ಸಿಂಧನೂರು : ಬೆಲೆ ಖಾತ್ರಿ ಕಾಯ್ದೆ ಜಾರಿಗೆ ಒತ್ತಾಯಿಸಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ.
ದೆಹಲಿ ಗಡಿಯಲ್ಲಿ ಹುತಾತ್ಮರಾದ 700 ರೈತರ ಕುಟುಂಬಗಳಿಗೆ ತಲಾ 50 ಲಕ್ಷ ಪರಿಹಾರ ಬೆಳೆ ನಷ್ಟ ಪರಿಹಾರ ಶೀಘ್ರದಲ್ಲಿ ವಿತರಿಸಲು ಮತ್ತು ಬೆಲೆ ಖಾತ್ರಿ ಕಾಯ್ದೆ ಜಾರಿಗೆ ಒತ್ತಾಯಿಸಿ ನಗರದ ಗಾಂಧಿ ವೃತ್ತದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರದ ವಿರುದ್ಧ ಸಯುಕ್ತ ಕಿಸಾನ್ ಮೋರ್ಚಾ (ಎಸ್.ಕೆ.ಎಂ) ರೈತ ವಿರೋಧಿ ಕೃಷಿ ಕಾನೂನುಗಳ ರದ್ದತಿ ಹೋರಾಟ ಸಮಿತಿ ಸಹಭಾಗಿತ್ವದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ಮಾಡಲಾಯಿತು.
ಬೆಲೆ ಖಾತ್ರಿ ನಿಗದಿ (ಎಂ ಎಸ್ ಪಿ) ಕಾನೂನು ಬದ್ಧಗೊಳಿಸಬೇಕು, ಅಕಾಲಿಕ ಮಳೆಯಿಂದ ಹಾನಿಗೊಳಗಾದ ರೈತರಿಗೆ 50 ಸಾವಿರ ಪರಿಹಾರ ನೀಡಬೇಕು, ಯಾವುದೇ ಷರತ್ತಿಲ್ಲದೆ ಖರೀದಿ ಕೇಂದ್ರದಲ್ಲಿ ಭತ್ತ ಖರೀದಿಸಿದ 24 ಗಂಟೆಯೊಳಗೆ ರೈತರ ಖಾತೆಗೆ ಹಣ ಜಮಾ ಮಾಡಬೇಕು, ವಿದ್ಯುತ್ ಖಾಸಗಿಕರಣ ಮಸುದೆ ಕೈಬಿಡಬೇಕು. ಕರ್ನಾಟಕ ಭೂ ಸುಧಾರಣೆ ಕಾಯ್ದೆ ಹಾಗೂ ಗೋಹತ್ಯೆ ನಿಷೇಧ ಕಾಯ್ದೆಯನ್ನು ಕೂಡಲೇ ವಾಪಸ್ ಪಡೆಯಬೇಕು ಹಿಗೇ ಇನ್ನಿತರ ಬೇಡಿಕೆಗಳನ್ನು ಸರ್ಕಾರಕ್ಕೆ ಒತ್ತಾಯಿಸಿದರು.
ದೇವೆಂದ್ರಪ್ಪ ಮಾತನಾಡಿ 12 ತಿಂಗಳ ನಿರಂತರ ಹೋರಾಟದಲ್ಲಿ 700ಕ್ಕೂ ಹೆಚ್ಚು ರೈತರ ಪ್ರಾಣತ್ಯಾಗ ಲೆಕ್ಕಿಸದ ಕಾರ್ಪೊರೇಟ್ ಪಕ್ಷಪಾತಿ ಮೋದಿ ಸರ್ಕಾರ ವಿನಾಶಕಾರಿ ಕೃಷಿ ಕಾಯ್ದೆಗಳ ರದ್ದತಿಗಾಗಿ ದೆಹಲಿಯ ಗಡಿಗಳಲ್ಲಿ ರೈತರು ನಡೆಸುತ್ತಿರುವ ಐತಿಹಾಸಿಕ ಹೋರಾಟದಲ್ಲಿ 700ಕ್ಕೂ ಅಧಿಕ ರೈತರು ಹುತಾತ್ಮರಾಗಿದ್ದಾರೆ. ಬಿಜೆಪಿ ಸರ್ಕಾರದ ದೌರ್ಜನ್ಯ, ದಮನಕ್ಕೆ ಮಣಿಯದೆ ಕುತಂತ್ರಗಳಿಗೆ ಬಲಿಯಾಗದೆ ಈ ಹೋರಾಟ ಸರ್ಕಾರ ಕಾಯ್ದೆಗಳನ್ನು ಬಿಡುವವರೆಗೂ ಮುಂದುವರಿಯಲಿದೆ, ರೈತರ ಮೇಲೆ ಹಾಕಿರುವ ಕೇಸನ್ನು ವಾಪಸ್ ಪಡೆಯಬೇಕು. ಎಂದು ಪ್ರತಿಭಟನೆ ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಶೆಕ್ಷಾಖಾದ್ರಿ, ನಾಗರಾಜ್ ಪೂಜಾರ್, ಚಂದ್ರಶೇಖರ್ ಗೊರೆಬಾಳ, ಭಾಷುಮೀಯಾ, ನರಸಿಂಹಪ್ಪ,ಶರಣಪ್ಪ ಮಳ್ಳಿ, ಯಂಕಪ್ಪ ಕೆಂಗಲ್, ಬಸವರಾಜ್ ಬಾದರ್ಲಿ, ಚಂದ್ರಪ್ಪ ಇನ್ನೂ ಅನೇಕ ರೈತ ಮುಖಂಡರು, ಕಾರ್ಮಿಕರು ಭಾಗವಹಿಸಿದ್ದರು…
ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
