;

ಸಾಧಕಿ ಮಹಿಳೆಯರನ್ನು ಗೌರವಿಸುವುದು ನಮ್ಮಲ್ಲೆರ ಹೆಮ್ಮೆಯ ವಿಷಯ: ಡಾ.ಪಿ.ಎಂ. ಮಂಜುನಾಥ..!!

ವರದಿ. ಮಂಜುನಾಥ್, ಎಚ್

ಚಿತ್ರದುರ್ಗ: ಮೊಳಕಾಲ್ಮುರು: ಪಟ್ಟಣದ ಜಿಜೆಪಿ ಕಾರ್ಯಾಲಯದಲ್ಲಿ ಮಹಿಳಾ ಮೋರ್ಚಾ ಮೊಳಕಾಲ್ಮುರು ಮಂಡಲ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮತಾನಾಡಿದರು. ಚಿಕ್ಕೋಬನಹಳ್ಳಿ ಮಾರಕ್ಕ ಇವರು ಜಾನಪದ ರಾಜ್ಯ ಲೋಕ ಪ್ರಶಸ್ತಿಗೆ ಆಯ್ಕೆಯಾಗಿರುವುದು ಖುಷಿತರುವಂತ ವಿಷಯ. ಪುರುಷರ ಏಳ್ಗೆಯ ಹಿಂದೆ ಮಹಿಳೆಯರ ಪಾತ್ರ ಬಹಳ ಮುಖ್ಯ, ಮಾರಕ್ಕ ಇವರು ಜಾನಪದ, ಹರಳಯ್ಯ ಬಜನಾ ಮಂಡಳಿ ಮೂಲಕ ತತ್ವಪದ ಕಾರ್ಯಕ್ರಮ ನೀಡುತ್ತಿದ್ದರು ಹಾಗೂ ಕೋರನ ಸಮಯದಲ್ಲಿ ತಾಲ್ಲೂಕು ವೈದ್ಯಾಧಿಕಾರಿಯಾಗಿ ಹೆಚ್ಚಿನ ಶ್ರಮ ವಹಿಸಿ ಕಾರ್ಯ ನಿರ್ವಹಿಸಿದ ಡಾ|| ಪದ್ಮಾ ಅವರ ಕೊಡುಗೆ ಅಪಾರ ಎಂದು ತಿಳಿಸಿದರು. ಮಹಿಳಾ ಮೋರ್ಚಾ ಮಂಡಲಾಧ್ಯಕ್ಷೆ ಸರ್ವಮಂಗಳ ಮಾತನಾಡಿ ತಾಲ್ಲೂಕಿನಲ್ಲಿ ಕಲೆ, ಸಾಹಿತ್ಯ, ಸಂಗೀತಕ್ಕೆನು ಕೊರೆತೆ ಇಲ್ಲ  ಎಂಬುದಕ್ಕೆ ಜಾನಪದ ಕ್ಷೇತ್ರದಲ್ಲಿ ರಾಜ್ಯ ಪ್ರಶಸ್ತಿ ಪಡೆದುಕೊಂಡ ಚಿಕ್ಕೋಬನಹಳ್ಳಿ ಮಾರಕ್ಕ ಅವರೇ ಒಂದು ಉದಾಹರಣೆ ಹಾಗೂ ಅದೇ ರೀತಿ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹಿಳೆ ಸುಮಂಗಳಮ್ಮ ವೀರಭದ್ರಪ್ಪ ಇವರಿಗೆ ರಾಜ್ಯ ಪ್ರಶಸ್ತಿ ದೊರಕಿರುವುದು ಸಂತೋಷದ ವಿಷಯವಾಗಿದೆ. ಕೋರಾನ ಎಂಬ ಭಯದಲ್ಲಿರುವ ಸಮಯದಲ್ಲಿ ಜನರಿಗೆ ಧೈರ್ಯ ತುಂಬಿ ಸ್ವಚ್ಚತೆ ಮತ್ತು ಕೋರಾನ ಎಂಬ ವೈರಸ್ಸನ್ನು ಹೇಗೆ ನಿಯಂತ್ರಿಸಬೇಕು ಅದರಿಂದ ಪಾರಗುವ ಮುನ್ಸೂಚನೆಯನ್ನು ಪ್ರತಿ ಹಳ್ಳಿಗಳಿಗೆ ಬೇಟಿಕೊಟ್ಟು ಕೊರಾನ ವೈರಸ್ಸಿಗೆ ಭಯಪಡುವ ಅವಶ್ಯಕತೆ ಇಲ್ಲ ಎಂದು ಡಾ.ಪದ್ಮಾ ಕಾರ್ಯನಿರ್ವಹಿಸಿದರು. ಇಂತಹ ಮಹಿಳೆಯರು ಮಾದರಿಯಾಗಿದ್ದು, ಅವರ ಆದರ್ಶ ಗುಣಗಳು ಎಲ್ಲಾ ಮಹಿಳೆಯರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ ಎಂದು ತಿಳಿಸಿದರು.  ಪ.ಪಂ.ಸದಸ್ಯೆ ಮತ್ತು ಮಹಿಳಾ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ರೂಪ ಮಾತನಾಡಿ ಪ್ರಸ್ತುತ ದಿನಗಳಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದ್ದಾರೆ. ಮಹಿಳೆಯರು ಬರೀ ಅಡುಗೆ ಕೋಣೆಗೆ ಸೀಮಿತವಾಗದೇ ಇಂದು ದೇಶವನ್ನಾಳುವ ಹಂತಕ್ಕೆ ತಲುಪಿದ್ದೇವೆ. ಇದು ನಮ್ಮ ಮಹಿಳೆಯರಿಗೆಲ್ಲ ಹೆಮ್ಮೆಯ ಸಂಗತಿ. ಸ್ತ್ರೀಯನ್ನು ಆರಾಧಿಸುವ ಸಮಾಜದಲ್ಲಿ ಇಂದು ಸ್ತ್ರೀ ಶೋಷಣೆಗೊಳಪಡುತ್ತಿದ್ದಾರೆ. ಇದನ್ನು ನಿರ್ಮೂಲನೆ ಮಾಡುವುದರಲ್ಲಿ ಎಲ್ಲರೂ ಶ್ರಮಿಸಬೇಕು ಮತ್ತು ಇನ್ನು ಕಠಿಣ ಶಿಕ್ಷೆಗಳು ಜಾರಿಯಾಗಬೇಕಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಮಹಿಳಾ ಮೋರ್ಚಾ ಜಿಲ್ಲಾ ಉಪಾಧ್ಯಕ್ಷೆ ಈರಮ್ಮ , ಪ್ರಧಾನ ಕಾರ್ಯದರ್ಶಿ ಕೆ.ಆರ್.ವಿದ್ಯಾ, ತಾಲ್ಲೂಕು ಉಪಾಧ್ಯಕ್ಷೆ ಪಾರ್ವತಿ ವಾಂಜ್ರೆ , ತಾಲ್ಲೂಕು ಕಾರ್ಯದರ್ಶಿ ಶುಭ, ವೈದ್ಯಾಧಿಕಾರಿ ಡಾ.ಪದ್ಮ , ಜಾನಪದ ಕಲಾವಿದೆ ಮಾರಕ್ಕ, ಪ.ಪಂ.ಸದಸ್ಯರಾದ ಲೀಲಾವತಿ, ಲಕ್ಷ್ಮಿದೇವಿ,  ಹಾಗೂ ಟಿ.ಟಿ.ನಿರ್ಮಲಮ್ಮ , ಲಕ್ಷ್ಮಿ , ರಾಧಾ ಇನ್ನು ಹೆಚ್ಚಿನ ಮಹಿಳೆಯರು ಭಾಗವಹಿಸಿದ್ದರು.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;