಲ್ಲರಹಳ್ಳಿ ರಾಜೇಶ್ವರಿ ಎಂಬುವವರು, ಕೊಟ್ಟೂರು 108ಅಂಬುಲೆನ್ಸ್ ವಾಹನದಲ್ಲಿ ಬೆಳಿಗ್ಗೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.ಬೆಳ್ಳಂ ಬೆಳಿಗ್ಗೆ ರಾಜೇಶ್ವರಿಯವರಿಗೆ ಹೆರಿಗೆ ಕಾಣಿಸಿಕೊಂಡಿದ್ದು ಸುದ್ದಿ ತಿಳಿದ ಕೂಲೇ ಕೊಟ್ಟುೂರು108ಸಿಬ್ಬಂದಿ,ಗೊಲ್ಲರಹಳ್ಳಿ ಗ್ರಾಮದ ತುಂಬು ಗರ್ಭಿಣಿ ರಾಜೇಶ್ವರಿ ಯವರನ್ನ 108ನಲ್ಲಿ ಕೊಟ್ಟೂರು ಆಸ್ಪತ್ರೆಗೆ ಕರೆ ತರುವಾಗ ಮಾರ್ಗಮದ್ಯ ಸಹಜ ಹೆರಿಗೆ ಆಗಿದೆ.ಗೊಲ್ಲರಹಳ್ಳಿಯ ಆಶಾಕಾರ್ಯಕರ್ತೆ ಡಿ.ಜಿ.ಮಧುರವರು ಹೆರಿಗೆ ಸುಲಲಿತವಾಗಿವಂತೆ ನಿಗಾವಹಿಸಿದ್ದಾರೆ.ಈ ಸಂದರ್ಭದಲ್ಲಿ 108 ಅಂಬುಲೆನ್ಸ್ ನಲ್ಲಿ ಸಿಬ್ಬಂದಿ ಇಎಂಟಿ ಮಲ್ಲೇಶ್,ಪೈಲಟ್ ಪಂಪಾಪತಿ ಕಾರ್ಯನಿರ್ವಹಸಿದ್ದಾರೆ….
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
