
ಕೊಪ್ಪಳ.ಕಾರಟಗಿ ತಾಲ್ಲೂಕಿನ ಸಿದ್ದಾಪುರ ಗ್ರಾಮದಲ್ಲಿ ಕಾರಣಾಂತರಗಳಿಂದ ಗ್ರಾಮ ಪಂಚಾಯಿತಿ ಚುನಾವಣೆಯು ಇಂದು ನಡೆಯಿತು.
ಸಿದ್ದಾಪುರ ಗ್ರಾಮ ಪಂಚಾಯಿತಿಯು 9 ವಾರ್ಡ್ ಗಳ ಸದಸ್ಯತ್ವಕ್ಕೆ ಚುನಾವಣೆ ಇಂದು ನಡೆಯಿತು
ಚುನಾವಣಾ ಆಯೋಗದ ನಿಯಮ ಹಾಗೂ ಮಾಸ್ಕ್ ಹಾಕುವ ಮೂಲಕ ಮತಗಟ್ಟೆಗೆ
ಮತದಾರರು ಬಂದು ತಮ್ಮ ಮತವನ್ನು ಗ್ರಾಮದ ಹಾಗೂ ತಮ್ಮ ವಾರ್ಡಿನ ಅಭಿವೃದ್ಧಿಗಾಗಿ ದುಡಿಯುವ ನಿಷ್ಠಾವಂತ ನಾಯಕನನ್ನು ಮತವನ್ನು ನೀಡಿ ಆರಿಸಿ ತರಬೇಕು ಎನ್ನುವ ಭಾವನೆ ಯಿಂದ ಮತಗಟ್ಟೆಗೆ ಬಂದು ಮತವನ್ನು ಚಲಾಯಿಸಿದರು.

ಇದೇ ವೇಳೆ ಆರೋಗ್ಯ ಇಲಾಖೆಯವರು ಸಾನಿಟೈಸರ್ ಮತ ನೀಡಲು ಬಂದಿರುವಂತಹ ಜನರ ಕೈಗಳಿಗೆ ಹಾಕಿ ಒಳಗಡೆ ಪ್ರವೇಶವನ್ನು ಮಾಡಿ ಕೊಂಡಿದ್ದರು ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಜನರಿಗೆ ಸಾಲಾಗಿ ನಿಲ್ಲಿಸಿ ಯಾವುದೇ ರೀತಿಯ ತೊಂದರೆ ಆಗದಂತೆ ತುಂಬ ಸರಳವಾಗಿ ನೋಡಿಕೊಂಡಿದ್ದರು
ಇದೇ ಸಂದರ್ಭದಲ್ಲಿ ನಡೆಯಲು ಬಾರದಂಥ ವ್ಯಕ್ತಿ ಗಾಲಿಕುರ್ಚಿಯ ಮೂಲಕ ಬಂದು ಮತವನ್ನು ಚಲಾಯಿಸಿದ್ದಾರೆ.

ಒಟ್ಟಾರೆಯಾಗಿ ಮತವನ್ನು ಚಲಾಯಿಸಿ ದಿನಾಂಕ .31/03/21 ಕೆ ಬರುವ ಫಲಿತಾಂಶದ ನಿರೀಕ್ಷೆಯಲ್ಲಿದ್ದಾರೆ ಸಿದ್ದಾಪುರ ಜನತೆ
ವರದಿ.ಖಾಜಾವಲಿ.ಎಚ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
