ವರದಿ. ಮಂಜುನಾಥ್, ಎಚ್

ಚಿತ್ರದುರ್ಗ : ಮೊಳಕಾಲ್ಮೂರು/ ಜಾನಪದ ಕಲಾವಿದ, ಗಾಯಕ ಹಾಗೂ ಮೊಳಕಾಲ್ಮೂರು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಿ.ಓ.ಮುರಾರ್ಜಿ ಸೋಮವಾರ ಚಿತ್ರದುರ್ಗ ತಹಸೀಲ್ದಾರ್ ಕಚೇರಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು. ಈ ವೇಳೆ ಹಿರಿಯೂರು ಕಸಾಪ ಮಾಜಿ ಅಧ್ಯಕ್ಷರಾದ ಧನಂಜಯ ಕುಮಾರ್, ವಿ.ಹೆಚ್.ರಾಜು, ವಕೀಲರಾದ ರಾಜಶೇಖರ ನಾಯಕ, ಕೊರ್ಲಕುಂಟೆ ದಯಾನಂದ, ಮೊಳಕಾಲ್ಮೂರು ಕಸಾಪ ಪ್ರಧಾನ ಕಾರ್ಯದರ್ಶಿ ಎನ್. ನೀಲರಾಜ್, ಕರ್ನಾಟಕ ಜಾನಪದ ಅಕಾಡೆಮಿ ಮಾಜಿ ಸದಸ್ಯ ಕಾಲ್ಕೆರೆ ಚಂದ್ರಣ್ಣ, ಬಹುಜನ ಚಳುವಳಿಯ ಹಿರಿಯೂರು ಸಿದ್ದಪ್ಪ, ಮರ್ಲಹಳ್ಳಿ ಪರಮೇಶ್, ಗೋನೂರು ಬಡಾವಣೆಯ ತಿಪ್ಪೇಸ್ವಾಮಿ, ಎಂ.ಕೆ.ಹಟ್ಟಿ ಗ್ರಾ.ಪಂ.ಮಾಜಿ ಅಧ್ಯಕ್ಷೆ ಸುಶೀಲಮ್ಮ, ಗಾಯಕ ಡಿ.ಬಿ.ನಿಂಗರಾಜ್ ಉಪಸ್ಥಿತರಿದ್ದರು.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
