ಮನುಷ್ಯನ ಜೀವನಕ್ಕೆ ಆಹಾರ ಎಷ್ಟು ಮುಖ್ಯವೋ ಗಾಳಿಯೂ ಕೂಡ ಅಷ್ಟೇ ಮುಖ್ಯ : ಶ್ರೀಮತಿ ಶೋಭಾ ದೇವಿ ವಸ್ತ್ರದ .
ಸಿಂಧನೂರು: ಜೂನ್ 10.ಮನುಷ್ಯನ ಜೀವನಕ್ಕೆ ಆಹಾರ ಎಷ್ಟು ಮುಖ್ಯವೋ ಗಾಳಿಯೂ ಕೂಡ ಅಷ್ಟೇ ಮುಖ್ಯವಾಗಿರುತ್ತದೆ, ಎಲ್ಲರೂ ಪರಿಸರ ಬೆಳಸುವುದರ ಮೂಲಕ ಶುದ್ಧ ಗಾಳಿ ಪಡೆಯಬೇಕು ಎಂದು ಶ್ರೀಮತಿ ಶೋಭಾ ದೇವಿ ವಸ್ತ್ರದ ಅಭಿಪ್ರಾಯ ವ್ಯಕ್ತಪಡಿಸಿದರು .

ನಗರದ ಆದರ್ಶ ಕಾಲೋನಿಯ ಲಿಟ್ಲ ಚಾಂಪ್ಸ ಗುರಕುಲಂ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆಯನ್ನು ಸಸಿ ನೆಟ್ಟು ನೀರುಣಿಸುವುದರ ಮೂಲಕ ಜಾಲನೆ ನೀಡಿ ಮಾತನಾಡಿದ ಅವರು ನಿತ್ಯಜೀವನದಲ್ಲಿ ಮನುಷ್ಯನ ಜೀವನಕ್ಕೆ ಆಹಾರ ಎಷ್ಟು ಮುಖ್ಯವೋ ಗಾಳಿಯು ಕೂಡ ಅಷ್ಟೇ ಮುಖ್ಯವಾಗಿರುತ್ತದೆ ಎಲ್ಲರೂ ಹೆಚ್ಚಿನ ಸಸಿಗಳನ್ನು ನೆಟ್ಟ ಪೋಷಿಸಿ ಶುದ್ದವಾದ ಗಾಳಿ ಪಡೆದು ಎಲ್ಲರೂ ಆರೋಗ್ಯವಂತರಾಗಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಆದರ್ಶ ಕಾಲೋನಿಯ ಎಲ್ಲಾ ಮುಖ್ಯ ರಸ್ತೆಯಲ್ಲಿ ಶಾಲಾ ಮಕ್ಕಳಿಂದ ಪಥ ಸಂಚಲನ ಮಾಡುತ್ತಾ ಪರಿಸರದ ಜಾಗ್ರತೆಯ ಘೋಷಣೆಗಳನ್ನು ಕೂಗುವುದರ ಮೂಲಕ ಜಾಗೃತಿ ಮೂಡಿಸಲಾಯಿತು .
ಈ ಸಂದರ್ಭದಲ್ಲಿ ವನಸಿರಿ ಫೌಂಡೇಶನ್ ಸಂಸ್ಥಾಪಕ ಅದ್ಯಕ್ಷರಾದ ಅಮರೇಗೌಡ ಮಲ್ಲಾಪೂರ, ಶಾಲಾ ಕಾರ್ಯದರ್ಶಿ ಗುರುಸಿದ್ದಯ್ಯ. ದೇವರಾಜ,ನಿಶಾ ಶಿವಗಂಗಾ, ಕವಿತಾ ರಾಣಿ. ಮುತ್ಯಂಜಯ್ಯ. ಹೇಮಲತಾ. ಯಶವಂತ, ವಿಜಿತ, ಪುಷ್ಪ,ಜಮೀರ ಗುಜರಿ,ಶರಣಬಸವ ಮಲ್ಲಾಪುರ, ಶಿರೀಶ ,ಜಾಲತಾಣದ ಅದ್ಯಕ್ಷರಾದ ಕುಮಾರಿ ಆನಂದಿ,ಮುದಿಯಪ್ಪ ಹೊಸಳ್ಳಿ ಕ್ಯಾಂಪ್ ಹಾಗೂ ಮುದ್ದು ಮಕ್ಕಳು ಉಪಸ್ಥಿತರಿದ್ದರು…

ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
