;

ಬಳ್ಳಾರಿ ಉತ್ಸವದಲ್ಲಿ ಅಡುಗೆ, ಆಹಾರ ಪ್ರಿಯರಿಂದ ಮೆಚ್ಚುಗೆ…!!!

ಬಳ್ಳಾರಿ ಉತ್ಸವದಲ್ಲಿ ಅಡುಗೆ, ಆಹಾರ ಪ್ರಿಯರಿಂದ ಮೆಚ್ಚುಗೆ
ಅಡುಗೆ ಪ್ರದರ್ಶನಕ್ಕೆ ಮೇಯರ್ ರಾಜೇಶ್ವರಿ ಚಾಲನೆ
ಬಳ್ಳಾರಿ,: ಒಂದೆಡೆ ಮಹಿಳೆಯರು ಆ ಕಡೆಯಿಂದ ಈ ಕಡೆಗೆ, ಈ ಕಡೆಯಿಂದ ಆ ಕಡೆಗೆ ಓಡಾಡುತ್ತಾ ಅಡುಗೆಗೆ ಬೇಕಾದ ಎಲ್ಲಾ ಪರಿಕರಗಳನ್ನು ಮುಂದಿಟ್ಟುಕೊಂಡು ಉಣಬಡಿಸಲು ಹಾಗೂ ಪ್ರದರ್ಶಿಸಲು ಅಡುಗೆ ಮಾಡಲು ಹಾತೊರೆಯುತ್ತಿದ್ದರು. ಹೀಗೆ ಕಂಡುಬಂದಿದ್ದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಕೋರ್ಟ್ ರಸ್ತೆಯ ಕಮ್ಮ ಭವನದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಅಡುಗೆ ಸ್ಪರ್ಧೆಯಲ್ಲಿ. ಹೌದು ಈ ಸ್ಪರ್ಧೆಗಳಲ್ಲಿ ಮಹಿಳೆಯರು ಸಾಂಪ್ರದಾಯಿಕ ಅಡುಗೆ, ಸಿರಿಧಾನ್ಯಗಳಿಂದ ತಯಾರಿಸಿದ ಅಡುಗೆ ಮತ್ತು ಬಳ್ಳಾರಿ ವಿಶೇಷ ಅಡುಗೆ ವಿಭಾಗಗಳಿಂದ ಕೂಡಿದ ನಾನಾ ಬಗೆಯ ತಿಂಡಿಗಳನ್ನು ತಯಾರಿಸಿದ್ದು ವಿಶೇಷವಾಗಿ ಕಂಡುಬಂತು.


ಬೆಳಗ್ಗೆಯಿಂದಲೇ ಆರಂಭಿಸಿದ ಅಡುಗೆ ಸ್ಪರ್ಧೆಯಲ್ಲಿ ಒಟ್ಟು 30 ಮಹಿಳೆಯರು ಭಾಗವಹಿಸಿದ್ದರು. ಅಡುಗೆ ಮಾಡಲು ಬೇಕಾದ ಎಲ್ಲಾ ಪರಿಕರಗಳು ಹಾಗೂ ಸಾಮಗ್ರಿಗಳನ್ನು ಸ್ಪರ್ಧಿಗಳೇ ತಂದಿದ್ದರು. ವಿಧ ವಿಧವಾದ ಅಡುಗೆ ಖಾದ್ಯಗಳನ್ನು ಮಾಡಿ ನೋಡುಗರಿಗೆ ಪ್ರದರ್ಶನಕ್ಕಿರಿಸಲಾಯಿತು.
ನಂತರ ಅಡುಗೆ ಪ್ರದರ್ಶನಕ್ಕೆ ಎಂ.ರಾಜೇಶ್ವರಿ ಅವರು ಚಾಲನೆ ನೀಡಿದರು.
ಅಧಿಕಾರಿಗಳು ಹಾಗೂ ಸಾರ್ವಜನಿರು ಎಲ್ಲರೂ ತಿಂಡಿಗಳನ್ನು ಸವಿದು, ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.


ಸಾರಿಗೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಅವರು ಆಹಾರ ಪ್ರದರ್ಶನಕ್ಕೆ ಭೇಟಿ ನೀಡಿ ವೀಕ್ಷಿಸಿದರು.
ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆದವರಿಗೆ ರೂ.6 ಸಾವಿರ, ಎರಡನೇ ಬಹುಮಾನ ರೂ.3ಸಾವಿರ ಹಾಗೂ ತೃತೀಯ ಬಹುಮಾನವಾಗಿ ರೂ.1ಸಾವಿರದ ಚೆಕ್ ಮತ್ತು 5 ಸಮಾಧನಕರ ಬಹುಮಾನದ ಜೊತೆಗೆ ಭಾಗವಹಿಸಿದ ಎಲ್ಲರಿಗೂ ಪ್ರಮಾಣ ಪತ್ರವನ್ನು ಜಿಲ್ಲಾ ಉಸ್ತುವಾರಿ ಸಚಿವರು ವಿತರಿಸಿದರು.
ಸಾಂಪ್ರದಾಯಿಕ ಅಡುಗೆ ಸ್ಪರ್ಧೆ; ಈ ವಿಭಾಗದಲ್ಲಿ ಸಂಕ್ರಾಂತಿ, ಯುಗಾದಿ, ಗೌರಿ ಹಬ್ಬಗಳ ವಿಶೇಷ ಅಡುಗೆಗಳ ತಯಾರಿಗೆ ಪ್ರಾಧಾನ್ಯತೆ ನೀಡಲಾಗಿತ್ತು. ಅದರಲ್ಲಿ ನವೀನೆ ಅಕ್ಕಿಯಿಂದ ತಯಾರಿಸಿದ ಹೋಳಿಗೆ, ಸಜ್ಜೆ ಹೋಳಿಗೆ, ತರಕಾರಿಯಿಂದ ತಯಾರಿಸಿದ ಬಿಸಿಬೇಳೆ ಬಾತ್ ಹಾಗೂ ನಾನಾ ರೀತಿಯ ತಿನಿಸುಗಳನ್ನು ಅಡುಗೆ ಮಾಡಿ ಪ್ರದರ್ಶನಕ್ಕಿಡಲಾಯಿತು. ಸ್ಪರ್ಧಾಳುಗಳು ಸಾಂಪ್ರದಾಯಿಕ ಅಡುಗೆಗಳನ್ನು ತಯಾರಿಸಿದ ನಂತರ ಪ್ರದರ್ಶಿಸಲು ಮಣ್ಣಿನಿಂದ ಮಾಡಿದ ಗಡಿಗೆಗಳನ್ನು ಬಳಸಿ ನೋಡುಗರನ್ನು ಗಮನ ಸೆಳೆಯಿತು.


ಸಿರಿಧಾನ್ಯಗಳಿಂದ ತಯಾರಿಸಿದ ಅಡುಗೆ: ಸಿರಿಧಾನ್ಯಗಳಿಂದ ತಯಾರಿಸಿದ ಅಡುಗೆ ಸ್ಪರ್ಧೆ ವಿಭಾಗದಲ್ಲಿ ದ್ರವ ರೂಪದ ಅಡುಗೆ ಹೊರತುಪಡಿಸಿ ತಯಾರಿಸಿದ ಹೆಸರು ಬೇಳೆ ಸಾವೆ, ಅರಕ, ನವಣೆ, ಕೊರ್ಲೆಯ ಕಿಚಡಿ, ಸಾಮೇ ಡ್ರೈ ಫ್ರೂಟ್ಸ್, ರಾಗಿ ಬೆಲ್ಲ ಸ್ವೀಟ್ಸ್, ಸಬ್ಬಕ್ಕಿ, ಶೇಂಗಾ, ಆಲೂ, ವಡೆ, ರಾಗಿ ರೊಟ್ಟಿ, ಸಜ್ಜೆ ರೊಟ್ಟಿ, ಮೊಳಕೆ ಕಾಳು ಕೊಸಂಬಿ ಸೇರಿದಂತೆ ಇತರೆ ಅಡುಗೆ ಖಾದ್ಯಗಳು ಆಹಾರ ಪ್ರಿಯರಿಂದ ಮೆಚ್ಚುಗೆಗೆ ವ್ಯಕ್ತವಾದವು.
ಬಳ್ಳಾರಿ ವಿಶೇಷ ಅಡುಗೆ; ಬಳ್ಳಾರಿ ಜಿಲ್ಲೆಯ ವ್ಯಾಪ್ತಿಯಲ್ಲಿ ಪ್ರಾದೇಶಿಕವಾಗಿ ತಯಾರಿಸುವಂತಹ ಅಡುಗೆಗಳಿಗೆ ಪ್ರಾಧಾನ್ಯತೆ ನೀಡಲಾಗಿತ್ತು. ಅದರಲ್ಲೂ ಬಳ್ಳಾರಿ ವಿಶೇಷ ಅಡುಗೆಗಳಾದ ಒಗ್ಗರಣೆ-ಮಿರ್ಚಿ, ಕೋವಾ ವಿಶೇಷ ಗಮನ ಸೆಳೆಯಿತು.


ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿ, ಸಹಾಯಕ ಆಯುಕ್ತ ಹೇಮಂತ್ ಕುಮಾರ್, ಪ್ರೊಬೆಷಿನರಿ ಐಎಎಸ್ ಅಧಿಕಾರಿ ರೂಪಿಂದರ್ ಕೌರ್, ಎಡಿಸಿ ಮಂಜುನಾಥ, ಪಾಲಿಕೆ ಆಯುಕ್ತ ರುದ್ರೇಶ್, ತಹಶೀಲ್ದಾರ ವಿಶ್ವನಾಥ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಸಕೀನ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿ ರಾಮಣ್ಣ, ಸಿಡಿಪಿಓ ಮೌನೇಶ್, , ಡಬ್ಲ್ಯೂಸಿಡಿ ನಾಗವೇಣಿ, ಅಂಬಿಕಾ ಸೇರಿದಂತೆ ಇತರರು ಇದ್ದರು.

ವರದಿ. ಉಮೇಶ್, ಬಳ್ಳಾರಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;