ಕಾನಹೊಸಹಳ್ಳಿ
ಬಸ್ ನಿಲ್ದಾಣದಲ್ಲಿ ವಿದ್ಯುತ ದೀಪ ಅಳವಡಿಸಿ
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಕಾನಹೊಸಹಳ್ಳಿ ಬಸ್ ನಿಲ್ದಾಣದಲ್ಲಿ ಸುಮಾರು ತಿಂಗಳುಗಳಿಂದ ವಿದ್ಯುತ್ ದೀಪಗಳಿಲ್ಲದೆ ಸಂಜೆಯಾಗುತ್ತಿದ್ದಂತೆ ಬಸ್ ನಿಲ್ದಾಣಕ್ಕೆ ಬಸ್ಸುಗಳು ಬಂದಾಗ ಬಸ್ಸಿನಿಂದ ಇಳಿದ ಪ್ರಯಾಣಿಕರಿಗೆ ಯಾವ ಕಡೆಗೆ ಹೋಗಬೇಕು ಗೊತ್ತಾಗುತ್ತಿಲ್ಲ. ಬಸ್ ನಿಲ್ದಾಣದ ಕಾಂಪೌಂಡ್ ಒಳಗಡೆ ಮುಳ್ಳಿನ ಬೇಲಿ ಬೆಳೆದಿದ್ದು ಹಾವು ಚೇಳು ವಿಷಜಂತುಗಳು ವಾಸಿಸುವ ತಾಣವಾಗಿದೆ, ಬಸ್ ನಿಲ್ದಾಣಮಳೆಯಿಂದ ಸೋರುತಿದ್ದು ಪ್ರಯಾಣಿಕರು ನಿಲ್ದಾಣದಲ್ಲಿ ಕುಳಿತುಕೊಳ್ಳುವಂತಿಲ್ಲ, ಬಸ್ ನಿಲ್ದಾಣದ ಕಾಂಪೌಂಡ್ ಒಳಗೆ ಬಸ್ಸುಗಳು ಪ್ರವೇಶಿಸುವ ದ್ವಾರದಲ್ಲಿ ತಗ್ಗು ಗುಂಡಿಗಳು ಬಿದ್ದಿದ್ದು ಮಳೆಯ ನೀರು ನಿಂತುರಸ್ತೆ ಹದಗೆಟ್ಟು ಹೋಗಿರುತ್ತದೆ,ಈ ವಿಚಾರವಾಗಿ ಸಂಬಂಧಪಟ್ಟ ಅಧಿಕಾರಿಗಳಲ್ಲಿ ಸುಮಾರು ಬಾರಿ ಮನವಿ ಪತ್ರವನ್ನು ಸಲ್ಲಿಸಲಾಯಿತು,ಆದರೂ ಪ್ರಯೋಜನವಾಗಿಲ್ಲ ಎಂದುಸಾರ್ವಜನಿಕರು ದೂರುತ್ತಿದ್ದಾರೆ,ಈ ಬಾರಿಯಾದರೂ ವರದಿ ನೋಡಿದ ತಕ್ಷಣ,ಸಂಬಂಧಪಟ್ಟ ಅಧಿಕಾರಿಗಳು,ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಬಸ್ ನಿಲ್ದಾಣದ ಕಾಂಪೌಂಡಿನಲ್ಲಿ ಬೆಳೆದ ಮುಳ್ಳಿನ ಬೇಲಿಯನ್ನುಸ್ವಚ್ಛತೆ ಮಾಡಿಸಿ,ಬಸ್ ನಿಲ್ದಾಣದಲ್ಲಿ ವಿದ್ಯುದ್ದೀಪಗಳನ್ನು ಕಲ್ಪಿಸಿ,ಇಲ್ಲಿನ ಅವ್ಯವಸ್ಥೆಗಳನ್ನು ಸರಿಪಡಿಸಿ, ಸಾರ್ವಜನಿಕರಿಗೂ ಹಾಗೂ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕಾಗಿ,ಕಾನ ಹೊಸಹಳ್ಳಿ ಗ್ರಾಮಸ್ಥರು, ಸಾರ್ವಜನಿಕರು ಪ್ರಯಾಣಿಕರು ಮುಖಂಡರು ಸಂಬಂಧಪಟ್ಟ ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿರುತ್ತಾರೆ…

ವರದಿ. ವಿರೇಶ್, ಕೆ, ಎಸ್, ಕಾನಹೋಸಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
