ಕೂಡ್ಲಿಗಿ ಪ್ರವಾಸಿ ಮಂದಿರದಲ್ಲಿ ಕಾಂಗ್ರೆಸ್ ವಿಭಾಗ ದಿಂದ ಕಟ್ಟಡ ಕಾರ್ಮಿಕರ ಪೂರ್ವಭಾವಿ ಸಭೆ
ವಿಜಯನಗರ ಜಿಲ್ಲೆ ಕೂಡ್ಲಿಗಿ ಪ್ರವಾಸ ಮಂದಿರದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ವಿಭಾಗದ. ಕಟ್ಟಡ ಕಾರ್ಮಿಕರ ಪೂರ್ವಭಾವಿ ಸಭೆಯನ್ನು ಆಯೋಜಿಸಲಾಯಿತು. ಈ ಸಭೆಯಲ್ಲಿ ಕಾರ್ಮಿಕರ ವಿಭಾಗದ ಜಿಲ್ಲಾ ಕಾರ್ಯದರ್ಶಿಯಾದ. ತಿಪ್ಪೇಸ್ವಾಮಿ ಮಾತನಾಡಿ ಕಟ್ಟಡ ಕಾರ್ಮಿಕರಲ್ಲಿ 13 ವಿಂಗ್. ಗಳಿದ್ದು ಕಟ್ಟಡ ಕಾರ್ಮಿಕರಿಗೆ ಬೇಕಾದಷ್ಟು ನಿಗಮ ಮಂಡಳಿಯಿಂದ ಅನುದಾನವಿದೆ. ಹಾಗೂ ಅಸಂಘಟಿತ ಕಾರ್ಮಿಕರ ವಿಭಾಗದಲ್ಲಿ 143 ವಿಂಗಳಿದ್ದು . ಕಟ್ಟಡ ಕಾರ್ಮಿಕರಿಗೆ ಮತ್ತು ಅಸಂಘಟಿತ ಕಾರ್ಮಿಕರಿಗೆ. ಸರಿಯಾದ ರೀತಿಯಲ್ಲಿ ಸರ್ಕಾರದಿಂದ ಬರುವಂತಹ ಸವಲತ್ತುಗಳು. ದೊರೆಯುತ್ತಿಲ್ಲ ಅದರಂತೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಸಂಘಟಿತ ಕಾರ್ಮಿಕರ ವಿಭಾಗ ಹಾಗೂ ಕಟ್ಟಡ ಕಾರ್ಮಿಕರ ವಿಭಾಗದ ನಮ್ಮ ವಿಜಯನಗರ ಜಿಲ್ಲಾಧ್ಯಕ್ಷರುಗಳು. ಜಿಲ್ಲಾ ಪದಾಧಿಕಾರಿಗಳು ತಾಲೂಕು ಅಧ್ಯಕ್ಷರುಗಳು. ತಾಲೂಕು ಪದಾಧಿಕಾರಿಗಳು. ನಾವೆಲ್ಲರೂ ಒಗ್ಗಟ್ಟಿನಿಂದ ಮುಂದೆ ಬರುವ ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ. ಬರುವ ಸಾಧ್ಯತೆವಿದ್ದು ಕಾರ್ಮಿಕರಿಗೆ ಬರುವಂತಹ . ಎಲ್ಲಾ ಯೋಜನೆಗಳನ್ನು ಕಾರ್ಮಿಕರಿಗೆ ತಲುಪಿಸಿ ಕಾರ್ಮಿಕರನ್ನು ಅಲೆದಾಡುವುದನ್ನು ನಿಲ್ಲಿಸೋಣ ಎಂದು ತಿಳಿಸಿದರು ನಂತರ ನೂತನವಾಗಿ ವಿಜಯನಗರ ಜಿಲ್ಲಾ ಕಾರ್ಮಿಕರ ವಿಭಾಗಕ್ಕೆ ಕಾರ್ಯಾಧ್ಯಕ್ಷರಾಗಿ ಆಯ್ಕೆಯಾದ ಡಿ. ಕೆ. ಮಂಜುನಾಥ್ ರವರಿಗೆ ಪದಾಧಿಕಾರಿಗಳಿಂದ ಸನ್ಮಾನ ಮಾಡಲಾಯಿತು.ಈ ಸಭೆಯಲ್ಲಿ ಅಸಂಘಟಿತ ಕಾರ್ಮಿಕರ ವಿಭಾಗದ ವಿಜಯನಗರ ಜಿಲ್ಲಾಧ್ಯಕ್ಷರಾದ ನಲಮತ್ತಿ ದುರ್ಗಾದಾಸ್ ನಾಯಕ .ಕಾರ್ಮಿಕರ ವಿಭಾಗದ ತಾಲೂಕು ಅಧ್ಯಕ್ಷ ಡಿ ಹನುಮಂತಪ್ಪ. ಅಸಂಘಟಿತ ಕಾರ್ಮಿಕರ ವಿಭಾಗದ ಕೂಡ್ಲಿಗಿ ತಾಲೂಕು ಅಧ್ಯಕ್ಷರಾದ. ಚಂದ್ರು ಉಪಾಧ್ಯಕ್ಷ ಓಬಳೇಶ್.. ಜಿಲ್ಲಾ ಪದಾಧಿಕಾರಿಗಳಾದ ಮಹೇಂದ್ರ ಸ್ವಾಮಿ. ವೀರೇಶ್. ತಿಪ್ಪೇಸ್ವಾಮಿ. ಬಿ ಎಂ ಗುರುವಣ್ಣ ವೀರನಗೌಡ. ಸೇವೆಣ್ಣು ಹನುಮಂತು, ಇದ್ದರು.

ವರದಿ : ಸಿ ಅರುಣ್ ಕುಮಾರ್ ಜುಮ್ಮೋಬನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
