;

ಮೊಳಕಾಲ್ಮುರು: ಸಿದ್ದಯ್ಯನ ಕೋಟೆಯಲ್ಲಿ ಗ್ರಂಥಾಲಯ ಪ್ರಾರಂಭ; ಪೊಲೀಸ್ ತಿಮ್ಮ ಬ್ರಿಗೇಡ್, ಗ್ರಾ.ಪಂ. ನೆರವು.!!

ಚಿತ್ರದುರ್ಗ: ಮೊಳಕಾಲ್ಮೂರು ತಾಲೂಕಿನ ಸಿದ್ದಯ್ಯನಕೋಟೆ ಗ್ರಾಮದಲ್ಲಿ ಇಂದು ಗ್ರಂಥಾಲಯ ಪ್ರಾರಂಭಿಸಲಾಗಿದೆ. (ಅ,1) ಗ್ರಾಮದ ವಿಜಯ ಮಹಂತೇಶ್ವರ ನಗರದಲ್ಲಿರುವ ವಾಲ್ಮೀಕಿ ಭವನವು ಉಪಯೋಗಕ್ಕೆ ಬಾರದೇ ಇರುವುದನ್ನು ಮನಗಂಡ ಪೊಲೀಸ್ ತಿಮ್ಮ ಬ್ರಿಗೇಡ್ ಸಾಂಸ್ಕೃತಿಕ ಕಲಾ ಸಂಘದ ಯುವಕರು ಈ ಬಗ್ಗೆ ಗ್ರಾಮ ಪಂಚಾಯಿತಿಗೆ ತಿಳಿಸಿ ಗ್ರಂಥಾಲಯದ ಪರಿವರ್ತನೆಗೆ ಮನವಿ ಸಲ್ಲಿಸಿದ್ದರು.

ಕೂಡಲೇ ಗ್ರಾಮ ಪಂಚಾಯಿತಿಯು ಗ್ರಂಥಾಲಯಕ್ಕೆ ಅಗತ್ಯ ನೆರವು ನೀಡುವುದರ ಮೂಲಕ ಗ್ರಂಥಾಲಯ ಪ್ರಾರಂಭಕ್ಕೆ ಸಹಕಾರ ನೀಡಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮಲ್ಲಿಕಾರ್ಜುನ್ ರವರು ಗ್ರಾಮದಲ್ಲಿ ವಿದ್ಯಾರ್ಜನೆಗಾಗಿ ಗ್ರಂಥಾಲಯ ತೆರೆಯಲಾಗಿದ್ದು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಉದ್ಯೋಗ ಪಡೆಯಲು ಪ್ರಚಲಿತ ಜ್ಞಾನ ಅವಶ್ಯಕತೆ ಇದ್ದು ಗ್ರಂಥಾಲಯದಲ್ಲಿ ಸಿಗುವ ಪುಸ್ತಕಗಳು ಹಾಗೂ ದಿನಪತ್ರಿಕೆಗಳನ್ನು ಓದಿ ಸಿಇಟಿ ಪರೀಕ್ಷೆಗೆ ಯುವಕರು ಪ್ರೇರಣೆಗೊಳ್ಳಬೇಕು ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಪಿಡಿಓ ನೂರುಲ್ಲಾ ಗ್ರಾ.ಪಂ ಸದಸ್ಯರಾದ ಬಸವರಾಜ್, ಮೂರ್ತಿ, ಮಂಜಣ್ಣ, ಕೊಲ್ಲರಪ್ಪ, ಊರಿನ ಮುಖಂಡರಾದ ಮರಿಸ್ವಾಮಿ, ಶಿವಣ್ಣಗೌಡ, ಕಾಂತರಾಜ್, ಲಕ್ಷ್ಮಣ್, ಜಗದೀಶ, ಅಂಜಿನಿ, ಲೋಹಿತ್, ಸರ್ವೆ ಅಧಿಕಾರಿ ಶಿವರಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು…

ವರದಿ.ಮಂಜುನಾಥ್, ಎಚ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;