21ದಿನಕ್ಕೆ ಕಾಲಿಟ್ಟ ವನಸಿರಿ ಪೌಂಡೇಶನ್ ವತಿಯಿಂದ ಹಸಿರೇ ಉಸಿರು ಕಾರ್ಯಕ್ರಮ.
ಸಿಂಧನೂರು : ಇಂದು ವನಸಿರಿ ಫೌಂಡೇಶನ್ ವತಿಯಿಂದ ಹಸಿರೇ ಉಸಿರು ಕಾರ್ಯಕ್ರಮವನ್ನು ಜನವರಿ 1ರಿಂದ ಪ್ರಾರಂಭವಾಗಿ ಇಂದು 21ನೇ ದಿನಕ್ಕೆ ಸರ್ಕಾರಿ ಮೆಟ್ರಿಕ್ ನಂತರ ಬಾಲಕಿಯರ ವಸತಿ ನಿಲಯ ಆವರಣದಲ್ಲಿ 22 ಸಸಿ ನೆಟ್ಟು ಮತ್ತು ವಿದ್ಯಾರ್ಥಿಗಳಿಗೆ ಅನ್ನ ದಾಸೋಹ ಕಾರ್ಯಕ್ರಮವನ್ನು
ಪದ್ಮಭೂಷಣ, ಕರ್ನಾಟಕ ರತ್ನ, ತ್ರಿವಿಧ ದಾಸೋಹಿ, ಶ್ರೀ ಶಿವಕುಮಾರ ಸ್ವಾಮೀಜಿ ಅವರ ಸಂಸ್ಮರಣೋತ್ಸವ ಹಮ್ಮಿಕೊಳ್ಳಲಾಗಿತ್ತು.
ಶ್ರೀ ಷ.ಭ್ರ.ಸೋಮನಾಥ ಶಿವಾಚಾರ್ಯಮಹಾಸ್ವಾಮಿಗಳು ರಂಭಾಪುರಿ ಶಾಖಾಮಠ ಅವರು ಗಿಡ ನೆಡುವ ಮೂಲಕ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಬೀರಪ್ಪ ಶಂಭೋಜಿ,ಸಮಾಜ ಕಲ್ಯಾಣ ಅಧಿಕಾರಿ ಮಹಾಲಿಂಗಪ್ಪ, ಅಮರೇಗೌಡ ಮಲ್ಲಾಪುರ ವನಸಿರಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರು, ವೀರೇಶ್ ಕೃಷಿ ಇಲಾಖೆ ಅಧಿಕಾರಿ, ಮೌಲಪ್ಪ ಮಾಡಿಸಿರವಾರ,ಕುಮಾರಿ ಆನಂದಿ ಉಪನ್ಯಾಸಕಿ, ಗವಿಗೌಡ ಕನಿಹಾಳ್,ದುರ್ಗೇಶ್ dsp, ಮುದಿಯಪ್ಪ ಹೊಸಳ್ಳಿ ಕ್ಯಾಂಪ್,ಜಮೀರ್ ಪಾಷಾ, ಹನುಮೇಶ ತುರ್ವಿಹಾಳ, ನಾಗರಾಜ ಹತ್ತಿಗುಡ್ಡ, ವೀರಭದ್ರಯ್ಯಸ್ವಾಮಿ ತಿಮ್ಮಾಪುರ,ಮುತ್ತು ಪಾಟೀಲ್ ಬೂತಲದಿನ್ನಿ,ಕಿಟ್ಟಿ, ಪ್ರಕಾಶ್ ಸ್ವಾಮಿ,ಹಾಸ್ಟೆಲಿನ ವಿದ್ಯಾರ್ಥಿನಿಯರು, ಹಾಗೂ ಪರಿಸರ ಪ್ರೇಮಿಗಳು ಭಾಗಿಯಾಗಿದ್ದರು…

ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
