ಅಡುಗೆ ಸಿಬ್ಬಂದಿಯವರ ಕಾರ್ಯ ಶ್ಲಾಘನೀಯವಾದದ್ದು
ಸಿಂಧನೂರು : ಅಕ್ಷರ ದಾಸೋಹ ಕಾರ್ಯಕ್ರಮದ ಯಶಸ್ವಿಗೊಳಿಸಲು ಕಾರಣರಾದವರಿಗೆ ಸನ್ಮಾನಿಸಿ ಗೌರವಿಸಿದ್ದು ಶ್ಲಾಘನೀಯ ಕಾರ್ಯವಾಗಿದೆ. ಶಾಲೆಯಲ್ಲಿ ಮಕ್ಕಳಿಗೆ ತಾಯಿ ರೂಪದಲ್ಲಿ ಅವರಿಗೆ ಅಡುಗೆ ಮಾಡಿ ನೀಡುವ ಮೂಲಕ ಮಕ್ಕಳ ಪ್ರೀತಿಗೆ ಪಾತ್ರರಾಗಿದ್ದಾರೆ. ಅಕ್ಷರ ದಾಸೋಹದ ಯೋಜನೆಗಳನ್ನು ಯಶಸ್ವಿಗೊಳಿಸುವಲ್ಲಿ ಅಡುಗೆ ಸಿಬ್ಬಂದಿ ಅವರ ಪಾತ್ರ ಮಹತ್ತರವಾದದ್ದು ಎಂದು ಶ್ರೀ ಶರಣಪ್ಪ ಸಹಾಯಕ ನಿರ್ದೇಶಕರು ಅಕ್ಷರ ದಾಸೋಹ ಕೇಂದ್ರ ಸಿಂಧನೂರು ಅವರು ಮಾತನಾಡಿದರು.
ಇಂದು ತಾಲೂಕಿನ ದೇವರಗುಡಿ ಪಂಚಾಯ್ತಿ ವ್ಯಾಪ್ತಿಯ ದೇವಿ ಕ್ಯಾಂಪ್ ನಲ್ಲಿ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಅಡುಗೆ ಸಿಬ್ಬಂದಿಯವರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಮಾರಂಭದ ಉಪನ್ಯಾಸಕರಾಗಿ ಆಗಮಿಸಿದಂತಹ ಶ್ರೀಮತಿ ರಮಾದೇವಿ ಶಂಭೋಜಿ ಅವರು ಇಂದಿನ ಆಧುನಿಕ ಯುಗದಲ್ಲಿ ಹಲವಾರು ಕ್ಷೇತ್ರಗಳಲ್ಲಿ ಮಹಿಳೆ ಸಾಧನೆಯನ್ನು ಸಾಧಿಸಿದ್ದಾಳೆ. ದೇಶದ ಪ್ರಗತಿಯಲ್ಲಿ ಮಹಿಳೆಯ ಪಾತ್ರಮಹತ್ವದ್ದಾಗಿದೆ. ಮಹಿಳೆಯರನ್ನು ಗೌರವಿಸುವ ಪ್ರವೃತ್ತಿ ಇನ್ನೂ ಹೆಚ್ಚಾಗಿ ಬೆಳೆಯಬೇಕು.ಸಮಾನ ಅವಕಾಶ ನೀಡಬೇಕೆಂದು ಹೇಳಿದರು
ಪ್ರಾಸ್ತವಿಕವಾಗಿ ಮಾತನಾಡಿದ Crp ಗಿರೀಶ್ ವಿ ಬಿ ಅವರು ಕಳೆದ ವರ್ಷದಿಂದ ನಮ್ಮ ಸಿರ್ಸಿಯಲ್ಲಿ ಸಾಧನೆ ಸಾಧಿಸಿದ ಶಿಕ್ಷಕರಿಗೆ ಗೌರವಿಸುವ ಪರಿಪಾಠವನ್ನು ಕಳೆದ ವರ್ಷದಿಂದ ಮಾಡಿಕೊಂಡು ಬರಲಾಗುತ್ತಿದೆ. ಈ ವರ್ಷ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಅಡುಗೆ ಸಿಬ್ಬಂದಿ ಅವರಿಗೆ ಸನ್ಮಾನಿಸಿ ಗೌರವಿಸಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ BRP ಗಳು ಆದಂತಹ ರವಿ ಪವಾರ್ ಹಾಗೂ ಪಂಪಾಪತಿ ಅವರು ಭಾಗವಹಿಸಿದ್ದರು
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಹನುಮಂತಪ್ಪ ಶಿಕ್ಷಣ ಸಂಯೋಜಕರು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಅಶೋಕ್ ಗಾಜಿ ,ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ರಾಜೇಂದ್ರ ಕುಮಾರ್, ಬಡ್ತಿ ಮುಖ್ಯಗುರುಗಳ ಸಂಘದ ಅಧ್ಯಕ್ಷರಾದ ಅನಂತರಾವ, ಸಾವಿತ್ರಿ ಬಾಪುಲೆ ಶಿಕ್ಷಕರ ಸಂಘದ ಅಧ್ಯಕ್ಷರಾದ ಸುಮಿತ್ರ ಹಿರೇಮಠ, ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರಾದ ರಾಮಕೃಷ್ಣ ನಾಯಕ್, ಗದ್ದೆಪ್ಪ, ಗ್ರಾಮ ಪಂಚಾಯತ ಸದಸ್ಯರಾದ ಶರಣಗೌಡ, ಎಸ್ಡಿಎಂಸಿ ಅಧ್ಯಕ್ಷ ರಾದ ಗೋಪಾಲ್, ಅತಿಥಿಗಳಾಗಿ ವೆಂಕನಗೌಡ ವಟಗಲ್ ಹಾಗೂ ಬೀರಪ್ಪ ಶಂಭೋಜಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು
ಕಾರ್ಯಕ್ರಮದಲ್ಲಿ ಸನ್ಮಾನ ಕಾರ್ಯಕ್ರಮವನ್ನು ಶಂಕರದೇವರು ಹಿರೇಮಠ, ಶ್ರೀಶೈಲ್ ಅಂಬಿಗೇರ, ಶಂಭುಲಿಂಗ ಛಲ್ಲಾ ನಡೆಸಿಕೊಟ್ಟರು
ಕಾರ್ಯಕ್ರಮದ ನಿರೂಪಣೆಯನ್ನು ಸುಷ್ಮಾ ಅವರು ,ಸ್ವಾಗತವನ್ನು ಅಶ್ವಿನಿ ಹಿರೇಮಠ ಕಾರ್ಯಕ್ರಮದ ವಂದನಾರ್ಪಣೆಯನ್ನು ವಿರುಪಾಕ್ಷ ಫಕೀರಪುರರವರು ಮಾಡಿದರು…

ವರದಿ.ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
