ಒಡೆದ ಮನೆಯಂತಾಗಿದೆ ಕಾಂಗ್ರೆಸ್
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಹೋಬಳಿಯ ಹೊಸಹಳ್ಳಿ ಗಾಣಿಗರ ಸಮುದಾಯ ಭವನದಲ್ಲಿ ಭಾರತೀಯ ಜನತಾ ಪಾರ್ಟಿಯ ತಾಲೂಕು ಘಟಕ ದಿಂದ ಶನಿವಾರ ವಿಧಾನಪರಿಷತ್ ಚುನಾವಣೆಯ ಪ್ರಚಾರ ಸಭೆಯಲ್ಲಿ ಸಾರಿಗೆ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಸಚಿವರಾದ ಬಿ. ಶ್ರೀರಾಮುಲು ರವರು ಮಾತನಾಡಿ ಕಾಂಗ್ರೆಸ್ ನವರು ಪಾರ್ಟ್ ಟೈಮ್ ನಾಯಕರು. ರಾಜಕಾರಣ ಮಾಡುವ ಸಮಯದಲ್ಲಿ ಮಾತ್ರ ಬರುತ್ತಾರೆ. ಹೋಗುತ್ತಾರೆ. ಆದರೆ ಪ್ರಧಾನಿ ಮೋದಿಯವರು ಸಂಪೂರ್ಣವಾಗಿ ರಾಜಕೀಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಜನರ ಅಭಿವೃದ್ಧಿಗೆ ಅವಿರತ ಶ್ರಮಿಸುತ್ತಿದ್ದಾರೆ. ಕಾಂಗ್ರೆಸ್ ಒಡೆದ ಮನೆಯಂತಾಗಿದ್ದು. ನಾವು ಈ ಬಾರಿ 25 ಕ್ಷೇತ್ರಗಳಲ್ಲಿ 14 ಕ್ಷೇತ್ರ ಗೆದ್ದು ತೋರಿಸುತ್ತೇವೆ. ತಳಮಟ್ಟದ ಅಭಿವೃದ್ಧಿಯೇ ನಮ್ಮ ಗುರಿಯಾಗಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವರಾದ ಆನಂದ್ ಸಿಂಗ್ ಮಾತನಾಡಿ ವಿಧಾನಸಭೆಯಲ್ಲಿ ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ರೂಪಿತವಾಗುವ ಶಾಸನಗಳು ಅನುಷ್ಠಾನಕ್ಕೆ ಬರಬೇಕಾದರೆ ಮೇಲ್ಮನೆ ಅವಶ್ಯಕವಾಗಿದೆ. ದೇಶ ಹಾಗೂ ರಾಜ್ಯದ ಸಮಗ್ರ ಅಭಿವೃದ್ಧಿಗೆ ನಿರೀಕ್ಷಿಸಿ ಅಭ್ಯರ್ಥಿ ವೈ ಎಂ ಸತೀಶ್ ರೆಡ್ಡಿ ಅವರನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು. ಗ್ರಾಮ ಪಂಚಾಯಿತಿಯಲ್ಲಿ ಮಹಿಳೆಯರಿಗಾಗಿ ಶೇ 50ರ ಮೀಸಲಾತಿ ಜಾರಿಗೆ ತಂದಿದ್ದೇವೆ ಪ್ರತಿ ಗ್ರಾಮ ಪಂಚಾಯಿತಿ ಕೇಂದ್ರದಿಂದ 2 ಕೋಟಿ ಅನುದಾನ ದೊರೆಯುತ್ತಿದೆ. ನಮ್ಮದು ಮಾತು ಕಡಿಮೆ ಕೆಲಸ ಹೆಚ್ಚು ಎನ್ನುವುದಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಜಾರಿಗೊಳಿಸಿದ ಜನಪರ ಕಾರ್ಯಕ್ರಮಗಳ ಸಾಕ್ಷಿಯಾಗಿದೆ.
ಕಾಂಗ್ರೆಸ್ ಸಂಪೂರ್ಣ ನೆಲಕಚ್ಚಿದ್ದು ಮುಳುಗುವ ಹಡಗಿನಂತೆ ಆಗಿದೆ ಎಂದು ವ್ಯಂಗ್ಯವಾಡಿದರು.
ನಮ್ಮ ಜನಪ್ರಿಯ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಅವರು ಮುಖ್ಯಮಂತ್ರಿಗಳಾದ ಕೆಲವೇ ಗಂಟೆಗಳಲ್ಲಿ ರೈತರ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡುವುದಾಗಿ ಘೋಷಣೆ ಮಾಡಿದರು ಎಂದು ಇದೇ ಸಂದರ್ಭದಲ್ಲಿ ಸ್ಮರಿಸಿದರು.
ನಂತರ ಜನಪ್ರಿಯ ಶಾಸಕರಾದ ಎನ್. ವೈ .ಗೋಪಾಲಕೃಷ್ಣ ಮಾತನಾಡಿ
ತಾಲೂಕಿನ 74 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಜಾರಿಗೆ ತಂದಿದ್ದೇವೆ. ಪಕ್ಷದ ಅಭ್ಯರ್ಥಿ ಎಂ ಸತೀಶ್ ರೆಡ್ಡಿ ಅವರಿಗೆ ಮೊದಲ ಪ್ರಾಶಸ್ತ್ಯ ಮತಗಳನ್ನು ನೀಡಬೇಕೆಂದು ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಮಾಜಿ ಲೋಕಸಭಾ ಸದಸ್ಯರಾದ ಜೆ. ಶಾಂತಾ. ವಿಧಾನಪರಿಷತ್ ಚುನಾವಣಾ ಅಭ್ಯರ್ಥಿ ವೈ ಎಂ ಸತೀಶ್ ರೆಡ್ಡಿ. ಭಾರತೀಯ ಜನತಾಪಾರ್ಟಿಯ ಜಿಲ್ಲಾಧ್ಯಕ್ಷರಾದ ಚನ್ನಬಸವನಗೌಡ ಪಟೇಲ್. ರಾಮಲಿಂಗಪ್ಪ. ಮುರಾರಿ ಗೌಡ. ಅನಿಲ್ ನಾಯ್ಡು. ಹನುಮಂತಪ್ಪ. ಗುಂಡುಮುಣುಗು ತಿಪ್ಪೇಸ್ವಾಮಿ. ಕೆಎಂ ತಿಪ್ಪೇಸ್ವಾಮಿ. ಬಂಗಾರಿ ಹನುಮಂತ . ಬಿಜೆಪಿ ಮಂಡಲ ಅಧ್ಯಕ್ಷ ಕೆ ಚೆನ್ನಪ್ಪ .ಟಿ.ಜಿ. ಮಲ್ಲಿಕಾರ್ಜುನಗೌಡ. ಭೀಮೇಶ್ ಕೂಡ್ಲಿಗಿ. ಕೆಎಚ್ ಎಂ ಸಚಿನ್ ಕುಮಾರ್. ಪ್ರಕಾಶ್ ಗುಂಡುಮುಣುಗು. ಸುಭಾಶ್ಚಂದ್ರ. ಸುದರ್ಶನ ತಳವಾರ್. ರಾಮದುರ್ಗದ ಸೂರ್ಯ ಪಾಪಣ್ಣ. ಕಾನಾಮಡುಗು ಜಯರಾಜ್. ಹುಡೇಂ ಪಾಪನಾಯಕ. ಕುಲುಮೆ ಹಟ್ಟಿ ವೆಂಕಟೇಶ್. ವೀರೇಶ್ ಕಿಟ್ಟಪ್ಪ ನವರ್. ಹನುಮಜ್ಜ ನಾಗೇಶ್. ಅಂಜಿನಪ್ಪ. ಹಾಗೂ ಗ್ರಾಮ ಪಂಚಾಯಿತಿಯ ಸದಸ್ಯರುಗಳು ಹಾಗೂ ಮಹಿಳಾ ಸದಸ್ಯರು ಬಿಜೆಪಿ ಮುಖಂಡರು ವಿವಿಧ ಮೋರ್ಚಾಗಳ ಸದಸ್ಯರುಗಳು ಪಕ್ಷದ ಕಾರ್ಯಕರ್ತರು ಇತರರು ಸೇರಿ ಉಪಸ್ಥಿತರಿದ್ದರು…

ವರದಿ. ವಿರೇಶ್, ಕೆ, ಎಸ್, ಕಾನಹೋಸಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
