;

ಬಿ.ಜಿ.ಕೆರೆ: ವಸುಂಧರಾ ಕೃಷಿ ಕ್ಷೇತ್ರಕ್ಕೆ ಮಾಜಿ ಸಚಿವ ಟಿ.ಬಿ. ಜಯಚಂದ್ರ ಭೇಟಿ..!!

ವರದಿ. ಮಂಜುನಾಥ್, ಎಚ್

ಚಿತ್ರದುರ್ಗ: ಮೊಳಕಾಲ್ಮುರು ತಾಲ್ಲೂಕಿನ ಬಿ.ಜಿ.ಕೆರೆ ಗ್ರಾಮದಲ್ಲಿ ಇಂದು ಮಾಜಿ ಸಚಿವ ಟಿ.ಬಿ.ಜಯಚಂದ್ರ ತಾಲೂಕಿನ ಬಿ.ಜಿ.ಕೆರೆ ವಸುಂಧರ ಕೃಷಿ ಕ್ಷೇತ್ರಕ್ಕೆ ಭೇಟಿ ನೀಡಿ ಪ್ರಗತಿ ಪರ ರೈತ ಎಸ್.ಸಿ.ವೀರಭದ್ರಪ್ಪ ಅವರ ಬಳಿ ಕಲ್ಪರಸ ಇಳಿಸುವ ಕುರಿತು ಚರ್ಚೆ ನಡೆಸಿದರು. ವಸುಂದರ ಕೃಷಿ ಕ್ಷೇತ್ರದಲ್ಲಿ ಕೈಗೊಂಡಿರುವ ಸಮಗ್ರ ಕೃಷಿ ಪದ್ಧತಿಯ ಕುರಿತು ಚರ್ಚೆ ನಡೆಸಿದ ಅವರು, ತೆಂಗಿನ ಮರದಿಂದ ಕಲ್ಪರಸ ತೆಗೆಯುವುದು, ಮಾರುಕಟ್ಟೆ ವ್ಯವಸ್ಥೆ ಮತ್ತು ಎಷ್ಟು ಸಮಯದಲ್ಲಿ ಮಾರಾಟಮಾಡಬೇಕು. ಯಾವ ರೀತಿಯಲ್ಲಿ ಸಂಗ್ರಹ ಮಾಡಬೇಕು. ಆರೋಗ್ಯಕ್ಕೆ ಅದರಿಂದಾಗುವ ಪ್ರಯೋಜನೆಗಳ ಕುರಿತು ರೈತರೊಡನೆ ಸಮಗ್ರವಾಗಿ ಮಾಹಿತಿ ಪಡೆದರು. ಬರದ ನಡುವೆಯೂ ಸಮೃದ್ಧವಾಗಿ ಬೆಳೆಸಿರುವ ತೋಟದಲ್ಲಿ ಸುತ್ತಾಡಿದ ಅವರು, ಅಲ್ಲಿ ಕೈಗೊಂಡಿರುವ ಕುರಿ ಸಾಕಣಿಕೆ, ಹಸು ಸಾಕಣೆ, ಜೇನು ಸಾಕಣೆ, ತೆಂಗು, ಶ್ರೀಗಂಧ, ಬಾಳೆ, ಹುಣಸೆ ಸೇರಿ ವಿವಿಧ ತೋಟಗಾರಿಕೆಗೆ ಬೆಳೆಗಳನ್ನು ವೀಕ್ಷಣೆ ಮಾಡಿದರು. ಮಾಜಿ ಸಚಿವ ಟಿ.ಬಿ.ಜಯಚಂದ್ರ ಮಾತನಾಡಿ, ಸದಾ ಬರಕ್ಕೆ ತುತ್ತಾಗುವಂತ ಈ ಭಾಗದಲ್ಲಿ ಮಳೆ ಬೀಳುವುದು ಕಡಿಮೆ. ನೀರನ್ನು ಸದ್ಬಳಕೆ ಮಾಡಿಕೊಂಡು ನಾನಾ ತರದ ತೋಟಗಾರಿಕೆ ಬೆಳೆಗಳನ್ನು ಬೆಳೆದಿರುವ ರೈತ ವೀರಭದ್ರಪ್ಪ ಅವರು ಇತರರಿಗೆ ಮಾದರಿಯಾಗಿದ್ದಾರೆ. ಕಸದಿಂದ ರಸ ಎನ್ನುವಂತೆ ತೋಟದಲ್ಲಿರುವ ತ್ಯಾಜ್ಯವನ್ನು ವ್ಯರ್ಥ ಮಾಡದೆ ಸದ್ಬಳಕೆ ಮಾಡಿಕೊಂಡು ತೆಂಗಿನ ಮರಗಳಿಗೆ ಗೊಬ್ಬರವನ್ನಾಗಿಸಿದ್ದಾರೆ. ರೈತರು ಇವರ ಮಾರ್ಗದರ್ಶನ ಪಡೆಯಬೇಕು. ಆಧುನಿಕತೆಯನ್ನು ಸದ್ಬಳಕೆಮಾಡಿಕೊಂಡು ತೋಟವನ್ನು ಸಮೃದ್ಧಿಯಾಗಿ ಬೆಳೆಸಿರುವ ಶ್ರಮ ಶ್ಲಾಘನೀಯ ಎಂದು ಹೇಳಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಡಾ.ಬಿ.ಯೋಗೇಶ ಬಾಬು ಮಾಜಿ ಸಚಿವ ಟಿ.ಬಿ.ಜಯಚಂದ್ರ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಗ್ರಾ.ಪಂ ಉಪಾಧ್ಯಕ್ಷ ಶಿವಾರೆಡ್ಡಿ, ಕಾಂಗ್ರೆಸ್ ಮುಖಂಡರಾದ ಎಂ.ಪಿ.ನಾಗರಾಜ, ನಾಗನಗೌಡ ಎಸ್.ಜಯಣ್ಣ ಡಿ.ಪಿ. ಬಸವರಾಜ, ಗ್ರಾಪಂ ಸದಸ್ಯ ಮಹೇಶ, ಕೊಲ್ಲಣ್ಣ ಆನಂದ, ಗ್ರಾಪಂ ಮಾಜಿ ಅಧ್ಯಕ್ಷ ಅಜ್ಜಯ್ಯ, ಉಪಸ್ಥಿತರಿದ್ದರು.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;