ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಸನ್ಮಾನ್ಯ ಬಸವರಾಜ್ ಬೊಮ್ಮಾಯಿ ಅವರಿಗೆ ಹೃದಯ ಪೂರ್ವಕ ಶುಭಾಶಯಗಳು ಹಾಗೂ ಅಭಿನಂದನೆಗಳು.
ನಮ್ಮ ಕೂಡ್ಲಿಗಿ ತಾಲೂಕು ಅತಿ ಹಿಂದುಳಿದ ತಾಲೂಕು ಆಗಿದ್ದು 2018ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದಿಂದ ಎನ್. ವೈ. ಗೋಪಾಲಕೃಷ್ಣ ಸರ್ ರವರು ವಿಧಾನಸಭೆಗೆ ಆಯ್ಕೆ ಆಗಿರುತ್ತಾರೆ.
ಇವರು ಮೊಳಕಾಲ್ಮೂರು ಕ್ಷೇತ್ರದಿಂದ 4 ಬಾರಿ, ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದ 1 ಬಾರಿ, ಕೂಡ್ಲಿಗಿ ಕ್ಷೇತ್ರದಿಂದ 6ನೇ ಬಾರಿ ಶಾಸಕರಾಗಿ ಆಯ್ಕೆಯಾಗಿ ಅನುಭವಿ ಶಾಸಕರಾಗಿರುತ್ತಾರೆ.
ಎನ್ ವೈ ಗೋಪಾಲಕೃಷ್ಣ ಸರ್ ಅವರು ಆಯ್ಕೆಯಾದ ನಂತರ ನಮ್ಮ ತಾಲ್ಲೂಕಿನಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳು ಸಾಗರೋಪಾದಿಯಲ್ಲಿ ನಡೆಯುತ್ತಿವೆ ಹಾಗೂ ಕೂಡ್ಲಿಗಿಯಲ್ಲಿ ಮಿನಿವಿಧಾನಸೌಧ ಮಹಾತ್ಮ ಗಾಂಧಿ ಚಿತಾಭಸ್ಮ ಅಭಿವೃದ್ಧಿ ತಾಲೂಕಿನಲ್ಲಿ ಅನೇಕ ಶಾಲಾ ಕಟ್ಟಡಗಳು ಹಾಗೂ ಅಂಗನವಾಡಿ ಕಟ್ಟಡಗಳ ನಿರ್ಮಾಣ,ಕೂಡ್ಲಿಗಿ ತಾಲೂಕನ್ನು ವಿಜಯನಗರ ಜಿಲ್ಲೆಗೆ ಸೇರಿಸಿ ಮತ್ತು ನಮ್ಮ ತಾಲೂಕಿಗೆ ಕೆರೆಗಳನ್ನು ತುಂಬಿಸುವ ಯೋಜನೆಗೆ ಸರ್ಕಾರದಿಂದ ಅನುದಾನ ಕೊಡಿಸಿ ಆಧುನಿಕ ಭಗೀರಥ ಎಂದು ಹೆಸರಾಗಿದ್ದಾರೆ. ಎನ್ ವೈ ಗೋಪಾಲಕೃಷ್ಣ ಸರ್ ರವರು ದೂರದೃಷ್ಟಿಯುಳ್ಳ ಹಾಗೂ ಅತ್ಯಂತ ಅನುಭವವುಳ್ಳ ರಾಜಕಾರಣಿಯಾಗಿದ್ದಾರೆ. ಮತ್ತು ನಮ್ಮ ತಾಲೂಕಿನ ಅಭಿವೃದ್ಧಿಯಾದಂತೆ ಇಡೀ ರಾಜ್ಯವನ್ನು ಅಭಿವೃದ್ಧಿ ಮಾಡಲು ಸೂಕ್ತ ವ್ಯಕ್ತಿಯಾಗಿರುತ್ತಾರೆ,ಇಂತಹ ಶಾಸಕರನ್ನು ರಾಜ್ಯದ ಮಂತ್ರಿಯನ್ನಾಗಿ ಮಾಡಿದರೆ ಇವರು ಹೆಚ್ಚಿನದಾಗಿ ರಾಜ್ಯದ ಅಭಿವೃದ್ಧಿಗೆ ಒತ್ತು ನೀಡಬಲ್ಲರು.ಆದ್ದರಿಂದ ತಾವುಗಳು ಮಾನ್ಯ ಶಾಸಕರಾದ ಎನ್. ವೈ. ಗೋಪಾಲಕೃಷ್ಣ ಅವರಿಗೆ ಮಂತ್ರಿಸ್ಥಾನವನ್ನು ನೀಡಬೇಕೆಂದು ಈ ಮೂಲಕ ಕೂಡ್ಲಿಗಿ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಹಾಗೂ ನನ್ನ ವೈಯಕ್ತಿಕವಾಗಿ ಗೌರವಪೂರ್ವಕವಾಗಿ ಮನವಿ ಮಾಡಿಕೊಳ್ಳುತ್ತೇನೆ.
– ಇಂತಿ
ಮಂಜಣ್ಣ ಕೆ ಜಿ
ಅಧ್ಯಕ್ಷರು ಮಹಾಶಕ್ತಿಕೇಂದ್ರ (ಬಿಜೆಪಿ),
ಜಿಲ್ಲಾ ಪಂಚಾಯತ್ ಕ್ಷೇತ್ರ ಹೂಡೇಂ,
ಕೂಡ್ಲಿಗಿ ತಾಲೂಕು,
ವಿಜಯನಗರ ಜಿಲ್ಲೆ…

ವರದಿ.ಬಸಣ್ಣಿ ಬಣವಿಕಲ್ಲು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
