ಅನೇಕ ಅಡ್ಡಿ ಆತಂಕಗಳ ನಡುವೆಯೂ ಕಾನಿಪ ಧ್ವನಿ ಪ್ರಥಮ ರಾಜ್ಯ ಸಮ್ಮೇಳನವನ್ಮು ನಿಮ್ಮೆಲ್ಲರ ಸಹಕಾರದೊಂದಿಗೆ ಯಶಸ್ವಿ ಗೊಳಿಸಿಯೇ ತೀರುವೆ :- ಕಾನಿಪ ಧ್ವನಿ ಸಂಘಟನೆಯನ್ಮು ಸಂಸ್ಥಾಪಿಸಿರುವ ನನಗೆ ಈ ಪ್ರಥಮ ರಾಜ್ಯ ಸಮ್ಮೇಳನ ನಿಜಕ್ಕೂ ಸವಾಲಿನ ವಿಷಯವೇ.ಸಂಘ ಸ್ಥಾಪನೆಯಾದ ಕೇವಲ ಆರೇ ತಿಂಗಳಿನಲ್ಲಿ ದೊಡ್ಡ ಮಟ್ಟದ ಹೋರಾಟ ಹಾಗೂ ಒಂಬತ್ತೇ ತಿಂಗಳಲ್ಲಿ ರಾಜ್ಯ ಮಟ್ಟದ ಸಮಾವೇಶ. ಕಬ್ಬಿಣದ ಕಡಲೆಯೊಂದಿಗೆ ಪಯಣ ಸಾಗಿರುವ ನಮ್ಮ ಸಂಘಟನೆಯಲ್ಲಿ ಒಂದು ನೂರು ರೂಪಾಯಿಯೂ ಬ್ಯಾಂಕ್ ಬ್ಯಾಲೆನ್ಸ್ ಇಲ್ಲ. ಇಂಥ ಕ್ಲಿಷ್ಟಕರ ಸಮಯದಲ್ಲೂ ನಮ್ಮ ಸಂಘಟನೆವತಿಯಿಂದ ನಾಡಿನ ಪತ್ರಕರ್ತರ ಜ್ವಲಂತ ಸಮಸ್ಯಗಳ ಕುರಿತಂತ ಹದಿಮೂರು ಪ್ರಮುಖ ಬೇಡಿಕೆಗಳ ಈಡೇರಿಕೆಗಾಗಿ ಬೆಳಗಾವಿ ಸುವರ್ಣಾ ಸೌಧದ ಮುಂದೆ ಧರಣಿ ಸತ್ಯಾಗ್ರಹದ ಹೋರಾಟ ನಡೆಸಿ ಸರ್ಕಾರದ ಗಮನ ಸೆಳೆಯುವಂತೆ ಮಾಡಿದ್ದು ನಿಜ. ಸರ್ಕಾರ ಈ ಕುರಿತು ಚಿಂತಿಸುತ್ತಿರುವುದು ಸತ್ಯ. ತೊಂಬತ್ತು ವರ್ಷದ ಇತಿಹಾಸ ಹೊಂದಿರುವ ಮತ್ತೊಂದು ಸಂಘಟನೆ ಶತಾಯ ಗತಾಯ ನಮ್ಮನ್ನು ನಿರ್ನಾಮ ಮಾಡಲು ಪ್ರತಿ ಕ್ಷಣವೂ ಸಂಚನ್ನು ನಮ್ಮ ತಾಲೂಕು,ಜಿಲ್ಲಾ ಹಾಗೂ ರಾಜ್ಯ ಪದಾಧಿಕಾರಿಗಳ ಮೇಲೆ ನಾವು ನಡೆಸುವಂತ ಕಾರ್ಯಕ್ರಮಗಳ ಮೇಲೆ,ನಮ್ಮ ಕಾರ್ಯಕ್ರಮಕ್ಕೆ ಬರುವಂತ ಮುಖ್ಯ ಅತಿಥಿಗಳ ಮೇಲೆ ಕಳೆದ ಎಂಟು ತಿಂಗಳಿನಿಂದ ನಿರಂತರ ಮಾಡುತ್ತಾ ಬಂದಿದ್ದರೂ ಬಹು ತಾಳ್ಮೆಯಿಂದ ಮೌನದ ಉತ್ತರ ನೀಡುವುದರೊಂದಿಗೆ ಹೋರಾಟ ಮುಂದುವರೆಸಿದ್ದೇನೆ. ಇಲ್ಲಿಗೆ ಸಾಲದೆಂಬುವಂತೆ ಪ್ರಥಮ ರಾಜ್ಯ ಸಮ್ಮೇಳನದ ಮೇಲೂ ಇವರ ಕರಿ ನೆರಳು ಚಾಚಲು ಮುಂದಾಗಿರುವುದು ಒಂದೆಡೆ ನೋವು ತರಿಸಿದ್ದರೂ ನಿಮ್ಮೆಲ್ಲರ ಸಹಕಾರದಿಂದ ಧೃಡವಾದ ಹೆಜ್ಜೆಯೊಂದಿಗೆ ಯಶಸ್ಸು ಗೊಳಿಸಲೇಬೇಕೆಂದು ಹಗಲಿರುಳು ಶ್ರಮಿಸುತ್ತಿದ್ದೇನೆ. ಇಲ್ಲಿಯವರೆಗೆ ನನ್ನ ಬಲಗೈ ಬಂಟನಂತಿದ್ದ ನನ್ನ ರಿಟ್ಜ್ ಕಾರ್ ಇಂಥಾ ಸಮಯದಲ್ಲೇ ದೂರಾಗಿರುವುದು ನಿಜಕ್ಕೂ ಬಹಳ ನೋವು ತರಿಸಿದೆ. ಕಳೆದ ಮೂರು ದಿನಗಳಿಂದ ಸರಿಯಾಗಿ ಊಟ ಸೇರುತ್ತಿಲ್ಲ. ನನ್ನಿಂದ ಅದು ದೂರ ಸರಿದ ಮೇಲೆ ಬಸ್ಸು,ಬೈಕ್ ಹಾಗೂ ಕಾಲ್ನಡಿಗೆಯಲ್ಲೇ ಕಾನಿಪ ಧ್ವನಿ ಪ್ರಥಮ ರಾಜ್ಯ ಸಮ್ಮೇಳನ ಯಶಸ್ಸು ಗೊಳಿಸಲು ಹಗಲಿರುಳು ಪ್ರಯತ್ನ ಸಾಗಿದೆ,ಯಶಸ್ವಿ ಯಾಗುವವರೆಗೂ ನಮ್ಮ ಶ್ರಮ ನಿರಂತರ ಹಾಗೂ ವಿಶ್ರಮಕ್ಕೆ ಅವಕಾಶವಿಲ್ಲವೆಂದು ತಮಗೆ ಮಾತು ನೀಡುತ್ತಾ. ನಾಳೆಯಿಂದ ಪ್ರತಿಯೊಬ್ಬ ತಾಲೂಕಿನ,ಜಿಲ್ಲೆಯ ಹಾಗೂ ರಾಜ್ಯದ ಪದಾಧಿಕಾರಿಗಳು ರಾಜ್ಯ ಸಮ್ಮೇಳನದ ಕುರಿತು ತಮ್ಮ ತಮ್ಮ ಸುದ್ದಿ ವಾಹಿನಿಗಳಲ್ಲಿ,ವ್ಯಾಟ್ಸ ಪ್ ಗಳಲ್ಲಿ ಹಾಗೂ ಸಾಮಾಜಿಕ ಜಾಲ ತಾಣಗಳಲ್ಲಿ ರಾಜ್ಯ ಸಮ್ಮೇಳನಕ್ಕೆ ಸಂಬಂಧಿಸಿದಂತ ಸುದ್ದಿಗಳನ್ನು ಹಾಗೂ ವಿಶೇಷತೆಗಳನ್ನು ವಿಸ್ತೃತವಾಗಿ ಪಚಾರ ಪಡಿಸುವಂತ ಕಾರ್ಯದಲ್ಲಿ ತೊಡಗುವುದರೊಂದಿಗೆ ಧ್ವನಿ ಸಂಘಟನೆ ರಾಜ್ಯಾಧ್ಯಂತ ಪ್ರತಿಧ್ವನಿಸುವಂತಾಗಬೇಕು. ಇನ್ನು ರಾಜ್ಯ ಸಮ್ಮೇಳನಕ್ಕೆ ಸಂಬಂಧಿಸಿದಂತ ದಿನಾಂಕ:-25/2/2023 ಶನಿವಾರ ರಂದು ಮಧ್ಯಾಹ್ನ 1.30 ರಿಂದ 3 ಗಂಟೆಯವರೆಗೆ ಮಧ್ಯಾಹ್ನ ಊಟದ ವ್ಯವಸ್ಥೆ ಬಂದಂತ ಪ್ರತಿಯೊಬ್ಬ ಪತ್ರಕರ್ತರಿಗಿರುತ್ತದೆ. ಮಧ್ಯಾಹ್ನ 3 ರಿಂದ 4.30 ರವರೆಗೆ ರಾಜ್ಯದ ಹೆಸರಾಂತ ಕಲಾವಿದರಿಂದ ಸಾಂಸ್ಕೃತಿಕ ಸಂಭ್ರಮದ ಕಾರ್ಯಕ್ರಮಗಳು ತಮ್ಮನ್ನು ರಂಜಿಸಲಿವೆ ಜೊತೆಗೆ ಜೂನಿಯರ್ ರಾಜಕುಮಾರ್,ವಿಷ್ಣುವರ್ಧನ್,ಅಂಬರೀಶ್,ಉಪೇಂದ್ರ ಹಾಗೂ ಇನ್ನೀತರರು ನಿಮ್ಮ ಯೋಗ ಕ್ಷೇಮ ವಿಚಾರಿಸಲಿದ್ದಾರೆ. ಸಂಜೆ 4.30 ರಿಂದ 5.30 ರವರೆಗೆ ಕೇಂದ್ರ ನಾಟಕ ಅಕಾಡೆಮಿ ಪ್ರಶಸ್ತಿ ವಿಜೇತರು ಹಾಗೂ ನಾಡಿನ ಹಿರಿಯ ಸಾಹಿತಿಗಳಾದ ಕುಂ.ವೀರಭದ್ರಪ್ಪ, ಜ್ಞಾನ ಭಾರತಿ ಬೆಂಗಳೂರು ವಿಶ್ವವಿದ್ಯಾಲಯದ ಮಾಸ್ ಕಮ್ಯೂನಿಕೇಷನ್ ನ ಮುಖ್ಯಸ್ಥರಾದ ಪ್ರೋಪೆಸರ್ ಡಾ.ಬಿ.ಕೆ. ರವಿ ಹಾಗೂ ಹೈಕೋರ್ಟ್ ನ ಹಿರಿಯ ನ್ಯಾಯವಾದಿಗಳಾದ ಹರಿಶ್ ಗಣಪತಿ ಹಾಗೂ ಪುಟ್ಟೇಗೌಡರಿಂದ ಮಾಧ್ಯಮಕ್ಕೆ ಸಂಬಂಧಿಸಿದಂತ ಮಹತ್ತರ ವಿಚಾರಧಾರೆಗಳನ್ನು ತಮ್ಮ ಮುಂದೆ ಪ್ರಸ್ತುತ ಪಡಿಸಲಿದ್ದಾರೆ. ಸಂಜೆ 5.30 ರಿಂದ ನಾಡಿನ ಸ್ವಾಮೀಜಿಗಳು,ಮಂತ್ರಿ ಮಹೋದಯರು,ಅಧಿಕಾರಿಗಳು,ಸಾಹಿತಿಗಳು ಹಾಗೂ ವಿವಿಧ ಸಂಘಟನೆಯ ಮುಖಂಡರುಗಳು ಸಮಾರೋಪದ ವೇದಿಕೆಯಲ್ಲಿ ಉಪಸ್ಥಿತರಿರಲಿದ್ದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಈ ಭವ್ಯ ವೇದಿಕೆಯಲ್ಲಿ ನಾಡಿನ 31 ಹಿರಿಯ ಪತ್ರಕರ್ತರು ಹಾಗೂ 31 ಸಾಧಕರನ್ನು ಹೃದಯ ಪೂರ್ವಕವಾಗಿ ಸನ್ಮಾನಿಸಲಾಗುವುದು ಜೊತೆಗೆ ಕಾನಿಪ ಧ್ವನಿ ಸಂಘಟನೆಯ ತಾಲೂಕು ಅಧ್ಯಕ್ಷರುಗಳನ್ನು,ಜಿಲ್ಲಾಧ್ಯಕ್ಷರುಗಳನ್ನು ಹಾಗೂ ರಾಜ್ಯ ಪದಾಧಿಕಾರಿಗಳನ್ನು ಸನ್ಮಾನಿಸಲಾಗುವುದು. ಇಂದಿನಿಂದಲೇ ನಮ್ಮ ಕಾನಿಪ ಧ್ವನಿ ಸೇನಾನಿಗಳು ಯುದ್ದಕ್ಕೆ ಸನ್ನದ್ದರಾಗುವಂತೆ ಕರೆ ನೀಡುತ್ತಿದ್ದೇನೆ. ನಾಡಿನಾಧ್ಯಂತ ವಿರುವ ಹೆಚ್ಚಿನ ಪತ್ರಕರ್ತರು ಈ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ಭಾಗವಹಿಸುವುದರ ಮುಖಾಂತರ ನಮ್ಮ ಕಾನಿಪ ಧ್ವನಿಯ ಪಾಂಚಜನ್ಯ ಮೊಳಗಿಸುತ್ತೀರಿ ಎಂಬ ಅಚಲ ವಿಶ್ವಾಸದೊಂದಿಗೆ. ಸಮ್ಮೇಳನ ಮುಗಿದ ನಂತರ ಸಾಂಘಿಕ ಹಾಗೂ ಕಾನೂನಿನ ಹೋರಾಟ ಪತ್ರಕರ್ತರ ಹಿತರಕ್ಷಣೆಗಾಗಿ ಕಾನಿಪ ಧ್ವನಿಯಿಂದ ನಿರಂತರವಾಗಿ ಸಾಗಲಿದೆ.
ಮತ್ತೊಂದು ಪ್ರಮುಖ ವಿಚಾರವನ್ನೇ ಮರೆತಿದ್ದೆ ಅದೇನೆಂದರೆ ನಿನ್ನೆ ಅಂದರೆ 15/2/2023 ಮಧ್ಯಾಹ್ನ 4.30 ಕ್ಕೆ Tv5 ನ ಕಾರ್ಯನಿರ್ವಾಹಕ ಸಂಪಾದಕರು ಹಾಗೂ ನಾಡಿನ ಖ್ಯಾತ ನಿರೂಪಕರಾದ ರಮಾಕಾಂತ್ ಎ.ಎಸ್ ರವರನ್ನು ಬೆಂಗಳೂರಿನ ಅವರ Tv5 ಕಾರ್ಯಾಲಯದಲ್ಲಿ ಬೇಟಿಯಾಗಿ ರಾಜ್ಯ ಸಮ್ಮೇಳನದ ಸಮಾರೋಪ ಸಮಾರಂಭಕ್ಕೆ ಆಹ್ವಾನಿಸಿದಾಗ ತುಂಬು ಹೃದಯದಿಂದ ಒಪ್ಪಿಗೆ ಸೂಚಿಸಿದಂತ ಸಂತೋಷದ ಸಂದರ್ಭ.
ಬಂಗ್ಲೆ ಮಲ್ಲಿಕಾರ್ಜುನ,ರಾಜ್ಯಾಧ್ಯಕ್ಷರು,ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ.

ವರದಿ. ಮಂಜುನಾಥ್ ದೊಡ್ಡಮನಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
