;

ನೂತನವಾಗಿ ಎಸ್ಡಿಎಂಸಿ ರಚನೆ ಮಾಡಲಾಯಿತು…

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಜುಮ್ಮೋಬನಹಳ್ಳಿ.*
ಕೂಡ್ಲಿಗಿ ತಾಲೂಕಿನ ಜುಮ್ಮೋಬನಹಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಿನಾಂಕ. 26. 3. 2021.ರಂದು ನೂತನವಾಗಿ ಎಸ್ಡಿಎಂಸಿ ರಚನೆ ಮಾಡಲಾಯಿತು
ಶಾಲೆಯ ಬಡ್ತಿ ಮುಖ್ಯಗುರುಗಳಾದ ಶ್ರೀಮತಿ ಇಂದಿರಮ್ಮ ಇವರ ನೇತೃತ್ವದಲ್ಲಿ ವಿದ್ಯಾರ್ಥಿಗಳ ಪೋಷಕರ ಪಾಲಕರ ಸಮ್ಮುಖದಲ್ಲಿ ಮೊದಲನೆಯದಾಗಿ ಎಸ್ಡಿಎಂಸಿ ಸದಸ್ಯರನ್ನು ಆಯ್ಕೆ ಮಾಡಲಾಯಿತು. ನಂತರ ಎಸ್ಡಿಎಂಸಿ ನೂತನ ಅಧ್ಯಕ್ಷ ರಾಗಿ ಕೆ . ಹೊನ್ನೂರಪ್ಪ ಉಪಾಧ್ಯಕ್ಷರಾಗಿ ರಾಜಣ್ಣ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.ಗಾದ್ರಿ ಪಾಲಯ್ಯ . ಬೊಮ್ಮ ಲಿಂಗಮ್ಮ .ರಾಜಣ್ಣ ಬೋರಣ್ಣ ಜಿಎನ್ ಪ್ರಕಾಶ್ .n. ತಿಪ್ಪೆಸ್ವಾಮಿ. ಶಾಂತಮ್ಮ ಚಿನ್ನಮ್ಮ ಪಾರ್ವತಿ ಮಂಜುಳಾ ಮಹಾಲಕ್ಷ್ಮಿ . ಗಂಗಮ್ಮ ಇವರುಗಳು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಜುಮ್ಮೋಬನಹಳ್ಳಿ ಶಾಲೆಯ ನೂತನ ಎಸ್ಡಿಎಂಸಿ ಸದಸ್ಯರಾಗಿ ಆಯ್ಕೆಯಾದರು. ನಂತರ ಸದಸ್ಯರುಗಳ ಎಲ್ಲರೂ ಸೇರಿ ಸರ್ವಾನುಮತದಿಂದ ಹೊನ್ನೂರಪ್ಪ ಇವರನ್ನು ಎಸ್ಡಿಎಂಸಿ ಅಧ್ಯಕ್ಷರಾಗಿ ಹಾಗೂ ರಾಜಣ್ಣ ಇವರನ್ನು ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಿದರು.ಈ ಕಾರ್ಯಕ್ರಮವನ್ನು ಶ್ರೀ ಗಂಗಾಧರ್ ಶಿಕ್ಷಕರು ಶ್ರೀ ಪಿಎಂ ಮಲ್ಲಿನಾಥ್ ಶಿಕ್ಷಕರು ಹಾಗೂ ಶ್ರೀಮತಿ ಕನಕಮ್ಮ ಇವರು ನಡೆಸಿಕೊಟ್ಟರು. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಪೋಷಕರು ಪಾಲಕರು ಊರಿನ ಗ್ರಾಮಸ್ಥರು ಸಾರ್ವಜನಿಕರು ಶಾಲೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು…

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;