ವರದಿ. ಮಂಜುನಾಥ್. ಎಚ್

ಚಿತ್ರದುರ್ಗ: ಚಳ್ಳಕೆರೆ ತಾಲ್ಲೂಕಿನ ಹಿರೇಹಳ್ಳಿ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕುವೈತ್ ಕನ್ನಡ ಕೂಟ ಕ್ಷೇಮಾಭ್ಯುದಯ ಸಂಘದಿಂದ ಆನ್‌ಲೈನ್ ಮೂಲಕ ಸ್ಮಾರ್ಟ್ ಕ್ಲಾಸ್ ಉದ್ಘಾಟನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಚಳ್ಳಕೆರೆ ಸಂಘ ಸಂಸ್ಥೆಗಳು ಗಡಿ ಭಾಗದ ಶಾಲೆಗಳನ್ನು ದತ್ತು ಪಡೆಯುವುದರ ಮೂಲಕ ಶಾಲಾ ಮಕ್ಕಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಕುವೈತ್ ಕನ್ನಡ ಕೂಟ ಸಂಸ್ಥೆ ಮುಂದೆ ಬಂದಿರುವುದ ಉತ್ತಮವಾದ ಕಾರ್ಯ ಎಂದು ಕ್ಷೇತ್ರಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ ಹೇಳಿದರು. ಮಕ್ಕಳು ಶೈಕ್ಷಣಿಕ ಪ್ರಗತಿಯತ್ತ ದಾಪುಗಾಲು ಹಾಕಲು ನೆರವಾಗುತ್ತಿದ್ದಾರೆ. ಇಂತಹ ಕೂಟವೊಂದು ಚಳ್ಳಕೆರೆಯ ಹಿರೇಹಳ್ಳಿ ಗ್ರಾಮದ ಸುಮಾರು 141 ವರ್ಷ ಇತಿಹಾಸವುಳ್ಳ ಶಾಲೆಯನ್ನು ದತ್ತು ಪಡೆದು ಅಲ್ಲಿ ಸ್ಮಾರ್ಟ್ ಕ್ಲಾಸ್ ಪ್ರಾರಂಭಿಸಿ ಮಕ್ಕಳ ಮನವಿಕಾಸಕ್ಕೆ ನೆರವಾಗುತ್ತಿದ್ದು, ಇವರ ಈ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಕುವೈತ್ ಕನ್ನಡ ಕೂಟ ಕ್ಷೇಮಾಭ್ಯುದಯ ಸಂಘ(ಕೆಕೆಕ) ಮರಳಲಿ ಅರಳಿದೆ ಮಲ್ಲಿಗೆ, ತವರಲ್ಲಿ ತರುತ್ತಿದೆ ಏಳಿಕೆ ಶಾಲಾ ದತ್ತು ಯೋಜನೆಯಡಿಯಲ್ಲಿ ಹಿರೇಹಳ್ಳಿಯ ಸರ್ಕಾರಿ ಮಾಧರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದಿನಿಂದ ಸ್ಮಾಟ್ ಕ್ಲಾಸ್ ಉದ್ಘಾಟನೆಗೊಂಡು ಶೈಕ್ಷಣಿಕ ಪ್ರಗತಿಗೆ ಮಾದರಿಯಾಗಿ ಕಾರ್ಯನಿರ್ವಹಿಸಲಿದೆ ಹಿರೇಹಳ್ಳಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುವ ಶಿಕ್ಷಕ ವರ್ಗ ತಮ್ಮ ವಿಷಯಗಳಿಗೆ ಸಂಬಂಧಪಟ್ಟಂತೆ ಪ್ರತ್ಯೇಕ ಕೊಠಡಿಗಳನ್ನು ಸಿದ್ದಪಡಿಸಿದ್ದು, ಸದರಿ ಕೊಠಡಿಯಲ್ಲೇ ಆನ್‌ಲೈನ್ ಶಿಕ್ಷಣದ ಬಗ್ಗೆ ನೀಡುವ ಮಾಹಿತಿಯನ್ನು ಶಿಕ್ಷಕ ಸಮೂಹ ಮಕ್ಕಳಿಗೂ ಬಿತ್ತರಿಸಲಿದ್ದಾರೆ ಎಂದರು. ಪಿಡಿಓ ವೆಂಕಟೇಶ ಮಾತನಾಡಿ ಶಾಲೆಯಲ್ಲಿ ಎಲ್ಲಾ ಸೌಕರ್ಯಗಳು ಇದ್ದು ವಾತವರಣ ತುಂಭ ಉತ್ತಮವಾಗಿದೆ. ಮಕ್ಕಳಿಗೆ ಕಲಿಯಲು ಸಹಕಾರಿಯಾಗಲಿದೆ ಇನ್ನು ಗ್ರಾಮ ಪಂಚಾಯಿತಿ ಯಿಂದ ಹಾಗುವಂತಹ ಅನುಕೂಲಗಳನ್ನು ಮಾಡಿಕೊಡಲಾಗಿವುದು ಎಂದರು. ಕೆ.ಕೆ.ಕೆ ಸಂಸ್ಥೆಯ ಅಧ್ಯಕ್ಷರಾದ ರೇವಣ್ಣ ಸಿದ್ದಪ್ಪ ಹೊಂಬಾಳೆ ಮಾತನಾಡಿ ಚಳ್ಳಕೆರೆ ತಾಲ್ಲೂಕಿನಲ್ಲಿ ಕುವೈತ್ ಕನ್ನಡ ಕೂಟ ಕ್ಷೇಮಾಭಿವೃದ್ದಿ ಸಂಘದಿಂದ ಮೂರು ಶಾಲೆಗಳನ್ನು ದತ್ತು ಪಡೆಯಲಾಗಿದ್ದು ಮಕ್ಕಳಿಗೆ ಉತ್ತಮ ಕಲಿಕೆ ಉದ್ದೇಶವನ್ನು ಹೊಂದಿದ್ದೆವೇ ಎಂದರು. ಈ ಸಮಯದಲ್ಲಿ ಬಿಸಿಯೂಟದ ಸಹಾಯಕ ನಿರ್ಧೇಶಕ ತಿಪ್ಪೇಸ್ವಾಮಿ,ತಳಕು ಶಿಕ್ಷಣ ಸಂಯೋಜಕ ಮಾರುತಿ ಭಂಡಾರಿ, ಮುಖ್ಯಶಿಕ್ಷಕಿ ತಿಪ್ಪಮ್ಮ,ಆಂಗ್ಲ ಭಾಷೆಯ ಶಿಕ್ಷಕಿ ಎಲ್.ಸ್ಮಿತಾ, ವಿಜ್ಞಾನ ವಿಭಾಗದ ಶಿಕ್ಷಕಿ ಪೌಜೀಯಾಬೇಗಂ, ಸಮಾಜ ವಿಜ್ಞಾನ ಶಿಕ್ಷಕಿ ವಿದ್ಯಾಜ್ಯೋತಿ, ಗಣಿತ ಶಿಕ್ಷಕಿ ಸಿ.ಎಸ್.ಭಾರತಿ, ಎನ್.ಮಾರಣ್ಣ, ಮುಖ್ಯ ಶಿಕ್ಷಕಿ ಕೆ.ಬಿ.ತಿಪ್ಪಮ್ಮ ಶಾಲಾ ಮಕ್ಕಳು ಇದ್ದರು.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
