ಚಿತ್ರದುರ್ಗ: ಮೊಳಕಾಲ್ಮೂರು / ತಾಲೂಕಿನ ಗ್ರಾಮಗಳಲ್ಲಿ ಪ್ರಾರಂಭಿಸಿದ ಮೈಕ್ರೋ ಕೋವಿಡ್ ಕೋವಿಡ್ ಕೇಂದ್ರಗಳಲ್ಲಿ ದಾಖಲಾದ ಕೊರೊನಾ ಸೋಂಕಿತರಿಗೆ ಚಿಕಿತ್ಸೆಯ ಜತೆಗೆ ಶುದ್ಧ ಕುಡಿಯುವ ನೀರು, ಊಟ, ಸೇರಿದಂತೆ ಹಲವಾರು ಸೌಲಭ್ಯಗಳನ್ನು ಕಲ್ಪಿಸಿ ಗುಣಪಡಿಸಿ ಕೋವಿಡ್ ಮುಕ್ತ ತಾಲೂಕನ್ನಾಗಿಸ ಬೇಕೆಂದು ತಹಶೀಲ್ದಾರ್ ಟಿ.ಸುರೇಶ್ ಕುಮಾರ್ ತಿಳಿಸಿದ್ದಾರೆ. ಪಟ್ಟಣದ ತಾಲೂಕು ಪಂಚಾಯಿತಿ ಕಾರ್ಯಾಲಯದ ಸಭಾಂಗಣದಲ್ಲಿ ಕೋವಿಡ್ ನಿಯಂತ್ರಣಕ್ಕೆ ಕೊರೊನಾ ಟಾಸ್ಕ್ಫೋರ್ಸ್ ಸಮಿತಿಯ ಅಧಿ ಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನ ಗ್ರಾಮ ಪಂಚಾಯಿತಿ ಕಾರ್ಯಾಲಯಕ್ಕೆ ಬಂದ 15 ನೇ ಹಣಕಾಸು ಯೋಜನೆಯಲ್ಲಿ ಕೋವಿಡ್ ನಿವಾರಣೆಗೆ ಅನುದಾನ ಬಳಸಿ ಅಗತ್ಯ ಸೌಲಭ್ಯ ಕಲ್ಪಿಸಬಹುದಾಗಿದೆ. ಕೊರೊನಾ ಕೋವಿಡ್ ಕೇಂದ್ರಗಳಲ್ಲಿನ ಸೋಂಕಿತರಿಗೆ ಗುಣಮಟ್ಟದ ಶುಚಿ ಮತ್ತು ರುಚಿ ಊಟ, ಉಪಾಹಾರ, ಕುಡಿಯುವ ನೀರು ಇನ್ನಿತರ ಸೌಕರ್ಯ ಕಲ್ಪಿಸಬೇಕಾಗಿದೆ. ಸೋಂಕಿತರಿಗೆ ದಾನಿಗಳು ನೀಡುವ ಊಟ ನೀಡುವವರು ಕೊರೊನಾ ನಿಯಮ ಪಾಲಿಸಿ ನೀಡಲು ಸೂಚಿಸಬೇಕಾಗಿದೆ. ತಾಲೂಕಿನಲ್ಲಿ ಕೊರೊನಾ ನಿಯಂತ್ರಣಕ್ಕೆ ರಚಿಸಿರುವ ಟಾಸ್ಕ್ ಫೋರ್ಸ್ ಸಮಿತಿಗಳು ಸಮನ್ವಯತೆಯೊಂದಿಗೆ ಕಾರ್ಯನಿರ್ವಹಿಸಬೇಕಾಗಿದೆ. ತಾ.ಪಂ.ನ ಕಾರ್ಯನಿರ್ವಹಣಾಕಾರಿ ಜಾನಿಕಿರಾಮ್ ರವರು ಮಾತನಾಡಿ ತಾಲೂಕಿನಲ್ಲಿ ಕೋವಿಡ್ ನಿಯಂತ್ರಣಕ್ಕೆ ತಾಲೂಕಿನ ಗ್ರಾಮ ಪಂಚಾಯಿತಿ ನಿಂದ ಗ್ರಾಮದ ಟಾಸ್ಕ್ ಫೋರ್ಸ್ ಸಮಿತಿಯಿಂದ ಸಮರ್ಪಕವಾಗಿ ಕೆಲಸವಾಗುತ್ತಿಲ್ಲವೆಂದು ಆರೋಪವಿದೆ. ಗ್ರಾಮ ಪಂಚಾಯಿತಿಯ ಮಟ್ಟದ ಕಾರ್ಯಪಡೆ ಸಭೆ ಮಾಡಲಾಗುತ್ತಿರುವುದು ಹೊರತು ಗ್ರಾಮಮಟ್ಟದ ಕಾರ್ಯಪಡೆ ಸಭೆ ಮಾಡಲಾಗುತ್ತಿಲ್ಲ. ಇದರಿಂದ ಗ್ರಾಮ ಮಟ್ಟದಲ್ಲಿ ಕೋವಿಡ್ ಬಗ್ಗೆ ಜಾಗೃತಿ, ಸ್ಯಾನಿಟೈಸರ್ ಸಿಂಪಡನೆ, ಸ್ವತ್ಛತೆ ಇನ್ನಿತರ ಕೋವಿಡ್ ನಿಯಂತ್ರಣದ ಕೆಲಸಗಳು ನಿರ್ವಹಿಸಬೇಕಾಗಿದೆ. ಈ ಸಂದರ್ಭದಲ್ಲಿ ಉಪ ತಹಶೀಲ್ದಾರ್ ಮಹಾಂತೇಶ್, ಶಿರಸ್ತೇದಾರ ಏಳುಕೋಟಿ, ತಾಲೂಕು ಆರೋಗ್ಯಾ ಧಿಕಾರಿ ಡಾ.ಸುಧಾ, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಪಾತಲಿಂಗಪ್ಪ, ಖಜಾನೆ ಇಲಾಖೆಯ ಸುರೇಶ್, ಸಾಮಾಜಿಕ ಅರಣ್ಯ ಇಲಾಖೆಯ, ಪರಿಶಿಷ್ಟ ವರ್ಗಗಳ ಕಲ್ಯಾಧಿ ಕಾರಿ ಯತೀಶ್ ಕುಮಾರ್, ಕಂದಾಯ ನಿರೀಕ್ಷಕ ಪ್ರಾಣೇಶ್, ಗ್ರಾಮ ಲೆಕ್ಕಾಧಿಕಾರಿ ವಾಲೇಕರ್, ತಾಲೂಕಿನ 16 ಗ್ರಾಮ ಪಂಚಾಯಿತಿಗಳ ಗ್ರಾಮಾಭಿವೃದ್ಧಿ ಆಧಿಕಾರಿಗಳು ಉಪಸ್ಥಿತರಿದ್ದರು.
ವರದಿ. ಮಂಜುನಾಥ್, ಎಚ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
