;

ತನಗೆ ಕೋವಿಡ್ ದೃಢಪಟ್ಟಿದ್ದರು, ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರನ್ನು ತರಾಟೆಗೆ ತೆಗೆದುಕೊಂಡ ತಹಸೀಲ್ದಾರ್ ರು…!!!

ಚಳ್ಳಕೆರೆಯ ಖಾಸಗಿ ಕ್ಲಿನಿಕ್​ನ ವೈದ್ಯರೊಬ್ಬರು ಕೊವಿಡ್ ಪಾಸಿಟಿವ್ ಆಗಿದ್ದರೂ, ಸೋಂಕಿನ ಲಕ್ಷಣ ಇಲ್ಲವೆಂದು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದರು. ತಹಶೀಲ್ದಾರ್ ಆಸ್ಪತ್ರೆಗೆ ದಾಳಿ ನಡೆಸಿ, ಸೀಲ್​ಡೌನ್ ಮಾಡಿದ್ದಾರೆ.
ಚಿತ್ರದುರ್ಗ: ಸ್ವತಃ ಕೋವಿಡ್ ಸೋಂಕು ದೃಢಪಟ್ಟರೂ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯನಿಗೆ ತಹಶೀಲ್ದಾರ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ಸಡನ್ ಭೇಟಿ ನೀಡಿದ ತಹಸೀಲ್ದಾರ್ ವೈದ್ಯನ ಮೇಲೆ ಗರಂ ಆಗಿದ್ದಾರೆ. ಚಳ್ಳಕೆರೆ ಖಾಸಗಿ ಆಸ್ಪತ್ರೆಯಲ್ಲಿ ಕೊವಿಡ್ ಸೋಂಕು ದೃಢಪಟ್ಟಿದ್ದರೂ ಕೂಡ ವೈದ್ಯ ವೀರೇಶ್ ಚಿಕಿತ್ಸೆ ನೀಡುತ್ತಿದ್ದರು. ತಹಶೀಲ್ದಾರ್ ರಘುಮೂರ್ತಿ ದಾಳಿ ನಡೆಸಿ, ವೈದ್ಯರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅವರಿಗೆ ಬುಧವಾರ ಬೆಳಗ್ಗೆ 7 ಗಂಟೆಗೆ ಕೊವಿಡ್ ದೃಢವಾಗಿತ್ತು. ಹೋಂ ಐಸೊಲೇಷನ್ ಆಗಲು ವೈದ್ಯರಿಗೆ ಸೂಚನೆ ನೀಡಲಾಗಿತ್ತು. ಆದರೆ ಯಾವುದೇ ಲಕ್ಷಣವಿಲ್ಲವೆಂದು ವೈದ್ಯರು ಚಿಕಿತ್ಸೆ ನೀಡುತ್ತಿದ್ದರು. ಸದ್ಯ ಸೋಂಕಿತ ವೈದ್ಯ ಸಂಪರ್ಕದಲ್ಲಿದ್ದವರಿಗೆ ಸ್ವ್ಯಾಬ್ ಟೆಸ್ಟ್​​ಗೆ ಸೂಚನೆ ನೀಡಲಾಗಿದ್ದು, ಆಸ್ಪತ್ರೆಯನ್ನು ಸೀಲ್​ಡೌನ್ ಮಾಡಲಾಗಿದೆ…

ವರದಿ.ಶಶಿಕುಮಾರ್ ಚಳ್ಳಕೆರೆ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;