;

ಸಿಂಧನೂರು : ದಲಿತ ಅಲ್ಪಸಂಖ್ಯಾತರ, ಶೋಷಿತ ಸಮುದಾಯಗಳ ಒಕ್ಕೂಟದಿಂದ ಎಪಿಎಂಸಿಯ ಶ್ರಮಿಕ ಭವನದಲ್ಲಿ ಪತ್ರಿಕಾಗೋಷ್ಠಿ ಕರೆಯಲಾಗಿತ್ತು…!!!

ಸಿಂಧನೂರು : ದಲಿತ ಅಲ್ಪಸಂಖ್ಯಾತರ, ಶೋಷಿತ ಸಮುದಾಯಗಳ ಒಕ್ಕೂಟದಿಂದ ಎಪಿಎಂಸಿಯ ಶ್ರಮಿಕ ಭವನದಲ್ಲಿ ಪತ್ರಿಕಾಗೋಷ್ಠಿ ಕರೆಯಲಾಗಿತ್ತು. ಈ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಎಮ್. ಗಂಗಾಧರ್ ಸ್ವತಂತ್ರ ಬಂದು ಏಳು ದಶಕಗಳು ಕಳೆದರೂ ದಿನನಿತ್ಯ ದಲಿತರ, ಅಲ್ಪಸಂಖ್ಯಾತರ,ರೈತರ,ಕೆಳ ಸಮೂದಾಯದ ಜನಾಂಗೀಯ ಮೇಲೆ ದೌರ್ಜನ್ಯ, ಅತ್ಯಾಚಾರ, ದಬ್ಬಾಳಿಕೆ, ಜಾತೀಯತೆ, ಲಿಂಗತಾರತಮ್ಯ, ಅಸಮಾನತೆ, ನಿಂತಿಲ್ಲ, ಸಾಮಾಜಿಕ ಅನ್ಯಾಯದ ವಿರುದ್ಧ ಬಿಡಿ ಬಿಡಿಯಾಗಿ ಹೋರಾಟ ಮತ್ತು ಚಳುವಳಿಗಳನ್ನು ದೇಶದ ಮತ್ತು ರಾಜ್ಯದ ತುಂಬೆಲ್ಲ ಮಾಡಿದ್ದೇವೆ. ದಲಿತಪರ, ಅಲ್ಪಸಂಖ್ಯಾತಪರ,ಕನ್ನಡಪರ,ಕೂಲಿಕಾರ್ಮಿಕಪರ,ರೈತಪರ,ಮಹಿಳಾ ಸಂಘಟನೆಗಳು ಒಗ್ಗೂಡಿ ವಿಭಿನ್ನ ರೀತಿಯಲ್ಲಿ ಭಾರತ ರತ್ನ, ಸಂವಿಧಾನ ಶಿಲ್ಪಿ, ಡಾ.ಬಿ.ಆರ್ ಅಂಬೇಡ್ಕರ್ ಅವರ 65ನೇ ಮಹಾಪರಿನಿರ್ವಾಣ ದಿನವನ್ನು ಡಿಸೆಂಬರ್ 6 ರಂದು ಅದ್ದೂರಿಯಾಗಿ ಆಚರಿಸಲಾಗುವುದು. ಈ ಸಂದರ್ಭದಲ್ಲಿ ಬಹಿರಂಗ ಸಭೆ ಏರ್ಪಡಿಸಿದ್ದು, ಈ ಸಭೆಯಲ್ಲಿ ವಿವಿಧ ಧರ್ಮಗಳ ಧರ್ಮಗುರುಗಳ, ಚಿಂತಕರು, ದಲಿತ ಪರ, ಕನ್ನಡಪರ, ಮಹಿಳಾ ಪರ, ರೈತ ಪರ, ಸಂಘಟನೆಗಳು ಭಾಗವಹಿಸುವವರು. ತಾಲೂಕು ಪಂಚಾಯತ್ ಉದ್ಯಾನವನದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮೆರವಣಿಗೆ ಮೂಲಕ ಬಸವ ವೃತ್ತ, ಬಸ್ ನಿಲ್ದಾಣ,ಬಾಬು ಜಗಜೀವನ್ ರಾವ್ ವೃತ್ತದಿಂದ ಎಪಿಎಂಸಿ ಎರಡನೆಯ ದ್ವಾರದ ರೈತ ಭವನದಲ್ಲಿ ಬಹಿರಂಗ ಸಭೆ ಏರ್ಪಡಿಸಲಾಗಿದೆ. ಈ ಬಹಿರಂಗ ಸಭೆಗೆ ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ದಲಿತ ಮುಖಂಡ ಅಮರೇಶ ಗಿರಿಜಾಲಿ ಲಿಂಗಸೂಗೂರು ತಾಲೂಕಿನ ಕಿಲಾರಟ್ಟಿ ಯಲ್ಲಿ ನಡೆದ ದಲಿತರ ಮೇಲಿನ ದೌರ್ಜನ್ಯ ಖಂಡಿಸಿ ದಿನಾಂಕ 29-11-2021 ರಂದು ದಲಿತ ಸಂಘಟನೆಗಳ ಒಕ್ಕೂಟದಿಂದ “ಲಿಂಗಸುಗೂರು ಬಂದ್” ಕರೆ ನೀಡಲಾಗಿದೆ ಈ ಬಂದ್ ಕರೆಯಲ್ಲಿ ದಲಿತ ಪರ, ಕನ್ನಡಪರ, ಮಹಿಳಾ ಪರ,ಸಂಘಟನೆಗಳ ಮುಖಂಡರುಗಳು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಹನುಮಂತಪ್ಪ ಹಂಪನಾಳ, ಅಮರೇಶ ಗಿರಿಜಾಲಿ, ದಾವಲಸಾಬ ದೊಡ್ಡಮನಿ, ಬಿಮೇಶ ಕವಿತಾಳ, ಸೈಯದ್ ರಬ್ಬಾನಿ ಜಾಹಗೀರದಾರ್ ಇನ್ನೂ ಮುಂತಾದವರು ಭಾಗವಹಿಸಿದ್ದರು…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *