ವರದಿ. ಮಂಜುನಾಥ್, ಎಚ್

ಚಿತ್ರದುರ್ಗ: ಮೊಳಕಾಲ್ಮೂರು ಪಟ್ಟಣದ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಪಪಂ ಅಧ್ಯಕ್ಷ ಪಿ. ಲಕ್ಷ್ಮಣ 2021-22ನೇ ಸಾಲಿನ 41.99 ಕೋಟಿ ಬಜೆಟ್ ಗಾತ್ರದೊಂದಿಗೆ ನಿರೀಕ್ಷಿತ
ಆದಾಯ ಮತ್ತು ಖರ್ಚನ್ನ ಸರಿದೂಗಿ ಸಿಕೊಂಡು 21.99 ಲಕ್ಷರೂಣ ಉಳಿತಾಯ
ಘೋಷಿಸಲಾಯಿತು. ಉಳಿತಾಯ ಬಜೆಟ್ ಮಂಡಿಸುತ್ತ ಪಟ್ಟಣದ ಸರ್ವತೋಮುಖ ಅಭಿವೃದ್ಧಿಗೆ ಸರ್ವ ಸದಸ್ಯರ ಸಹಕಾರ ಕೊರಿದರು. ಇದಕ್ಕೆ ಸರ್ವಸದಸ್ಯರು ಒಪ್ಪಿಗೆ ಸೂಚಿಸಿದರು. ಪ.ಪಂ ಮುಖ್ಯಾಧಿಕಾರಿ ಪಿ.ಬಸಣ್ಣ ವಾರ್ಷಿಕ ವರದಿ ಮಂಡಿಸಿ ಆದಾಯ ಮೂಲಗಳಾದ ಆಸ್ತಿ ತೆರಿಗೆ, ನೀರಿನ ಶುಲ್ಕಿ, ಉದ್ದಿಮೆ ಪರವಾನಿಗೆ, ವಾಣಿಜ್ಯ
ಮಳಿಗೆಗಳ ಬಾಡಿಗೆ ಇತ್ಯಾದಿ ನಿರೀಕ್ಷಿತ ಮೂಲಗಳ ಕೊರತೆಯಿಂದ ಸರ್ಕಾರ
ದಿಂದ ಬಿಡುಗಡೆ ಆಗುವ ವಿವಿದ ಯೋಜನೆಗಳನ್ನ ಅವಲಂಬಿಸ ಬೇಕಾಯಿತು. ಪ.ಪಂ ಉಪಾಧ್ಯಕ್ಷ ಶುಭಾ ಪ್ರಥ್ವಿರಾಜ್, ಸದಸ್ಯರಾದ ಎಸ್. ಖಾದರ್, ಕೆ.ತಿಪ್ಪೇಸ್ವಾಮಿ, ಲೀಲಾವತಿ, ಲಕ್ಷ್ಮೀದೇವಿ, ಮಂಜುನಾಥ, ಅಬ್ದುಲ್ಲಾ ರೂಪಾ, ಎಸ್.ಚಿತಮ್ಮ, ಪದ್ಮಾವತಿ,
ಬಾಗ್ಯಮ್ಮ, ಬಿ. ಎ.ಸವಿತಾ, ನಬಿಲ್, ನಾಮ ನಿರ್ದೇಶಿತ ಸದಸ್ಯರು ಸರ್ವ ಮಂಗಳ, ಪೆನ್ನಓಬಳಸ್ವಾಮಿ, ಶಾಂತರಾಮ್, ಶ್ರೀನಿವಾಸ್ ಇಂಜಿನಿಯರ್ ರೇವಣಸಿದ್ದಪ್ಪ, ಸಿಬ್ಬಂದಿ ಬಸಣ್ಣ, ಮುಂತಾದವರು ಉಪಸ್ಥಿತರಿದ್ದರು.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
