ಸಾಸ್ವೆಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಿ ಶಾಂತಲಾ ಆಯ್ಕೆ
ಹರಪನಹಳ್ಳಿ:- ತಾಲೂಕಿನ ಸಾಸ್ವೆಹಳ್ಳಿ ಗ್ರಾಮ ಪಂಚಾಯಿತಿಯ ಎರಡನೇ ಅವಧಿಗೆ ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಶ್ರೀಮತಿ ಜಿ ಶಾಂತಲಾ ಉಪಾಧ್ಯಕ್ಷ ಟಿ ಬಸವರಾಜ್ ಆಯ್ಕೆ ಆಗಿದ್ದಾರೆ ಎಂದು ಚುನಾವಣೆ ಅಧಿಕಾರಿಯಾದ ಶ್ರೀ ರೇಣುಕಾದೇವಿ ಅವರು ಘೋಷಿಸಿದರು .
ಹರಪನಹಳ್ಳಿ ತಾಲೂಕಿನ ಸಾಸ್ವೆಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಒಟ್ಟು 18 ಸದಸ್ಯರ ಬಲಾಬಲ ಹೊಂದಿರುವ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಎರಡು ಬಣಗಳ ಮದ್ಯೆ ಪೈಪೋಟಿ ಏರ್ಪಟ್ಟಿತ್ತು ಕಾಂಗ್ರೆಸ್ 10 ಸದಸ್ಯರು ಮತ್ತು ಬಿಜೆಪಿ ಬೆಂಬಲಿತ ಸದಸ್ಯರುಗಳ ಸಂಖ್ಯೆ 8 ಇದ್ದರು ಆದರೆ 9 ಸದಸ್ಯರ ಬಲದೊಂದಿಗೆ ಅನುಸೂಚಿತ ಸಾಮಾನ್ಯ ಅಭ್ಯರ್ಥಿಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನವನ್ನು.ಜಿ ಶಾಂತಲಾ ಆಯ್ಕೆ ಯಾಗಿ ಮತ್ತು ಪರಿಶಿಷ್ಟ ಜಾತೀಯ ಮೀಸಲಾತಿ ಉಪಾಧ್ಯಕ್ಷ ಸ್ಥಾನಕ್ಕೆ ಟಿ ಬಸವರಾಜ್ ಆಯ್ಕೆಯಾದರು ಎಂದು ಘೋಷಿಸಿದರು,ಹೊಸದಾಗಿ ಆಯ್ಕೆ ಯಾದ ಜಿ ಶಾಂತಲಾ ಅಧ್ಯಕ್ಷರಾಗಿ ಗ್ರಾಮಸ್ಥರ ಪರವಾಗಿ ಕೆಲಸ ಮಾಡಬೇಕು ಜಾತೀ ತಾರತಮ್ಯ ಮಾಡದೇ ಸರ್ಕಾರದಿಂದ ದೊರೆಯುವ ಎಲ್ಲಾ ಸೌಲಭ್ಯಗಳನ್ನು ಸರಿಸಮಾನವಾಗಿ ಹಂಚಿಕೆ ಮಾಡಿ ಕಾನೂನು ಚೌಕಟಿನಲ್ಲಿ ಆಡಳಿತದ ನಡೆಸಬೇಕೆಂದು ಎಂದು ಸಲಹೆ ನೀಡಿದರು ಜಿ ಮಂಜುನಾಥ್ಸಾಸ್ವೆಹಳ್ಳಿ ಬಿಜೆಪಿ ಪಕ್ಷದ ಗ್ರಾಮದ ಘಟಕದ ಅಧ್ಯಕ್ಷರುಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಟಿ ಮಂಜಪ್ಪ ಅಂಜಿನಮ್ಮ ಸಿದ್ದಲಿಂಗಪ್ಪ ಟಿ ಶೃತಿ ಬಿಕೆ ರೇವಣಸಿದ್ದಪ್ಪ ನೀಲಮ್ಮ ಮಮತಾ ಮನೆಗೌಡ ಬಿಜೆಪಿ ಮುಖಂಡರಾದ ಪಿ ಹಾಲೇಶ್ ಕೆ ಬಸವರಾಜ್ ಎಸ್ ಹೆಚ್ ಬುಳ್ಳನ ಗೌಡ ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಎಂ ಕೊಟ್ರಯ್ಯ ಮಾಜಿ ಸದಸ್ಯ ಬಿ ಜಯಪ್ಪ ಟಿ ಬಸವರಾಜ್ ಪಿ ಹಾಲೇಶಪ್ಪ ಮಾಜಿ ಅಧ್ಯಕ್ಷ ಪಿ ಮುಳ್ಳಪ್ಪ ಟಿ ಬಸವರಾಜ್ ಪಂಪಾಪತಿ ಚಿದಾನಂದ ಮಾಜಿ ಟಿಪಿ ಸದಸ್ಯ ಪ್ರಕಾಶ್ ಇತರರು ಉಪಸ್ಥಿತರಿದ್ದರು…

ವರದಿ. ಪ್ರತಾಪ್, ಸಿ, ಹರಪನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
