ತಾರತಮ್ಯವಿಲ್ಲದೆ ಮಕ್ಕಳನ್ನು ಆರೈಕೆ ಮಾಡಿ ಹರಪನಹಳ್ಳಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್.ಪ್ರಕಾಶ್ ಹೇಳಿಕೆ
ಹರಪನಹಳ್ಳಿ: ಕೂಸಿನಮನೆಯ ಮಕ್ಕಳ ಆರೈಕೆ ಎಂದರೆ ಬರೀ ಊಟ, ಪಾಠ ಮಾತ್ರವಲ್ಲ, ಯಾವುದೇ ತಾರತಮ್ಯವಿಲ್ಲದೆ ಮನೆಯ ಮಕ್ಕಳಂತೆ ಕಂಡು ನೋಡಿಕೊಳ್ಳುವ ಜವಾಬ್ದಾರಿ ಆರೈಕೆದಾರರ ಮೇಲಿದೆ ಎಂದು ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಕೆ.ಆರ್.ಪ್ರಕಾಶ್ ಅವರು ತಿಳಿಸಿದರು.
ಹರಪನಹಳ್ಳಿ ಪಟ್ಟಣದ ತಾಲೂಕು ಪಂಚಾಯಿತಿಯ ಆವರಣದಲ್ಲಿರುವ ಸಾಮರ್ಥ್ಯ ಸೌಧದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಶ್ರಯದಲ್ಲಿ ಕೂಸಿನ ಮನೆಯ ಮಕ್ಕಳನ್ನು ಆರೈಕೆ ಮಾಡುವವರಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಕೂಸಿನಮನೆ ಸ್ಥಾಪನೆಯು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ದೊಡ್ಡ ಮತ್ತು ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿದೆ. ಈ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸಿ ಮಕ್ಕಳ ಬೌದ್ದಿಕತೆ, ಮಾನಸಿಕ, ಆರೋಗ್ಯಯುತವಾಗಿ ನೋಡಿಕೊಳ್ಳುವುದು ಆರೈಕೆದಾರರ ಮೇಲೆ ಇರುತ್ತದೆ. ಈ ನಿಟ್ಟಿನಲ್ಲಿ ತರಬೇತಿ ಕಾರ್ಯಾಗಾರ ಹಮ್ಮಿಕೊಂಡಿದ್ದು, ಶಿಬಿರ ಐದು ದಿನಗಳವರೆಗೆ ನಡೆಯುತ್ತದೆ. ಎಲ್ಲರೂ ಉತ್ತಮ ರೀತಿಯಲ್ಲಿ ತರಬೇತಿ ಪಡೆಯಬೇಕು. ಐದು ದಿನವೂ ಕಡ್ಡಾಯವಾಗಿ ಹಾಜರಾಗಬೇಕು. 37 ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಸುಸಜ್ಜಿತ ಕಟ್ಟಡಗಳನ್ನು ಆಯ್ಕೆ ಮಾಡಿ, ಕೂಸಿನೆ ಮನೆ ಆರಂಭಿಸಲಾಗುವುದು. ಪ್ರತೀ ಪಂಚಾಯಿತಿಯ ಒಂದು ಕಡೆ ಕೂಸಿನ ಮನೆ ಆರಂಭ ಮಾಡಲಾಗುವುದು. ಎಲ್ಲಿ ಕೂಸಿನ ಮನೆ ಇರುತ್ತದೆಯೋ ಅದೇ ಗ್ರಾಮದಲ್ಲಿನ ಅರ್ಹ ನರೇಗಾದ ಇಬ್ಬರು ಕೂಲಿ ಕಾರ್ಮಿಕರಿಗೆ ತರಬೇತಿ ನೀಡಲಾಗುತ್ತಿದೆ. ತರಬೇತಿ ಪಡೆದವರು ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸಬೇಕು ಎಂದು ತಿಳಿಸಿದರು.
ತಾಲೂಕು ನರೇಗಾ ಸಹಾಯಕ ನಿರ್ದೇಶಕರಾದ ಯು.ಎಚ್.ಸೋಮಶೇಖರ್
ಮಾತನಾಡಿ, ಎಲ್ಲ ಶಿಬಿರಾರ್ಥಿಗಳು ಸರಿಯಾದ ರೀತಿಯಲ್ಲಿ ತರಬೇತಿ ಪಡೆಯಿರಿ. ಮಾನವ ದಿನಗಳು ಮುಗಿದ ಬಳಿಕ ಉಳಿದ ಅರ್ಹ ಕೂಲಿ ಕಾರ್ಮಿಕರಿಗೂ ಈ ಅವಕಾಶ ಇದೆ. ಆದ್ದರಿಂದ ಶಿಬಿರಾರ್ಥಿಗಳು ಯಾವುದೇ ನಿರ್ಲಕ್ಷ್ಯ ತೋರದೆ 6 ತಿಂಗಳಿಂದ 3 ವರ್ಷದೊಳಗಿನ ಮಕ್ಕಳನ್ನು ಆರೈಕೆ ಮಾಡಬೇಕು ಎಂದರು.
ತರಬೇತಿಯಲ್ಲಿ ಪಾಲ್ಗೊಂಡಿರುವವರು ಎಲ್ಲರೂ ಹಳ್ಳಿಗಳಿಂದ ಬಂದವರು ಜತೆಗೆ ವಿದ್ಯಾವಂತರೆ. ಹೀಗಾಗಿ ಯಾರೂ ಮಕ್ಕಳನ್ನು ಆರೈಕೆ ಮಾಡುವಾಗ ತಮ್ಮ ಮಕ್ಕಳಂತೆ ನೋಡಿಕೊಂಡು ಸರ್ಕಾರ ನೀಡುವ ಆಹಾರ ನೀಡಿ ಎಲ್ಲ ಮಕ್ಕಳು ಪೌಷ್ಟಿಕವಾಗಿ ಬೆಳೆಯಬೇಕು ಎಂದರು.
ವೀರಣ್ಣ ಲಕ್ಕಣ್ಣನವರ್
ಸಹಾಯಕ ನಿರ್ದೇಶಕ(ಪಂ.ರಾಜ್) ರಾದ ಕೂಸಿಗೆ ಬರುವ ಮಕ್ಕಳನ್ನು ತಾರತಮ್ಯಭಾವದಿಂದ ಕಾಣದೆ ಎಲ್ಲರೂ ಒಂದೇ ತಾಯಿ ಮಕ್ಕಳು, ತನ್ನ ಮಕ್ಕಳೆ ಎನ್ನುವ ಹಾಗೆ ಆರೈಕೆ ಮಾಡಬೇಕು. ಜಾತಿ, ಮತ, ಧರ್ಮ ಅಂತ ಕಾಣದೆ ಎಲ್ಲರನ್ನು ಒಂದೇ ರೀತಿಯಲ್ಲಿ ಪ್ರೀತಿ, ವಾತ್ಸಲ್ಯ ತೋರಿಸಿ ನೋಡಿಕೊಳ್ಳಬೇಕು.ಕೆ.ಆರ್.ಪ್ರಕಾಶ್, ಕಾರ್ಯನಿರ್ವಾಹಕ ಅಧಿಕಾರಿ, ತಾಪಂ, ಹರಪನಹಳ್ಳಿಈ ಸಂದರ್ಭದಲ್ಲಿ ಐಇಸಿ ಸಂಯೋಜಕರಾದ ಕೆ.ವಸಿಗೇರಪ್ಪ ಚಾಗನೂರು, ತರಬೇತುದಾರರಾದ ಸಿಡಿಪಿಒ ಇಲಾಖೆಯ ರೇಣುಕಾ ಜುಟ್ಲೆ, ಹೇಮಾ ಮತ್ತಿತರರು ಇದ್ದರು…

ವರದಿ.ಪ್ರತಾಪ್, ಸಿ, ಹರಪನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
