ವರದಿ. ಬಸವರಾಜ್ ಹಿರೇಮಠ್ ಲಿಂಗಸಗೂರು

ಜಾಗೀರನಂದಿಹಾಳ ಗ್ರಾಮದ ರೈತರಿಂದ ಕೃಷಿ ಅಧಿಕಾರಿಗಳಿಗೆ ಘೇರಾವ ..
ಲಿಂಗಸ್ಗೂರು ತಾಲೂಕಿನ ಜಾಗೀರನಂದಿಹಾಳ ಗ್ರಾಮದಲ್ಲಿ ರೈತರು ಹಾಗೂ ರೈತ ಸಂಘಟನೆಯ ಮುಖಂಡರು ಸೇರಿಕೊಂಡು ಇಂದು ಮುಂಜಾನೆ ಲಿಂಗಸ್ಗೂರು ಕೃಷಿ ಅಧಿಕಾರಿಗಳಾದ ಸಿದ್ದಪ್ಪ AEO, ಆಶೋಕ ಕಾಂಬಳೆ ರವರನ್ನು ಗ್ರಾಮದಲ್ಲಿ ಘೇರಾವ ಹಾಕಿದರು
ಕಳೆದ ವರ್ಷ ಸಿಂಧನೂರು ನಗರದಲ್ಲಿರುವ ಸೂರ್ಯ ಆಗ್ರೋ ಕೇಂದ್ರದಿಂದ ಲಿಂಗಸ್ಗೂರು ತಾಲೂಕಿನ ಜಾಗೀರನಂದಿಹಾಳ ಗ್ರಾಮದ ರೈತರಿಗೆ ಕಳೆಪೆ ಗುಣ ಮಟ್ಟದ ಭತ್ತದ ಬೀಜಗಳನ್ನು ಗ್ರಾಮಕ್ಕೆ ಬಂದು ಮಾರಾಟ ಮಾಡಿ ಹೋಗಿದ್ದು,
ಸುಮಾರು ಎರಡು ನೂರು ಎಕರೆಯಲ್ಲಿ ಈ ಬೀಜಗಳಿಂದ ಬಂದ ಭತ್ತದ ಸಸಿಗಳನ್ನು ನಾಟಿ ಮಾಡಿದ ರೈತರಿಗೆ ಫಸಲು ಬಾರದೆ ಕಳೆದ ವರ್ಷ ಲಕ್ಷಾಂತರ ರೂಪಾಯಿ ನಷ್ಟವಾಗಿತ್ತು
ಈ ಬಗ್ಗೆ ಕಳೆದ ವರ್ಷ ಮಾರ್ಚ-2020 ನೇ ತಿಂಗಳಲ್ಲಿ ಲಿಂಗಸ್ಗೂರು ಕೃಷಿ ಇಲಾಖೆಯ ಅಧಿಕಾರಿಗಳಿಗೆ ರಾಜ್ಯ ರೈತ ಸಂಘಟನೆಯ ವತಿಯಿಂದ ದೂರು ನೀಡಲಾಗಿತ್ತು,
ದೂರನ್ನು ಆಧಾರಿಸಿ ಗ್ರಾಮದ ಜಮೀನುಗಳಿಗೆ ಕೃಷಿ ವಿಜ್ಞಾನಿಗಳು ಬೇಟಿ ನೀಡಿ ಪರೀಕ್ಷೆ ಮಾಡಿ, ಕಳೆಪೆ ಬೀಜ ನಾಟಿ ಮಾಡಿದ್ದು ನಿಜ ಇದೆ ಎಂದು ವರದಿ ನೀಡಿದ್ದರೂ ಸಹ ಕೈಷಿ ಇಲಾಖೆಯ ಅಧಿಕಾರಿಗಳು ಸೂರ್ಯ ಆಗ್ರೋ ಕೇಂದ್ರದ ಮೇಲೆ ಯಾವುದೇ ಕಾನೂನು ಕ್ರಮ ಜರುಗಿಸಿದ್ದಿಲ್ಲ
ಹಾಗೂ ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಕೃಷಿ ವಿಜ್ಞಾನಿಗಳ ವರದಿ ಆಧಾರಿಸಿ ಎಕರೆಗೆ 50 ಸಾವಿರದಂತೆ ರೈತರಿಗೆ ನಷ್ಟ ಪರಿಹಾರ ಕೊಡುವುದುದಾಗಿ ಭರವಸೆ ನೀಡಿದ್ದರು .
ಆದರೆ ಇದುವರೆಗೂ ರೈತರಿಗೆ ಪರಿಹಾರದ ಹಣ ನೀಡಿರುವದಿಲ್ಲ. ಈ ವರ್ಷವು ಸಹ ಗ್ರಾಮದ ಕೆಲ ರೈತರು ಸೂರ್ಯ ಆಗ್ರೋ ಕೇಂದ್ರದಿಂದ ಭತ್ತದ ಬೀಜಗಳನ್ನು ತಂದು ನಾಟಿ ಮಾಡಿರುವದರಿಂದ ಜನೆವರಿ-2021 ತಿಂಗಳಲ್ಲಿ ಸ್ಥಳಕ್ಕೆ ಬಂದು ಪರಿಶೀಲನೆ ಮಾಡುವಂತೆ ದೂರು ನೀಡಿದ್ದು,
ದೂರು ನೀಡಿ ಮೂರು ತಿಂಗಳ ನಂತರ ಕೃಷಿ ಅಧಿಕಾರಿಗಳು ಗ್ರಾಮಕ್ಕೆ ಬೇಟಿ ನೀಡಿದ್ದು, ನಾಟಿ ಮಾಡಿದ 2-3 ದಿನಗಳಲ್ಲಿ ಪರೀಕ್ಷೆ ಮಾಡುವಂತೆ ಕೇಳಿಕೊಂಡಿದ್ದರು ಕೃಷಿ ಅಧಿಕಾರಿಗಳು ನಿರ್ಲಕ್ಷ್ಯಮಾಡಿ ತಡವಾಗಿ ಪರಿಶೀಲನೆ ಮಾಡಲು ಗ್ರಾಮಕ್ಕೆ ಬೇಟಿ ನೀಡಿದ್ದಾರೆ ಆಗಾಗಿ ಕೃಷಿ ಅಧಿಕಾರಿಗಳಿಗೆ ಘೇರಾವ ಹಾಕಿ ಗ್ರಾಮದಲ್ಲಿ ತಡೆದಿದ್ದು ,ಗ್ರಾಮಕ್ಕೆ ಲಿಂಗಸ್ಗೂರು ADA ಬರುವವರೆಗೆ ಗ್ರಾಮದಲ್ಲಿ ಘೇರಾವ ಹಾಕಿರುವ ಅಧಿಕಾರಿಗಳನ್ನು ಬಿಡುವದಿಲ್ಲವೆಂದು ಲಿಂಗಸ್ಗೂರು ತಾಲೂಕಿನ ರಾಜ್ಯ ರೈತ ಸಂಘದ(ಕೋಡಿಹಳ್ಲಿ ಬಣ್ಣ )ಅಧ್ಯಕ್ಷರಾದ ಶ್ರೀ ಶಿವಪುತ್ರಗೌಡ ಜಾಗೀರನಂದಿಹಾ. ಮತ್ತು ರೈತರು ಈ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
