;

ನಮ್ಮಲ್ಲೇ ಒಬ್ಬ, ನಮಗಾಗಿ ಒಬ್ಬ, ಈ ಬಾರಿ ಕೂಡ್ಲಿಗಿ ತಾಲೂಕಿನ ಮತದಾರರ ಚಿತ್ತ “ಸ್ಥಳೀಯ ಅಭ್ಯಾರ್ಥಿಯತ್ತ…!!!

ಕೂಡ್ಲಿಗಿ ಎಂದರೆ ಅದು ಹಿಂದುಳಿದ ತಾಲೂಕು ಎಂದು ಅಣೆ ಪಟ್ಟಿಯನ್ನು ಕಟ್ಟಿಕೊಂಡಿರುವ ತಾಲೂಕು. ಇದೇ ತಾಲೂಕಿನ ಒಂದು ಸಣ್ಣ ಹಳ್ಳಿಯಾದ ಬಿ. ನರಸಿಂನಗಿರಿ (ಏಳೂರುಗುಡ್ಡ). ಗ್ರಾಮದಲ್ಲಿ ಜನಿಸಿದಂತಹ ಎನ್.ಟಿ. ಬೊಮ್ಮಣ್ಣನವರು ಒಬ್ಬ ರೈತನ ಮಗನಾಗಿ ಹುಟ್ಟಿ ಬೆಳೆದು ಸ್ವಂತ ಹಳ್ಳಿಯಲ್ಲಿ ವ್ಯವಸಾಯ ಮಾಡುತ್ತಾ. ಸ್ವಗ್ರಾಮವಾದ ಬಿ. ನರಸಿಂಹನಗಿರಿ ಈ ಗ್ರಾಮವು ತಾಲೂಕು ಕೇಂದ್ರದಿಂದ ಸುಮಾರು 30. ಕಿಲೋ ಮೀಟರ್ ದೂರವಿದೆ. ಇಲ್ಲಿನ ಜನರಿಗೆ ಯಾವುದೇ ತರಹ ಈ ಗ್ರಾಮದಲ್ಲಿ ಮೂಲ ಸೌಲಭ್ಯಗಳಿಂದ ವಂಚಿತವಾಗಿರುವ ಸಂದರ್ಭದಲ್ಲಿ ಆ ಸಮಯದಲ್ಲಿ ತಾಲೂಕು ಬೋರ್ಡ್ ಸದಸ್ಯರಾಗಿ ತಮ್ಮ ರಾಜಕೀಯ ಜೀವನವನ್ನು ಆರಂಭಿಸಿದ ಎನ್.ಟಿ. ಬೊಮ್ಮಣ್ಣನವರು ನಂತರ ಕೂಡ್ಲಿಗಿ ಮತ್ತು ಹಗರಿಬೊಮ್ಮನಹಳ್ಳಿ ಕ್ಷೇತ್ರದ ಶಾಸಕರಾಗಿ ಎರಡು ಬಾರಿ ಆಯ್ಕೆಯಾಗಿದ್ದವರು. ಹಗರಿಬೊಮ್ಮನಹಳ್ಳಿ ಹಾಗೂ ಕೂಡ್ಲಿಗಿ ಕ್ಷೇತ್ರಕ್ಕೆ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಅಂದಿನ ಮುಖ್ಯಮಂತ್ರಿ ಆಗಿದ್ದ ರಾಮಕೃಷ್ಣ ಹೆಗಡೆ ಅವರ ಕಾಲದಲ್ಲಿ ವಿಧಾನಸಭೆಯಲ್ಲಿ ತಮ್ಮದೇ ಆದ ರೀತಿಯಲ್ಲಿ ಧ್ವನಿ ಎತ್ತಿ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ ಎನ್.ಟಿ. ಬೊಮ್ಮಣ್ಣನವರು. ಅಂತವರ ಮಗನಾಗಿ ಜನಿಸಿದ ಎನ್. ಟಿ ಶ್ರೀನಿವಾಸ್ ಅವರು MBBS (MD). ವಿದ್ಯಾಭ್ಯಾಸವನ್ನು ಮುಗಿಸಿ. ಇವರು ಈಗಾಗಲೇ ತುಮಕೂರಿನಲ್ಲಿ ತಮ್ಮದೇ ಆದ ಸ್ವಂತ ಕಣ್ಣಿನ ಆಸ್ಪತ್ರೆಯನ್ನು ಹೊಂದಿದ್ದು.

ಇದುವರೆಗೆ ಕೂಡ್ಲಿಗಿ ಕ್ಷೇತ್ರದ ಜನರಿಗೆ ಸುಮಾರು 25 ಸಾವಿರಕ್ಕೂ ಹೆಚ್ಚು ಉಚಿತವಾಗಿ ಕಣ್ಣಿನ ಆಪರೇಷನ್ ಮಾಡಿ, ನಂತರ ಶಿಬಿರಾರ್ಥಿಗಳಿಗೆ ಊಟ ವಸತಿ ಮತ್ತು ಹೋಗಿ ಬರುವ ಖರ್ಚನ್ನು ತಾವೇ ಬರಿಸಿ ಕೂಡ್ಲಿಗಿ ಕ್ಷೇತ್ರದಲ್ಲಿ ಮನೆ ಮಾತಾಗಿ ಹೆಸರು ಮಾಡಿದ್ದಾರೆ. ಹಾಗಾಗಿ ತಂದೆಯಂತೆಯೇ ಜನರ ಸೇವೆಗೆ ಮುಂದಾಗಿರುವ ಎನ್ ಟಿ ಶ್ರೀನಿವಾಸ್ ಅವರು ಈ ಬಾರಿ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಮತದಾರ ಪ್ರಭುಗಳು ಇವರ ಸ್ಥಳೀಯರು ಎಂದು ಈಗಾಗಲೇ ಇಡೀ ತಾಲೂಕಿನಲ್ಲಿ ಹೆಸರುವಾಸಿಯಾಗಿದ್ದಾರೆ. ಹಾಗಾಗಿ ಈ ಬಾರಿ ಕ್ಷೇತ್ರದ ಜನರು ಸ್ಥಳೀಯ ನಾಯಕನಾಗಿರುವ ಡಾ “ಎನ್ ಟಿ ಶ್ರೀನಿವಾಸ್ ಅವರಿಗೆ ಮಣೆ ಹಾಕುವ ಸಾಧ್ಯತೆ ಹೆಚ್ಚಿದೆ ಎಂದು ಇಲ್ಲಿನ ಜನರ ಅಭಿಪ್ರಾಯವಾಗಿದೆ. ಮತ್ತು ಇವರು ನೇರ, ನಿಷ್ಠುರ ಮೃದು ಸ್ವಭಾವದವರು ಮತ್ತು ಬಡವರ ಬಂದು, ಸುಮಾರು ಜನಗಳಿಗೆ ಕಣ್ಣನ್ನು ಶಸ್ತ್ರ ಚಿಕಿತ್ಸೆಯನ್ನು ಮಾಡಿ ದಾರಿ ತೋರಿದ ಇವರು ನಮ್ಮ ಇಂದುಳಿದ ತಾಲೂಕಿನ ಅಭಿವೃದ್ಧಿ ಹರಿಕಾರರಾಗುವರು ಎನ್ನುವ ವಿಸ್ವಾಸ ನಮ್ಮ ತಾಲೂಕಿನ ಜನತೆಗಿದೆ ಹಾಗಾಗಿ ಇವರು ಗೆಲ್ಲುವ ವಿಶ್ವಾಸದಲ್ಲಿದ್ದಾರೆ ಹಾಗಾಗಿ ಈಗಾಗಲೇ ಕಾಂಗ್ರೆಸ್ ಪಕ್ಷದ ಪ್ರಬಲ ಟಿಕೆಟ್ ಆಕಾಂಕ್ಷಿ ಎನ್ನುವ ಸುದ್ದಿಯನ್ನು ಕೇಳಿದ ಸ್ಥಳೀಯರು ತಾಲೂಕಿನ ಮನೆಮಾತಾಗಿರುವ ಮನೆ ಮಗನನ್ನು ಕೈ ಇಡಿಯಲು ಮನಸ್ಸು ಮಾಡಿರುವುದು ಇನ್ನಷ್ಟು ಶ್ರೀನಿವಾಸ್ ಅವರಿಗೆ ಹೊಸ ಭರವಸೆಯ ಜೊತೆಗೆ ನಿಮ್ಮಲ್ಲಿ ನಾನೊಬ್ಬ ಸದಾ ನಿಮ್ಮ ಸೇವೆಗೆ ನಾ ಸಿದ್ದ ಎನ್ನುತ್ತಿರುವುದು ಮಾತ್ರ ತುಂಬಾ ಸಂತೋಷ ಎನ್ನುತ್ತಾರೆ…

ವರದಿ. ಬಸಪ್ಪ ಬಣವಿಕಲ್ಲು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;