ಕೂಡ್ಲಿಗಿ:ಡಾಬಾಗಳಿಗೆ ದಾಳಿ,40ಮದ್ಯವ್ಯಸನಿಗಳು ವಶಕ್ಕೆ- ಬಿಡುಗಡೆ
ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣ ಹಾಗೂ ಹೊರವಲಯದ ಡಾಬಾ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ.ರಾತ್ರಿ ಸಮಯದಲ್ಲಿ ಮದ್ಯ ಸೈವನೆಯಲ್ಲಿ ತೊಡಗಿದ್ದವರನ್ನು, ಪೊಲೀಸರು ವಶಕ್ಕೆ ಪಡೆದು ಜಾಗ್ರತಿ ಮೂಡಿಸಿ ಎಚ್ಚರಿಸಿದ್ದಾರೆ.ಪಟ್ಟಣದ ಅನೇಕ ಡಾಬಾ ಹಾಗೂ ಸಾರ್ವಜನಿಕ ಸ್ಥಳಗಳಿಗೆ,ಕೂಡ್ಲಿಗಿ ಡಿವೈಎಸ್ಪಿ ಜಿ.ಹರೀಶ್ ರೆಡ್ಡಿ ಮಾರ್ಗದರ್ಶನ ದಲ್ಲಿ,ಸಿಪಿಐ ವಸಂತ ಅಸೋದೆ ನೇತೃತ್ವದಲ್ಲಿ ಕೂಡ್ಲಿಗಿ ಪೊಲೀಸ್ ರು ವಿವಿದೆಡೆ ದಾಳಿ ನಡಸಿದ್ದಾರೆ.

ದಾಳಿನಡೆಸಿದ ವಿವಿದೆಡೆಯಿಂದ ಸುಮಾರು 40ಜನ ಮದ್ಯ ಪ್ರೀಯರನ್ನು,ಅವರ ವಾಹನಗಳ ಸಮೇತ ಠಾಣೆಗೆ ಕರೆತಂದು ಅವರಿಗೆ ಜಾಗ್ರತೆ ಮೂಡಿಸಿದ್ದಾರೆ,ಮತ್ತು ಮರುಕಳಿಸದಂತೆ ಅಂತಿಮ ಎಚ್ಚರಿಕೆ ನೀಡಿ ಲಘು ದಂಢ ವಿಧಿಸಿ ಮನೆಗೆ ಕಳುಹಿಸಿದ್ದಾರೆ.ದಾಳಿ ಸಂದರ್ಭದಲ್ಲಿ ಪಟ್ಟಣದ ಯುವಕರು ಸೇರಿದಂತೆ ಬೇರೆಡೆಗಳಿಂದ, ನಾನಾ ಕಾರಣಕ್ಕೆ ಕೂಡ್ಲಿಗಿಗೆ ಆಗಮಿಸಿ ಮದ್ಯ ಸೇವನೆಯಲ್ಲಿ ನಿರತರಾಗಿದ್ದವರನ್ನು ಠಾಣೆಗೆ ಕರೆತಂದಿದ್ದರು.ಡಿವೆಎಸ್ಪಿ ಜಿ.ಹರೀಶ್ ರೆಡ್ಡಿ ಮಾತನಾಡಿ ಮದ್ಯ ವ್ಯಸನಿಗಳು ರಾತ್ರಿ ಹೊತ್ತು ವಾಹನ ಚಲಾಯಿಸಿಕೊಂಡು,ರಸ್ತೆಯ ನಿಯಮಗಳನ್ನು ಪಾಲಿಸದೇ ಅಸುರಕ್ಷತೆಯಿಂದ ಚಲಾಯಿಸುವುದು ಸಾಮಾನ್ಯವಾಗಿದೆ.ಇದರಿಂದಾಗಿ ಅವರು ಅಪಘಾತಕ್ಕೀಡಾಗುವುದು ಸಹಜ,ಇದರಿಂದಾಗಿ ನಿರಪರಾಧಿ ಪಾದಾಚಾರಿ ಸೇರಿದಂತೆ ವಾಹನ ಸವಾರರು ಅಪಘಾತಕ್ಕೀಡಗುತ್ತಿದ್ದಾರೆ.

ಮತ್ತು ಮದ್ಯ ವ್ಯಸನಿ ವಾಹನ ಸವಾರ ಕೂಡ ಸಾಕಷ್ಟು ಹಾನಿಗೊಳಗಾಗಬೇಕಾಗುತ್ತಿದೆ,ಕನೂನು ಸುವ್ಯವಸ್ಥೆಗೆ ಧಕ್ಕೆಯಾಗಿ ಕಾನೂನು ರೀತ್ಯ ಶಿಕ್ಷೆಗಳನ್ನು ಗುರಿಯಾಗಬೇಕಾಗುತ್ತದೆ.ಮದ್ಯ ವ್ಯೆಸನಿಗಳು ಅಸುರಕ್ಷಿತ ವಾಹನ ಸವಾರಿಯಿಂದಾಗಿ ಅಪಘಾತ ಸಹಜ,ಇದರಿಂದಾಗಿ ಸಾರ್ವಜನಿಕರಿಂದ ಛೀಮಾರಿ ಹಾಕಿಸಿಕೊಳ್ಳಬೇಕಾಗುತ್ತದೆ ಹಾಗೂ ಕಾನೂನು ರೀತ್ಯ ಸಾಕಷ್ಟು ಶಿಕ್ಷೆಗೆ ಗುರಿಯಾಗುತ್ತಾರೆ. ಇದರಿಂದಾಗಿ ವೈಯಕ್ತಿಕವಾಗಿ ಹಾಗೂ ಕುಟುಂಬಗಳ ನೆಮ್ಮದಿಗೆ ಭಂಗವಾಗುತ್ತದೆ,ಅಸುರಕ್ತಿತ ವಾಹನ ಚಾಲನೆಯಿಂದಾಗಿ ಅಪಘಾತ ಸಂಭವಿಸಿ ಜೀವ ಹಾನಿಯೂ ಸಂಭವಿಸುತ್ತವೆ.

ಕಾರಣ ಸಾರ್ವಜನಿಕರಲ್ಲಿ ಹಾಗೂ ಮದ್ಯ ವ್ಯೆಸನಿಗಳಲ್ಲಿ,ಜಾಗ್ರತೆ ಮೂಡಿಸುವ ಎಲ್ಲಾ ಪ್ರಯತ್ನ ಇಲಾಖೆಯಿಂದ ನಡೆದಿದೆ.ಇದು ನಿರಂತರವಾಗಿ ಜರುಗಲಿದೆ ಮದ್ಯ ವ್ಯಸನಿಗಳು ಅಸುರಕ್ಷಿತ ವಾಹನ ಚಾಲನೆಯಿಂದಾಗುತ್ತಿರುವ ಅಪಘಾತ ನಿಯಂತ್ರಣ,ಹಾಗೂ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಜಾಗ್ರತೆ ಮೂಡಿಸುವ ಕಾರ್ಯ ಮುಂದುವರೆಯಲಿದೆ.ಈ ನಿಟ್ಟಿನಲ್ಲಿ ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳು,ಸಂಘ ಸಂಸ್ಥೆಗಳ ಪದಾಧಿಕಾರಿಗಳು ಇಲಾಖೆಯೊಂದಿಗೆ ಸಹಕರಿಸಬೇಕೆಂದರು.ಪಟ್ಟಣದ ಕೆಲ ಜನಪ್ರತಿನಿಧಿಗಳು ಹಾಗು ಕೆಲ ಸಂಘಟನೆಗಳ ಪದಾಧಿಕಾರಿಗಳು, ಅಪರಾಧ ನಿಗ್ರಹ ದಳದ ಪಿಎಸೈ, ಎಎಸೈ ಸೇರಿದಂತೆ ಪೊಲೀಸ್ ಸಿಬ್ಬಂದಿ ಹಾಜರಿದ್ದರು.

ವರದಿ ವಿ.ಜಿ.ವೃಷಭೇಂದ್ರ ಕೂಡ್ಲಿಗಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
