;

ಚಿಕ್ಕಜೋಗಿಹಳ್ಳಿ. ಜವಹಾರ್ ನವೋದಯ ವಿದ್ಯಾಲಯಕ್ಕೆ ವಿಜಯನಗರ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಭೇಟಿ…!!!

ವಿಜಯನಗರ ಜಿಲ್ಲೆ.ಕೂಡ್ಲಿಗಿ ತಾಲೂಕು.ಚಿಕ್ಕಜೋಗಿಹಳ್ಳಿ.
ಜವಹಾರ್ ನವೋದಯ ವಿದ್ಯಾಲಯಕ್ಕೆ ವಿಜಯನಗರ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಭೇಟಿ
ಚಿಕ್ಕಜೋಗಿಹಳ್ಳಿ:– ಶಿಕ್ಷಕರು ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಿ ವೈಜ್ಞಾನಿಕ ಚಿಂತನೆ ಮೂಡಿಸಿ*:- ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್. ಶೈಕ್ಷಣಿಕ ಸೌಲಭ್ಯದ ಕೊರತೆಯ ನಡುವೆಯೂ ಗ್ರಾಮೀಣ ಭಾಗದ ಮಕ್ಕಳು ನವೋದಯ ಶಾಲೆಗೆ ಆಯ್ಕೆಯಾಗಿಬಂದಿದ್ದಾರೆ.ಈ ಮಕ್ಕಳಿಗೆ ವಿದ್ಯಾಲಯದಲ್ಲಿಅಗತ್ಯ ಸೌಲಭ್ಯಗಳನ್ನು ನೀಡುವ ಮೂಲಕ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಶಿಕ್ಷಕರು ಶ್ರಮಿಸಬೇಕೆಂದು ವಿಜಯನಗರ ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್ ಶಿಕ್ಷಕರಿಗೆ ತಿಳಿಸಿದರು. ಕೂಡ್ಲಿಗಿ ತಾಲೂಕಿನ ಚಿಕ್ಕಜೋಗಿಹಳ್ಳಿ ಗ್ರಾಮದಲ್ಲಿರುವ ಕೇಂದ್ರೀಯ ಕೇಂದ್ರೀಯ ಜವಹಾರ್ ನವೋದಯ ವಿದ್ಯಾಲಯದಲ್ಲಿ ನಡೆದ ಶಾಲಾಭಿವೃದ್ಧಿ ಸಮಿತಿ ನಾಮ ನಿರ್ದೇಶಕ ರ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲಾಗಿದೆ, ಅಲ್ಲದೆ ಇಲ್ಲಿ ಕಲಿತ ವಿದ್ಯಾರ್ಥಿಗಳ ಪೈಕಿ ಹತ್ತಾರು ವಿದ್ಯಾರ್ಥಿಗಳು ಐಎಎಸ್, ಐಪಿಎಸ್, ಕೆಎಎಸ್, ಅಧಿಕಾರಿಗಳಾಗಿದ್ದಾರೆ, ಇನ್ನು ಹಲವಾರು ವಿದ್ಯಾರ್ಥಿಗಳುವೈದ್ಯರಾಗಿ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಹೀಗಾಗಿ ವಿಜಯನಗರ ಬಳ್ಳಾರಿ ಅವಳಿ ಜಿಲ್ಲೆಯಲ್ಲಿ ನವೋದಯ ವಿದ್ಯಾಲಯವು ಗುಣಮಟ್ಟದ ಶಿಕ್ಷಣಕ್ಕೆ ಹೆಸರಾಗಿದೆ. ಅಲ್ಲದೆ ವಿದ್ಯಾಲಯದಲ್ಲಿ ಮೂಲಭೂತ ಸೌಕರ್ಯದ ಸಮಸ್ಯೆಗಳಿದ್ದರೆ ನಮಗೆ ತಿಳಿಸಿ, ವಿದ್ಯಾಲಯದಲ್ಲಿ ಕುಡಿಯುವ ನೀರು,ಆರೋಗ್ಯ,ಆಡಳಿತಕ್ಕೆ ಸಂಬಂಧಿಸಿದಂತೆ ಯಾವುದಾದರೂ ಸಮಸ್ಯೆಗಳಿದ್ದರೆ ನನ್ನ ಗಮನಕ್ಕೆ ತನ್ನಿ, ಎಂದು ಪ್ರಾಚಾರ್ಯರಿಗೆ ಮತ್ತು ಸಮಿತಿಯ ಸದಸ್ಯರಿಗೆ ಜಿಲ್ಲಾಧಿಕಾರಿಗಳು ತಿಳಿಸಿದರು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸಲು ಕೋಚಿಂಗ್ ವ್ಯವಸ್ಥೆ ಕಲ್ಪಿಸಿಕೊಡಬೇಕೆಂದು ಪಾಲಕರ ಒತ್ತಾಯವಿದೆ ಸದಸ್ಯರೊಬ್ಬರು ತಿಳಿಸಿದಾಗ ಕೂಡಲೇ ಪರಿಶೀಲಿಸಲಾಗುವುದು ಎಂದರು. ಸಭೆ ಮುಗಿದ ನಂತರ ವಿದ್ಯಾಲಯ ದಲ್ಲಿರುವ ಅಟಲ್ ಪ್ರಯೋಗಾಲಯಕ್ಕೆ ಭೇಟಿನೀಡಿ ವಿದ್ಯಾರ್ಥಿಗಳು ತಯಾರಿಸಿದವಿಜ್ಞಾನದ ಮಾದರಿಗಳನ್ನು ವೀಕ್ಷಿಸಿ ವಿದ್ಯಾರ್ಥಿಗಳಿಂದ ಮಾಹಿತಿ ಪಡೆದರು. ವಿದ್ಯಾರ್ಥಿನಿಯರು ಕೌಶಲ್ಯ ಅಭಿವೃದ್ಧಿಗೆ ಹೆಚ್ಚಿನ ಗಮನ ನೀಡಬೇಕೆಂದು ಸಲಹೆ ನೀಡಿದರು. ನಂತರಕೋಟಿ ವೆಚ್ಚದಲ್ಲಿ ನಿರ್ಮಿಸಲಾದ 4 ಕೊಠಡಿ ಗಳನ್ನು ಮತ್ತು ಲ್ಯಾಬ್ ಉದ್ಘಾಟಿಸಿದರು.
ಈ ಕಾರ್ಯಕ್ರಮದಲ್ಲಿ ನವೋದಯ ವಿದ್ಯಾಲಯಕ್ಕೆ ಭೂದಾನ ಮಾಡಿದ ಹಾಗೂ ಮಾಜಿ ಶಾಸಕರಾದ ಕೆವಿ ರವೀಂದ್ರನಾಥ ಬಾಬು. ವಿಜಯನಗರ ಜಿಲ್ಲೆಯ ಡಿಡಿಪಿಐ. ಕೊಟ್ರೇಶ್.ಬಳ್ಳಾರಿ ಜಿಲ್ಲಾ ಆರೋಗ್ಯಾಧಿಕಾರಿ ಡಾ ಜನಾರ್ದನ್.ವೇದಾವತಿ.ಹಡಗಲಿ ವಿಭಾಗಿಯಪಿಡಬ್ಲ್ಯೂಡಿ ಅಧಿಕಾರಿ,ಆರ್ ಆರ್ ಕಟ್ಟಿ ನಾಗಭೂಷಣ ಗೌಡ,ನಾಗರಾಜ್,, ಗೀತ, ತಾಲೂಕು ವೈದ್ಯಾಧಿಕಾರಿ ಡಾ ಷಣ್ಮುಖ ನಾಯಕ್, ವಿದ್ಯಾಲಯದ ಪ್ರಾಚಾರ್ಯರಾದ. ಸುಂದರ್. ಪಿಡಬ್ಲ್ಯೂಡಿ ನಾಗನಗೌಡರು. ಉಪನ್ಯಾಸಕರಾದ ಪೂರ್ವT..ಚಂದ್ರಕಾಂತ್. ಇ ನಾಮದಾರ್, ಸುಸ್ನಾ ಕುಮಾರಿ. ಸೇರಿದಂತೆ ಪಾಲ ಕ ಪ್ರತಿನಿಧಿಗಳು. ಸಾರ್ವಜನಿಕರು ಉಪಸ್ಥಿತಿತ ರಿದ್ದರು….

ವರದಿ. ಡಿ.ಎಂ. ಈಶ್ವರಪ್ಪ ಸಿದ್ದಾಪುರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;