ತಾಯಿ ಮಕ್ಕಳ ಆಸ್ಪತ್ರೆ ಸ್ಥಳಾಂತರ ಮಾಡಿದರೆ ಉಗ್ರ ಹೋರಾಟ.
ಸಿಂಧನೂರು : ನಗರದ ಪ್ರವಾಸಿ ಮಂದಿರದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಾಣ ಪರವಾಗಿರುವ ಕೆಲವು ಗ್ರಾಮದ ಮುಖಂಡರು ಪಕ್ಷಾತೀತವಾಗಿ ಪತ್ರಿಕಾಗೋಷ್ಠಿ ನಡೆಸಿದರು.
ತಾಲೂಕಿನ ಗಂಗಾವತಿ ರಸ್ತೆ,ಕುಷ್ಟಗಿ ರಸ್ತೆ ಮತ್ತು ರಾಯಚೂರ ರಸ್ತೆಗಳ ಗ್ರಾಮಗಳುಅಭಿವೃದ್ಧಿಯಾಗಿದ್ದು ಮಸ್ಕಿ ಮುಖ್ಯರಸ್ತೆಯಲ್ಲಿ ಬರುವ ಹಳ್ಳಿ ಗಳು ತೀರಾ ಹಿಂದುಳಿದ ಪ್ರದೇಶವಾಗಿವೆ. ಅಭಿವೃದ್ಧಿಯಾಗಲು ಸರ್ಕಾರ ತಾಯಿ ಮಕ್ಕಳ ಆಸ್ಪತ್ರೆ ಕಲ್ಲೂರು ಗ್ರಾಮದಲ್ಲಿ ಕಟ್ಟಡ ನಿರ್ಮಿಸಲು ಭೂಮಿ ಆಯ್ಕೆ ಮಾಡಿರುವುದು ಈ ಭಾಗದ ಜನರಿಗೆ ಬಹಳ ಖುಷಿಯ ವಿಚಾರವಾಗಿದೆ. ಸ್ವತಂತ್ರ ಬಂದು 75 ವರ್ಷಗಳ ಬಳಿಕ ಮಸ್ಕಿ ರಸ್ತೆಯ ಭಾಗಕ್ಕೆ ಸರಕಾರದ ದೊಡ್ಡ ಯೋಜನೆ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಬಂದಿರುವುದು ನಮಗೆ ತುಂಬಾ ಸಂತೋಷದಾಯಕವಾಗಿದೆ. ಆದರೆ ಕೆಲವು ರಾಜಕೀಯ ಮುಖಂಡರು ವಿರೋಧ ಮಾಡುವುತ್ತಿರುವುದು ಕಾರಣವೇನು ಎಂಬುದು ಗೊತ್ತಾಗುತ್ತಿಲ್ಲ.ಕೆಲ ಮುಖಂಡರು ಅಲ್ಲಿ ಸ್ಮಶಾನ ಇದೆ ಅಲ್ಲಿ ಆಸ್ಪತ್ರೆಮಾಡುವುದು ಬೇಡಾ ಅನ್ನುತಿದ್ದಾರೆ ರಾಯಚೂರಿನ ರಿಮ್ಸ್ ಜಾಗವು ಕೂಡ ಮೊದಲು ಸ್ಮಶಾನದ ಜಾಗವಾಗಿತ್ತು,ಅಲ್ಲಿಗೆ ಜನ ಬರ್ತಿಲ್ವಾ. ಇದರಲ್ಲಿ ರಾಜಕೀಯ ಮಾಡುವದನ್ನು ಬಿಡಬೇಕು. ಸರಕಾರದ ಯಾವುದೇ ಒಂದು ದೊಡ್ಡ ಯೋಜನೆ ನಮ್ಮ ಭಾಗಕ್ಕೆ ನೀಡಿಲ್ಲ. ನಾವು ಕೂಡಾ ನಗರಸಭೆ ವ್ಯಾಪ್ತಿಗೆ ಒಳಪಡುತ್ತೇವೆ. ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಾಣ ಆಗುವುದರಿಂದ ನಮ್ಮ ಭಾಗದಲ್ಲಿ ರಸ್ತೆ ಅಭಿವೃದ್ಧಿ, ವಿದ್ಯುತ್, ಕುಡಿಯುವ ನೀರು, ಇನ್ನಿತರ ಸೌಕರ್ಯಗಳು ದೊರೆಯುತ್ತವೆ. ಗ್ರಾಮವೂ ಅಭಿವೃದ್ಧಿ ಆಗುತ್ತದೆ. ಮಸ್ಕಿ ರಸ್ತೆಯ ಕೆಲವು ಹಳ್ಳಿಗಳಿಗೆ ಅನುಕೂಲವಾಗಿದೆ. ಗ್ರಾಮಗಳ ಅಭಿವೃದ್ಧಿ ಸಹಿಸದ ಕೆಲವು ರಾಜಕೀಯ ಮುಖಂಡರು ಪತ್ರಿಕೆ ಹೇಳಿಕೆ ಮುಖಾಂತರ ವಿರೋಧ ಮಾಡುತ್ತಿದ್ದಾರೆ. ಯಾವ ಸಂಘ ಸಂಸ್ಥೆಗಳು, ಜನಸಾಮನ್ಯರು, ವಿರೋಧ ಮಾಡುತ್ತಿಲ್ಲ. ರಾಜಕೀಯ ಮುಖಂಡರು ವಿರೋಧ ಮಾಡುವುದನ್ನು ಬಿಟ್ಟು ನಮಗೆ ಬೆಂಬಲ ನೀಡಬೇಕು.ಒಂದು ವೇಳೆ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಬೇರೆಡೆ ಸ್ಥಳಾಂತರ ಮಾಡಿದರೆ ಈ ಭಾಗದ ಜನರೆಲ್ಲರೂ ಸೇರಿ ಪಕ್ಷಬೇದ ಮರೆತು ಒಕ್ಕಟ್ಟಿನಿಂದ ರಸ್ತೆ ಬಂದ ಮಾಡುವುದರ ಮೂಲಕ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಪತ್ರಿಕಾಗೋಷ್ಠಿ ಮುಖಾಂತರ ಪಕ್ಷಾತೀತವಾಗಿ ಮನವಿ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ದೊಡ್ಡ ಯಂಕನಗೌಡ, ನಾಗೇಶಗೌಡ, ವೆಂಕೋಬ ಭಾವಿಕಟ್ಟಿ, ಕಾಳಿಂಗರೆಡ್ಡಿ ಭೂತಲದಿನ್ನಿ, ನಾಗನಗೌಡ ಬೂತಲದಿನ್ನಿ, ಸೋಮನಾಥ ಭೂತಲದಿನ್ನಿ, ವೆಂಕೋಬ ಜಿನ್ನದ್, ಭೂತಲದಿನ್ನಿ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀನಿವಾಸ,ವೆಂಕೋಬ ಏರ್ಟೆಲ್, ಚನ್ನಬಸವಸ್ವಾಮಿ, ಅನ್ವರಿ ಬಸವರಾಜು ,ಕರೇಗೌಡ ಕಲ್ಲೂರು,ಬಸವರಾಜ ಗ್ರಾ.ಪಂ.ಸ,ಹನುಮಂತ ಗ್ರಾ.ಪಂ.ಸ,ಬಸಯ್ಯ ಸ್ವಾಮಿ ಭೂತಲದಿನ್ನಿ, ಇನ್ನಿತರ ಮುಖಂಡರು ಭಾಗವಹಿಸಿದ್ದರು…

ವರದಿ.ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
