;

ಡಿಜಿಟಲ್ ಗ್ರಥಾಲಯ ಮಂಜೂರು ಮಾಡುವಂತೆ ಎ.ಐ.ಕೆ.ಎಸ್ ಇಂದ ಮಾನ್ಯ ಶಾಸಕರು ಬಿ.ದೇವೆಂದ್ರಪ್ಪ ಅವರಿಗೆ ಮನವಿ…!!!

ಡಿಜಿಟಲ್ ಗ್ರಥಾಲಯ ಮಂಜೂರು ಮಾಡುವಂತೆ ಎ.ಐ.ಕೆ.ಎಸ್ ಇಂದ ಮಾನ್ಯ ಶಾಸಕರು ಬಿ.ದೇವೆಂದ್ರಪ್ಪ ಅವರಿಗೆ ಮನವಿ

ವಿಷಯ : ಹರಪನಹಳ್ಳಿ ತಾಲ್ಲೂಕಿನ ಅರಸಿಕೇರೆ ಹೋಬಳಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಹಿಂದೂಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಹಾಸ್ಟಾಲ್ ಮತ್ತು ಉನ್ನತ ಮಟ್ಟದ ಗ್ರಂಥಲಯವನ್ನು ಮಂಜೂರು ಮಾಡುವಂತೆ ಎ.ಐ.ಕೆ.ಎಸ್ ವತಿಯಿಂದ ಬಿ.ದೇವೆಂದ್ರಪ್ಪ ಅವರಿಗೆ ಮನವಿ ಪತ್ರ ನೀಡಲಾಯಿತು

ಹರಪನಹಳ್ಳಿ ತಾಲ್ಲೂಕಿನ ಅರಸಿಕೇರೆ ಹೋಬಳಿ ಮಟ್ಟದ ಗ್ರಾಮವಾಗಿದ್ದು, ತಾಲ್ಲೂಕಿನಲ್ಲಿ ಹೆಚ್ಚು ಶಾಲಾ ಕಾಲೇಜ್ ಹೊಂದಿರುವ ದೊಡ್ಡ ಗ್ರಾಮವಾಗಿದ್ದು, ಸುಮಾರು ೪೦ ವರ್ಷಗಳಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ, ಅಲ್ಪಸಂಖ್ಯಾತರ ವಿದ್ಯಾರ್ಥಿ ನಿಲಯ ಮತ್ತು ವಸತಿ ನಿಲಯಗಳು ಕೂಡಲೆ ಮಂಜೂರು ಮಾಡಬೇಕು ಹಾಗೂ ಸದರಿ ಹೋಬಳಿ ವ್ಯಾಪ್ತಿಯಲ್ಲಿ ಬರುವ ಬಡ ಮತ್ತು ಮಾಧ್ಯಮದ ವಿದ್ಯಾರ್ಥಿಗಳು ಹಾಸ್ಟಾಲ್ ಸೌಲಭ್ಯಗಳು ಇಲ್ಲದೆ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.

ಸದರಿ ಭಾಗದಲ್ಲಿ ವಿದ್ಯಾಭ್ಯಾಸವನ್ನು ಮಾಡಿ ಉನ್ನಟ ಮಟ್ಟದ ಅಧಿಕಾರಿಗಳು, ವಿಜ್ಞಾನಿಗಳು, ಆಯುಕ್ತರು, ಇಂಜಿನಿಯರು, ಪೋಲಿಸ್ ಅಧಿಕಾರಿಗಳು, ಶಿಕ್ಷಕರುಗಳು ಹಾಗನೇ ಒಳ್ಳೆಯ ರಾಜಕಾರಣಿಗಳಾಗಿರುವ ಹೋಬಳಿಯಾಗಿದ್ದು ಹಾಗೂ ಇನ್ನು ಅನೇಕ ಕ್ಷೇತ್ರದಲ್ಲಿ ಹೆಸರು ಮಾಡಿದಂತಹ ಕ್ಷೇತ್ರವಾಗಿರುತ್ತದೆ ಇತ್ತಿಚಿನ ಕಳೆದ ೩೦ ವರ್ಷಗಳಿಂದ ಪಿಯು ಕಾಲೇಜ್‌ಗಳು ಪ್ರಾರಂಭವಾಗಿದೆ ಜೋತೆಗೆ ಕೈಗಾರಿಕ ತರಬೇತಿಕೇಂದ್ರ,ಪದವಿ ಕಾಲೇಜುಗಳು ಪ್ರಾರಂಭವಾಗಿ ಉನ್ನತ ಮಟ್ಟದ ಶಿಕ್ಷಣ ಸೇವೆಯನ್ನು ಮಾಡುತ್ತಿದ್ದಾರೆ,

ವಿದ್ಯಾಭ್ಯಾಸಕ್ಕಾಗಿ ಬರುವ ಮಕ್ಕಳ ಪೋಷಕರು ಕೃಷಿ ಕೂಲಿ ಕಾರ್ಮಿಕರು, ಸಣ್ಣ ರೈತರು, ಕಟ್ಟಡ ಕಾರ್ಮಿಕರು, ದೇವದಾಸಿ ತಾಯಂದಿರ, ದಲಿತ ಮತ್ತು ಹಿಂದುಳಿದ ಅಲ್ಪಸಂಖ್ಯಾತರ ಮಕ್ಕಳು ವಿದ್ಯಾಭ್ಯಾಸಕ್ಕೆ ಬರುತಿದ್ದಾರೆ ಜೊತೆಗೆ ತಾಲ್ಲೂಕು ಕೆಂದ್ರ ಜಿಲ್ಲಾ ಕೇಂದ್ರಗಳಿಗೆ ವಿದ್ಯಾಭ್ಯಾಸಕ್ಕಾಗಿ ಪೋಷಕರು ಮಹಿಳ ವಿದ್ಯಾರ್ಥಿಗಳನ್ನು ವಿದ್ಯಾಭ್ಯಾಸ ಮಾಡಿಸಲು ಹಣ ವಿಲ್ಲದ ಕಾರಣ ಅರಸಿಕೇರೆಯಲ್ಲಿರುವ ಶಾಲಾ ಕಾಲೇಜುಗಳಿಗೆ ತೆರಳಿ ವಿದ್ಯಾಭ್ಯಾಸವನ್ನು ಮಾಡಿಸುತ್ತಿದ್ದಾರೆ.

ಇಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಬಾಲಕರ ಮೇಟ್ರಿಕ್ ನಂತರ ವಿದ್ಯಾರ್ಥಿನಿಲಯವನ್ನು ಬಿಟ್ಟರೆ ಬೇರೆ ಯಾವುದೆ ವಸತಿ ನಿಲಯಗಳು ಇರುವುದಿಲ್ಲ .

ಈ ಬಗ್ಗೆ ಅಲವಾರು ಭಾರಿ ಅಖಿಲ ಭಾರತ ವಿದ್ಯಾರ್ಥಿ ಪೆಡರೇಷನ್ (ಎ.ಐ.ಕೆ.ಎಸ್) ಸಂಘಟನೆಯು ವಿದ್ಯಾರ್ಥಿಗಳ ನೇತೃತ್ವದಲ್ಲಿ ಹೊರಾಟ ಮಾಡಿದರು ಸಹಾ ಸಂಬಂದಿಸಿದ ಅಧಿಕಾರಿಗಳು ರಾಜಕಾರಣಿಗಳು ನಿರ್ಲಕ್ಷ ಮಾಡಿರುವುದು ಎದ್ದು ಕಾಣುತ್ತಿದೆ ಕೂಡಲೇ ಈ ಕೆಳಕಾಣಿಸಿದ ನ್ಯಾಯುತವಾದ ವಿದ್ಯಾರ್ಥಿಗಳ ವಸತಿನಿಲಯಗಳ ಬೇಡಿಕೆಯನ್ನು ಈ ಕೂಡಲೆ ಈಡೇರಿಸಬೇಕೆಂದು ಅಖಿಲಭಾರತ ವಿದ್ಯಾರ್ಥಿ ಪೆಡರೇಷನ್ ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತದೆ. ಹಾಗೆನೆ ತಾವುಗಳು ಸಹ ನಿರ್ಲಕ್ಷಮಾಡದೆ ಮುಂದಿನ ಪೀಳಿಗೆಯು ನಿಮ್ಮನ್ನು ನೆನಪಿಸಿಕೊಳ್ಳುವಂತಹ ಹಾಸ್ಟೇಲ್ ಗಳನ್ನು ನಿಮಾರ್ಣ ಮಾಡಬೇಂದು ತಮಗೆ ವಿನಂತಿಸಿಕೊಳ್ಳುತ್ತೇವೆ.

ಬೇಡಿಕೆಗಳು,
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿ ನಿಲಯದಲ್ಲಿ ಗ್ರಂಥಾಲಯ ಹಾಗೂ ಮೂಲಭೂತ ಸೌಲಭ್ಯದ ವ್ಯವಸ್ಥೆಯನ್ನು ಕಲ್ಪಿಸಿ ಉನ್ನತಿಕರಿಸಬೇಕು.ಮಹಿಳೆಯರಿಗೆ ಸರ್ಕಾರ ವತಿಯಿಂದ ಸಾವಿತ್ರಿ ಬಾಯಿ ಪೂಲೆ ಹೆಸರಿನಲ್ಲಿ ಎಸ್.ಸಿ. / ಎಸ್.ಟಿ ಹಾಗೂ ಬಿ.ಸಿ.ಎಂ ವಿದ್ಯಾರ್ಥಿನಿಯರಿಗೆ ಉನ್ನತ ಮಟ್ಟದ ವಸತಿ ನಿಲಯವನ್ನು ತೆರೆಯಬೇಕು.
೬ನೇ ತರಗತಿಯಿಂದ ೧೦ನೇ ತರಗತಿ ವಿದ್ಯಾರ್ಥಿಗಳ ಉನ್ನತ ಮಟ್ಟದ ವಿದ್ಯಾರ್ಥಿನಿಲಯವನ್ನು ತೆರೆಯಬೇಕು,ಈಗಿರುವ ಬಿ.ಸಿ.ಎಂ ವಿದ್ಯಾರ್ಥಿಗಳಿಗೆ ವಸತಿನಿಲಯ ತೆರೆಯಬೇಕು ಮುಂಜೂರಾದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಬಾಲಕೀಯರ ಮೇಟ್ರಿಕ್ ಪೂರ್ವ ವಸತಿ ನಿಲಯ ಕಟ್ಟಡ ನಿಮಾರ್ಣ ಮಾಡಬೇಕು.

ಈ ಸಂದರ್ಬದಲ್ಲಿ ಅರುಣ್ ಕುಮಾರ ಡಿ.ಹೆಚ್.ಬಸವರಾಜ ಕೆ.ನಿಂಗರಾಜ.ವೀರೆಶ್ ತಾಲ್ಲೂಕು ಕಾರ್ಯದರ್ಶಿ ಪ್ರವೀಣ್ ನಾಗೇಂದ್ರ ನಂದಿನಿ ಐಶ್ವರ್ಯ ನಮಿತ ನಿಕಿತ ಕಾಂ.ಗುಡಿಹಳ್ಳಿ ಹಾಲೇಶ್ ಎ.ಐ.ಕೆ.ಎಸ್ ಜಿಲ್ಲಾದ್ಯಕ್ಷರು…

ವರದಿ. ಪ್ರತಾಪ್, ಸಿ, ಹರಪನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;