ಚಳ್ಳಕೆರೆ ತಾಲ್ಲೂಕಿನ ಚೆನ್ನಮ್ಮನಾಗತಿಹಳ್ಳಿಯ ಪಿಡಿಓ ಮಾತ್ರ ರಾಜಾರೊಷವಾಗಿ ತನಗೆ 5% ಪರ್ಸೆಂಟ್ ಹಾಗೂ ತನ್ನ ಮೇಲಿನ ಅಧಿಕಾರಿಗೆ 5% ಕೊಡ್ಬೆಕು ಅಂತ ಕೇಳಿರೋ ವಿಡಿಯೋ ಇದೀಗ ವೈರೆಲ್ ಆಗಿದೆ, ಇದರ ಜೊತೆಯಲ್ಲಿ ಜಿಲ್ಲಾ ಪಂಚಾಯತ್ ಉನ್ನತ ಅಧಿಕಾರಿಗೆ ಲಕ್ಷಾಂತರ ರೂಪಾಯಿಗಳನ್ನು ಕೊಟ್ಟಿರೋದಾಗಿ ಸ್ವತಃ ಪಿಡಿಓ ಗುಂಡಪ್ಪ ಹೇಳಿಕೊಂಡಿದ್ದಾನೆ.ಇನ್ನೂ ಪಿಡಿಓ ಗುಂಡಪ್ಪನ ಭ್ರಷ್ಟಾಚರಕ್ಕೆ ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರು ರೋಸಿಹೋಗಿದ್ದಾರೆ, ಬಿಂದಾಸ್ ಆಗಿ ಲಂಚ ಕೇಳೋ ಇಂತಹ ಸಿಬ್ಬಂದಿಯಿಂದ ಗ್ರಾಮದಲ್ಲಿ ಯಾವುದೇ ರೀತಿಯ ಅಭಿವೃದ್ದಿ ಇಲ್ಲ,ಪಂಚಾಯಿತಿಯಲ್ಲಿ ನಡೆದಿರೋ ಕಾಮಗಾರಿಗಳ ಕುರಿತು ತನಿಖೆ ಆಗಬೇಕಿದೆ ಇಲ್ಲವಾದಲ್ಲಿ ಉಗ್ರಹೋರಾಟ ಮಾಡೋದಾಗಿ ಗ್ರಾಮ ಪಂಚಾಯಿತಿ ಸದಸ್ಯರು ಆಗ್ರಹಿಸಿದ್ದಾರೆ..

ವರದಿ. ಶಶಿಕುಮಾರ್ ಚಳ್ಳಕೆರೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
