ಬ್ರಾಹ್ಮಣ್ಯತ್ವವೆ ಮೆರೆಯಬೇಕು ಎಲ್ಲರೂ ಅವರ ಕೈಕೆಳಗೆರಬೇಕು ಎಂಬ ಉದ್ದೇಶ : ಮಹಾಜನ ಶೆಟ್ಟಿ.
ಸಿಂಧನೂರು : ಜೂನ್ 10. ಮುಂದಿನ ದಿನಗಳಲ್ಲಿ ಬ್ರಾಹ್ಮಣತ್ವವೆ ಮೆರೆಯಬೇಕು ಎಲ್ಲರೂ ಅವರ ಕೈಕೆಳಗೆರಬೇಕು ಎಂಬ ಉದ್ದೇಶದಿಂದ ಈ ಪಠ್ಯ ಪರಿಷ್ಕರಣೆ ಮಾಡಲಾಗಿದೆ ಎಂದು ರಾಯಚೂರು ಬಸವ ಕೇಂದ್ರದ ಪ್ರಧಾನ ಕಾರ್ಯದರ್ಶಿ ಮಹಾಜನ ಶೆಟ್ಟಿ ಮಾತನಾಡಿದರು.
ಬಸವಣ್ಣನವರನ್ನು ಮತ್ತು ಇತರರನ್ನು ಕುರಿತು ಪಠ್ಯ ಪುಸ್ತಕಗಳಲ್ಲಿ ಅನೈತಿಹಾಸಿಕ ವಿಷಯಗಳನ್ನು ಸೇರಿಸಿರುವ,9 ನೇ ತರಗತಿಯ ಸಮಾಜ ವಿಜ್ಞಾನ ಪರಿಷ್ಕೃತ ಪಠ್ಯಪುಸ್ತಕದಲ್ಲಿ ವಿಶ್ವಗುರು ಬಸವಣ್ಣನವರನ್ನು ಕುರಿತು ಪಾಠದಲ್ಲಿ ಈ ವರ್ಷ ಕೆಲವು ಬದಲಾವಣೆಗಳನ್ನು ಮಾಡಿ ಪ್ರಕಟಿಸಿರುವದನ್ನು ಖಂಡಿಸಿ ಲಿಂಗಾಯತ, ಬಸವಪರ ಸಂಘಟನೆ ಮತ್ತು ಪ್ರಗತಿಪರ ಸಂಘಟನೆಗಳ ಜಿಲ್ಲಾ ಒಕ್ಕೂಟದಿಂದ ಹಮ್ಮಿಕೊಂಡಿದ್ದ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಅವರು ಜಾತಿ ಬೇಧ, ವರ್ಣ ಭೇದ, ಆಶ್ರಮ ರಹಿತ ಸಮಾಜವನ್ನು ಕಟ್ಟಿದಂತಹ ಬಸವಣ್ಣ, ಸರ್ವ ಜನಾಂಗದ ಶಾಂತಿಯ ತೋಟ ಎನ್ನುವ ಕುವೆಂಪು, ಭಾರತಕ್ಕೆ ಸಂವಿದಾನವನ್ನು ಕೊಟ್ಟ ಅಂಬೇಡ್ಕರ್ ದೇಶಕ್ಕಾಗಿ ಪ್ರಾಣತೆತ್ತ ಭಗತ್ ಸಿಂಗ ಇವರೆಲ್ಲರುಗಳ ಚರಿತ್ರೆಯನ್ನು ತಿರುಚಲಾಗಿದೆ. ಚಕ್ರವರ್ತಿ ಒಬ್ಬ ಅಧ್ಯಾಯನ ಶೀಲ ವ್ಯಕ್ತಿಯಲ್ಲ, ಹೊರಗಿನ ಯೂನಿವರ್ಸಿಟಿಯಲ್ಲಿ ಬಿ.ಎಸ್ಸಿ ಓದಿದ ಒಬ್ಬ ಅನರ್ಹ ವ್ಯಕ್ತಿ. ಆ ವ್ಯಕ್ತಿಯನ್ನು ಇಟ್ಟುಕೊಂಡು ತಮಗೆ ಬೇಕಾದಂತೆ ಬರೆದ ಸಾಹಿತಿಗಳೇ ಬೇರೆ, ಸಹಿ ಮಾತ್ರ ಹಾಕಿದ್ದಾನೆ.ಈತ ಹೆಬ್ಬಟ್ಟಿನ ಮನುಷ್ಯ. ಲಿಂಗಾಯತರು ಮುಂದಿನ ದಿನಗಳಲ್ಲಿ ಬಿಜೆಪಿ ಅಂತ ಹೋದರೆ ನಮ್ಮ ಜೂಟ್ಟವನ್ನು ಅವರು ಕಿತ್ತುಕೊಳ್ಳುತ್ತಾರೆ. ಅವರ ಜೂಟ್ಟ ಎತ್ತರವಾಗುತ್ತವೆ ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಕುವೆಂಪು ರವರ ಸಾಹಿತ್ಯ ,ಅಂಬೇಡ್ಕರ್ ಸಂವಿಧಾನ, ಭಗತ್ ಸಿಂಗ್ ತ್ಯಾಗವನ್ನು ಓದುವುದಿಲ್ಲ, ಇವವೆಲ್ಲವುದರ ಪರಿಣಾಮವಾಗಿ ಮೂರು ಪರ್ಸೆಂಟೇಜ್ ಗಳ ಇದ್ದ ಜೂಟ್ ವಾದಿಗಳು ನಮ್ಮನು ಈ ಪರಿಸ್ಥಿತಿಗೆ ತಂದು ನಿಲ್ಲಿಸಿದ್ದಾರೆ. ಈಗಲಾದರೂ ನಾವು ಹೆಚ್ಚರ ವಹಿಸಬೇಕು. ರಾಜ್ಯದಲ್ಲಿ 3 ಸಾವಿರ ಮಠಗಳಿವೆ ಆದರೆ ಯಾವೊಬ್ಬ ಸ್ವಾಮೀಜಿಗಳು ಕೂಡ ಇದರ ಬಗ್ಗೆ ಧ್ವನಿ ಎತ್ತುತ್ತಿಲ್ಲ ! ಎಲ್ಲೋ ಬೆರಳೆಣಿಕೆಯಷ್ಟು ಸ್ವಾಮೀಜಿಗಳು ಮಾತ್ರ ಧ್ವನಿ ಎತ್ತುತ್ತಿದ್ದಾರೆ ಇನ್ನುಳಿದ ಸ್ವಾಮಿಗಳು ಯಾಕೆ ಧ್ವನಿಯೆತ್ತುತ್ತಿಲ್ಲ ? ತಮ್ಮ ಮಠಕ್ಕೆ ನೀಡಿರುವ ಅನುದಾನವನ್ನು ವಾಪಸ್ ಕೇಳುತ್ತಾರೆ ಎಂಬ ಭಯಕಾಡುತ್ತಿದೆಯೇ ?ಮುಂದಿನ ದಿನಮಾನದಲ್ಲಿ ಆರೆಸ್ಸೆಸ್ ಸಂಘಟನೆ ಮುಖಂಡರು ಎಲ್ಲಾ ತತ್ವಸಿದ್ಧಾಂತಗಳನ್ನು ಬದಲಾಯಿಸುವ ಮನೋಭಾವನೆ ಇಟ್ಟುಕೊಂಡಿದ್ದಾರೆ. ಈಗಲಾದರೂ ಲಿಂಗಾಯತರು ಎಚ್ಚೆತ್ತುಕೊಂಡು ಶರಣರ ಆಶಯಗಳನ್ನು ಈಡೇರಿಸುವ ಕರ್ತವ್ಯ ಪ್ರತಿಯೊಬ್ಬರೂ ಮಾಡಬೇಕು ಎಂದರು.
ನಂತರ ಮಾತನಾಡಿದ ಚಂದ್ರಶೇಖರ ಗೋರೆಬಾಳ 2014ರಿಂದ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಎಲ್ಲವೂ ಪರಿಷ್ಕರಣೆ ಮಾಡಿಕೊಂಡು ಬಂದಿದೆ. ಅದರ ಭಾಗವಾಗಿ ಚಿಕ್ಕಮಕ್ಕಳಲ್ಲಿ 4 ನೇ ಮತ್ತು 5 ನೇ ತರಗತಿಯಲ್ಲೆ ಅವರ ಬುದ್ದಿ ಬದಲಾವಣೆ ಗೋಸ್ಕರ ಈ ವಿಷಯವನ್ನು ತುಂಬುತ್ತಿದ್ದಾರೆ. ಅಸಾಮಾನ್ಯತೆಯನ್ನು ಒಪ್ಪಬೇಕು, ಸಮಾನತೆಯನ್ನು ವಿರೋಧ ಮಾಡಬೇಕು, ಜಾತ್ಯಾತೀತರನ್ನು ಜೈಲಿಗೆ ಹಾಕಬೇಕು, ದೇಶಕ್ಕೋಸ್ಕರ ಹೋರಾಟ ಮಾಡುವವರು ದೇಶದ್ರೋಹಿಗಳು, ಕುರ್ಚಿಯಲ್ಲಿ ಕುಳಿತುಕೊಂಡು ದೇಶವನ್ನು ಮಾರಾಟ ಮಾಡುವವರು ದೇಶ ಪ್ರೇಮಿಗಳು ಎಂಬ ಉದ್ದೇಶದಿಂದ ಪರಿಷ್ಕರಣೆ ಮಾಡುತ್ತಿದ್ದಾರೆ. ಹತ್ತು ವರ್ಷಕ್ಕೆ ಪಠ್ಯಪುಸ್ತಕವನ್ನು ಬದಲಾವಣೆ ಮಾಡುತ್ತದೆ ಇವರು ಅವಮಾನ ಮಾಡುತ್ತಿರುವದು ಕೇವಲ ಕುವೆಂಪು, ಬಸವಣ್ಣ, ಅಂಬೇಡ್ಕರ್ ಅವರಿಗೆ ಮಾತ್ರವಲ್ಲ ಇಡೀ ದೇಶಕ್ಕೆ ಮಾಡಿದ ಅವಮಾನ. ಆರ್ಯರು ಬೇರೆ ದೇಶದಿಂದ ಬಂದವರು ಇವರನ್ನು ತಿದ್ದುವಂತಹವರು ಅಧಿಕಾರದಲ್ಲಿರುವವರು, ಆರ್ಯರನ್ನು ಪ್ರತಿಪಾದನೆ ಮಾಡುವಂಥವರು ಇದನ್ನು ಬದಲಾಯಿಸಲು ಹೊರಟಿದ್ದಾರೆ ಆರ್ಯರು ಈ ದೇಶದ ಮೂಲನಿವಾಸಿಗಳು ಎಂದು ಹೇಳುತ್ತಿದ್ದಾರೆ. ನಾವು ಒಪ್ಪಿಕೊಳ್ಳುತ್ತೇವೆ ಆರ್ಯರು ಬೇರೆ ದೇಶದಿಂದ ಬಂದರೂ ಕೂಡ ನಾವು ಅಣ್ಣ ತಮ್ಮಂದಿರಾಗಿ ಬದುಕಬೇಕು ಶ್ರಮಜೀವಿಗಳಾಗಿ ಬಾಳಬೇಕು ಎಲ್ಲರೂ ದುಡಿಯಬೇಕು. ಎಲ್ಲರೂ ಸಮನಾಗಿ ಹಂಚಿಕೊಂಡು ತಿನ್ನಬೇಕು ಎನ್ನುವ ತತ್ವಗಳನ್ನು ಯಾರ್ಯಾರು ಅಳವಡಿಸಿಕೊಂಡಿದ್ದರೋ ಅವರೆಲ್ಲರನ್ನು ಇವತ್ತು ಕಸದ ಬುಟ್ಟಿಗೆ ಸೇರುಸುತ್ತಿದ್ದಾರೆ. ಅದರ ಭಗವಾಗಿ ಈ ಪಠ್ಯಪುಸ್ತಕ ಪರಿಷ್ಕರಣೆ ನಡೆಯುತ್ತಿದೆ ಎಂದು ಮಾತನಾಡಿದರು.
ಧರ್ಮಗುರುಗಳನ್ನು ಪರಿಚಯಿಸುವಾಗ ಕೆಲವರಿಗೆ ಏಕ ವಚನ ಮತ್ತು ಕೆಲವರಿಗೆ ಬಹುವಚನ ಬಳಸಿರುವದು, ಪರಿಷ್ಕೃತ ಪಠ್ಯದಲ್ಲಿ ಆಗಿರುವ ಎಲ್ಲಾ ದೋಷಗಳನ್ನು ಸರಿಪಡಿಸಿ ಪಠ್ಯ ಪುಸ್ತಕ ಮುದ್ರಿಸಿ, ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗದಂತೆ ಆಗಿರುವ ಎಲ್ಲಾ ತಪ್ಪುಗಳನ್ನು ಸರಿಪಡಿಸಿ ಸಮಾಜದಲ್ಲಿರುವ ಅಭಿಮಾನಿಗಳಿಗೆ ಮತ್ತು ಅನುಯಾಯಿಗಳಿಗೆ ನ್ಯಾಯ ಒದಗಿಸಬೇಕು. ಇಲ್ಲವಾದರೆ ರಾಜ್ಯಾದ್ಯಾಂತ ಬಸವಾಭಿಮಾನಿಗಳು ಮತ್ತು ಪ್ರಗತಿಪರ ಸಂಘಟನೆಗಳು ಸೂಕ್ತ ಸಮಯದಲ್ಲಿ ಹೋರಾಟ ಮಾಡುವದು ಅನಿವಾರ್ಯವಾಗುತ್ತದೆ.ಆದ್ದರಿಂದ ತಾವುಗಳ ಆಗಿರುವ ತಪ್ಪುಗಳನ್ನು ಸರಿಪಡಿಸಿ ಪಠ್ಯ ಪುಸ್ತಕಗಳ ಪುನಃ ಪ್ರಕಟಿಸುವದನ್ನು ಸ್ಪಷ್ಟಪಡಿಸಬೇಕೆಂದು ಬಸವ ವೃತ್ತದಿಂದ ಸರಕಾರದ ವಿರುದ್ಧ ದಿಕ್ಕಾರ, ಘೋಷಣೆಗಳನ್ನು ಕೂಗುತ್ತ ವಿಧಾನಸೌಧದ ಮುಂಭಾಗದಲ್ಲಿ ಒಕ್ಕೂಟದಿಂದ ತಹಸೀಲ್ದಾರ ಮುಖಾಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷ ವೀರಭದ್ರಪ್ಪ ಕುರುಕುಂದಿ, ಉಪನ್ಯಾಸಕ ನಾರಾಯಣ ಬೆಳಗುರ್ಕಿ,ಬಸವ ಚಾರಿಟಬಲ್ ಟ್ರಸ್ಟ್ ಕಾರ್ಯಾಧ್ಯಕ್ಷ ಶರಣಪ್ಪ ಟೆಂಗಿನಕಾಯಿ, ಬಸವಲಿಂಗಪ್ಪ ಬಾದರ್ಲಿ, ವೀರಭದ್ರಗೌಡ ಅಮರಾಪುರ, ಎಸ್.ದೇವೇಂದ್ರ ಗೌಡ, ಕರೇಗೌಡ ಕುರುಕುಂದಿ, ಶಂಕರ್ ಗುರಿಕಾರ್, ಅಲ್ಲಮ್ಮ ಪ್ರಭು ಪೂಜಾರಿ, ಗುಂಡಪ್ಪ ಬಳಿಗಾರ್, ನಾಗಭೂಷಣ ನವಲಿ, ನಾಗರಾಜ್ ಪೂಜಾರ್ , ಶ್ಯಾಮಣ್ಣ ನಾಯಕ್, ರಂಗಣ್ಣ ಮಾನವಿ, ರೆಡ್ಡಪ್ಪ ಗೌಡ ದೇವದುರ್ಗ,ಸರಸ್ವತಿ ಪಾಟೀಲ್, ಕೆ.ಜಿಲಾನಿ ಭಾಷಾ, ಶಾಂತಪ್ಪ ಚಿಂಚರಕಿ, ಚಂದ್ರಶೇಖರ್ ಯರದಿಹಾಳ, ಜಮಾಅತೆ ಇಸ್ಲಾಮಿ ಅಧ್ಯಕ್ಷ ಮೊಹಮ್ಮದ್ ಹುಸೇನ್ ಭಾಷಾ ಸೇರಿದಂತೆ ಇತರರು ಭಾಗವಹಿಸಿದ್ದರು …

ವರದಿ.ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
