ಮೊಳಕಾಲ್ಮೂರು: ಸರದಿ ಸಾಲಲ್ಲಿ ನಿಂತು ನಾ ಮುಂದು ತಾ ಮುಂದು ಎಂಬಂತೆ 2 ನೇ ಡೋಸ್ ಸರದಿ ಸಾಲಿನಲ್ಲಿ ಹರಸಾಹಸ.!!

ಚಿತ್ರದುರ್ಗ: ಮೊಳಕಾಲ್ಮೂರು: ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಕೊರೊನಾ ಲಸಿಕಾ ಕೇಂದ್ರದಲ್ಲಿ ನೀಡುವ ಕೊರೊನಾ ಲಸಿಕೆಗಾಗಿ ಜನ ಹರಸಾಹಸ ಪಡುವಂತಾಗಿದೆ. ಕೊರೊನಾ ಲಸಿಕೆಗಾಗಿ ನೋಂದಾಯಿತರು 2 ನೇ ಡೋಸ್‌ ಪಡೆಯಲು ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಲಸಿಕಾ ಕೇಂದ್ರದಲ್ಲಿ ಬೆಳಗ್ಗೆ 8 ರಿಂದಲೇ ಜನ ಜಮಾಯಿಸಿದ್ದರು. ಕೊರೊನಾ ಲಸಿಕೆ ನೀಡುತ್ತಿರುವ ಲಸಿಕಾ ಕೇಂದ್ರವು ಸಾಮಾಜಿಕ ಅಂತರವಿಲ್ಲದಂತಾಗಿತ್ತು. ಕೊರೊನಾ ಲಸಿಕೆಯ 2 ನೇ ಡೋಸ್‌ ಪಡೆಯಲು 45 ವರ್ಷದ ಮೇಲ್ಪಟ್ಟವರು ಸರದಿ ಸಾಲಲ್ಲಿ ನಿಂತು ನಾ ಮುಂದು ತಾ ಮುಂದು ಎಂಬಂತೆ ಲಸಿಕೆ ಪಡೆಯಲು ಹರಸಾಹಸ ಪಡುವಂತಾಯಿತು. ಲಸಿಕೆ ನೀಡುವ ಸಿಬ್ಬಂದಿ ಕೆಲ ಕಾರಣಗಳಿಂದ ತಡವಾಗಿ ಬಂದ ಕಾರಣ ಲಸಿಕೆಗೆ ನೋಂದಾಯಿತರು ಅಗತ್ಯ ದಾಖಲೆಗಳೊಂದಿಗೆ 2 ನೇ ಡೋಸ್‌ ಪಡೆಯಲು ಲಸಿಕಾ ಕೇಂದ್ರದಲ್ಲಿ ನೋಂದಾಯಿಸಿಕೊಳ್ಳಲು ಹರಸಾಹಸ ಪಡುವಂತಾಯಿತು. ಅಂತೂ ಇಂತೂ 2 ನೇ ಡೋಸ್‌ ಲಸಿಕೆ ಪಡೆಯಲು ಬಂದವರು ಲಸಿಕಾ ಕೇಂದ್ರದಲ್ಲಿ ನೋಂದಾಯಿಸಿಕೊಂಡು ಲಸಿಕೆ ಪಡೆದು ನಿಟ್ಟುಸಿರು ಬಿಡುವಂತಾಯಿತು. ಮುಂದಿನ ದಿನಗಳಲ್ಲಿ ಕೊರೊನಾ ಲಸಿಕೆ ಪಡೆಯಲು ಸೂಕ್ತ ಸ್ಥಳ ಹಾಗೂ ಸಿಬ್ಬಂದಿ ಕೊರತೆ ನೀಗಿಸಿ ಲಸಿಕೆ ಕಲ್ಪಿಸಲು ಸಂಬಂಧಿತ ಅಧಿಕಾರಿಗಳು ಗಮನ ಹರಿಸಬೇಕೆಂಬುದು ಸಾರ್ವಜನಿಕರ ಆಶಯವಾಗಿದೆ…

ವರದಿ. ಮಂಜುನಾಥ್, ಎಚ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend