ವರದಿ, ಡಿ, ಎಂ, ಈಶ್ವರಪ್ಪ ಸಿದ್ದಾಪುರ
*ಹೊಸಹಟ್ಟಿ:ಬಗ್ಗಲು ಓಬಳದಯ್ಯ ಹಬ್ಬ*-
ವಿಜಯ ನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಹೊಸಹಟ್ಟಿ ಗ್ರಾಮದಲ್ಲಿ,ವಿಶಿಷ್ಟವಾದ ಹಬ್ಬ ಆಚರಣೆಯಲ್ಲಿದೆ ಬೇಡ ಸಮುದಾಯದ ಮ್ಯಾಸಬೇಡ ಬುಡಕಟ್ಟು ಸಂಸ್ಕೃತಿಯ ವಿಶಿಷ್ಟ ಆಚರಣೆ ಇದಾಗಿದೆ.ವಿಶಿಷ್ಟ ಆಚರಣೆ ನಿಗಿನಿಗಿ ಕೆಂಡವನ್ನು ಬರಿಗೈಯಿಂದ ಬೆಂಕಿ ಜೊತೆಯ ಸರಸವಾಡುವ ವೈಭವ,ಮಾ7ರಂದು ರಾತ್ರಿ 11 ಗಂಟೆ ಸುಮಾರಿಗೆ ತಾಲೂಕಿನ ಕುಗ್ರಾಮ ಹೊಸಹಟ್ಟಿಯಲ್ಲಿ ನಡೆದಿದೆ. ಕೆಂಡದ ಮಳೆಯನ್ನು ನೋಡಲು ಜನಸಾಗರವೇ ಸೇರಿತ್ತು,
ಹೊಸಹಟ್ಟಿ ಗ್ರಾಮದ ಆರಾಧ್ಯ ದೈವ ಶ್ರೀಬಗ್ಗಲುಓಬಳೇಶ್ವರ ದೇವರ ಗುಗ್ಗರಿಹಬ್ಬದ ಜಾತ್ರೆ 3ವರ್ಷಕ್ಕೊಮ್ಮೆ ನಡೆಸಲಾಗುತ್ತಿದೆ.ಅದರಂತೆ ನಿನ್ನೆ ರಾತ್ರಿ ಈ ವಿಶಿಷ್ಟ ಹಬ್ಬವನ್ನು ಗ್ರಾಮದ ಜನತೆ ಆಚರಿಸಿದರು,ಬಗ್ಗಲು ಅಂದರೆ ಇದ್ದಿಲು ಇದರ ಪ್ರಿಯ ದೇವರಾದ ಓಬಳೇಶನ ದೇವಸ್ಥಾನದ ಆವರಣದ ಮುಂದೆ ಜರುಗಿತು.ಸಂಜೆಯಿಂದಲೇ ಬೆಂಕಿ ಕೆಂಡ ಹಾಕಿ 10ಕ್ಕೂ ಹೆಚ್ಚು ಭಕ್ತರ ಯುವ ಸಮೂಹ ಹಾಕಿದ ಬೆಂಕಿಯ ಕೆಂಡ ತೂರಲು ಸಜ್ಜಾಗಿರುತ್ತಾರೆ, ವಿಶಿಷ್ಟ ಆಚರಣೆಯ ಪೂಜಾಕಾರ್ಯಗಳಲ್ಲಿ ಭಾಗವಹಿಸಿ ಗಂಗೆ ಪೂಜೆ ನೆರವೇರಿಸ ಲಾಗುತ್ತದೆ. ಹಾಕಿದ ಬೆಂಕಿ ಕೆಂಡದ ರೂಪಕ್ಕೆ ತಿರುಗುತ್ತಿದ್ದಂತೆ ಗ್ರಾಮದ ವಿದ್ಯುತ್ ದೀಪವನ್ನು ತೆಗೆದು ಕತ್ತಲು ಮಾಡಲಾಗುತ್ತದೆ,ನಿಗಿನಿಗಿ ಕೆಂಡ ಮಾತ್ರ ಎಲ್ಲರಿಗೆ ಕಾಣಿಸುತ್ತಿದ್ದು ಗಂಗೆ ಪೂಜೆ ಮುಗಿಸಿಕೊಂಡು ಬಂದ ಭಕ್ತ ಸಮೂಹ ಬೆಂಕಿಯಲ್ಲಿ ಎಗರಿ ಬರಿಗೈಯಲ್ಲಿ ಕೆಂಡ ತೂರುತ್ತಾರೆ. ನೋಡುಗರಿಗೆ ಕೆಂಡದ ಮಳೆಯೇ ಸುರಿವ ಭಾಸವಾಗಿರುತ್ತದೆ,ಆ ವಿಸ್ಮಯ ನೋಡಲು ಕಣ್ಣೆರಡು ಸಾಲದು ಎಂದೆನಿಸುತ್ತದೆ.ಅಬ್ಬಾ ಅಬ್ಬಾ. ಗಂಟೆಗಟ್ಟಲೆ ಸುರಿವ ಕೆಂಡದ ಮಳೆಯಲ್ಲಿ ಮಿಂದೆದ್ದ ಭಕ್ತ ಸಮೂಹ,ಭಕ್ತ ಪರವಶರಾಗಿ ಕುಣಿದು ಕುಪ್ಪಳಿಸುತ್ತಿರುತ್ತಾರೆ ಬರಿಗೈಯಲ್ಲಿ ಕೆಂಡವನ್ನು ನೋಡಲು ಬಂದ ಜನತೆ ಮೇಲೆ ಎಸೆದರೂ ಕೂಡ ಯಾರಿಗೂ ಬೆಂಕಿಯಿಂದ ಯಾವುದೇ ಅಪಾಯವಾಗಿಲ್ಲ. ಈ ವಿಶಿಷ್ಟ ಆಚರಣೆ ತಲೆ ತಲಾಂತರದಿಂದ ಪೂರ್ವಜರ ಕಾಲದಿಂದಲೂ ಈ ಬೆಂಕಿ ತೂರುವ ಜಾತ್ರೆ ನಡೆಸಿಕೊಂಡು ಬರುತ್ತಿದ್ದೇವೆ, ಈ ವಿಶಿಷ್ಟ ಜಾತ್ರೆಯಲ್ಲಿ ಮದ್ಯ ಮಾಂಸದ ಮಾತಿಲ್ಲ ಕಾಲಿಗೆ ಜಾತ್ರೆ ಸಮಯದ ತಿಂಗಳಿನಿಂದ ಚಪ್ಪಲಿ ಸಹ ಹಾಕದೆ ಹಳೆಯ ಸಂಪ್ರದಾಯದಂತೆ ಆಚರಣೆಯನ್ನು ಮುಂದುವರೆಸಿಕೊಂಡು ಬಂದಿರುವುದಾಗಿ. ಈ ಜಾತ್ರೆ ನೋಡಲು ಇತ್ತೀಚಿಗೆ ಕರ್ನಾಟಕದ ಮೂಲೆ ಮೂಲೆಯಿಂದ ಬರುತ್ತಿದ್ದಾರೆ,ಜಾತ್ರೆಯ ವೈಭವವನ್ನು ಕೊಂಡಾಡಿದ್ದಾರೆ ಎನ್ನುತ್ತಾರೆ ಗ್ರಾಮದ ಹಿರಿಯರಾದ ಓಬಯ್ಯ,ಪಾಲಣ್ಣ, ಅಂಜಿನಪ್ಪ ಹಾಗೂ ಇತರರು. ಕೆಪಿಸಿಸಿ ಸದಸ್ಯ ಹಾಗೂ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಕಾಂಗ್ರೇಸ್ ಮುಖಂಡ ಲೋಕೇಶ ವಿ. ನಾಯಕ,
ಜಿ.ಪಂ. ಸದಸ್ಯ ತರಕಾರಿ ರೇವಣ್ಣ, ಎಪಿಎಂಸಿ ನಿರ್ದೇಶಕ ಹಾಗೂ ಕೂಡ್ಲಿಗಿ ಪಪಂ ಸದಸ್ಯ ಕಾವಲ್ಲಿ ಶಿವಪ್ಪನಾಯಕ ಸೇರಿದಂತೆ ಇತರೆ ಮುಖಂಡರು ಜಾತ್ರೆಯಲ್ಲಿ ಭಾಗವಹಿಸಿದ್ದರು.ಬಗ್ಗಲು ಶ್ರೀಓಬಳೇಶ ದೇವರ ಆಶೀರ್ವಾದ ಪಡೆದು ಕೆಂಡ ತೂರುವ ಸೊಬಗನ್ನು ಕಣ್ತುಂಬಿಸಿಕೊಂಡರು.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
