ಚಿರತೆದಾಳಿಗೆ ಸಾಕು ನಾಯಿ ಬಲಿ…!!!

ನಮ್ಮ ಆತ್ಮೀಯರು ಹಾಗೂ ಕುಂಬಾರಹಳ್ಳ ಗ್ರಾಮದ ಹಿರಿಯರಾದ ಶ್ರೀ ನಿಂಗಪ್ಪ ಹೆಗಡೆ ಅವರು ನಿನ್ನೆ ನನಗೆ ಪೋನ್ ಮೂಲಕ ಮಾತನಾಡಿ ಅವರ ತೋಟದಲ್ಲಿ ಸಾಕಿದ ನಾಯಿಯನ್ನು ಯಾವುದೋ ಕ್ರೂರ ಪ್ರಾಣಿ ಕೊಂದು ಹಾಕಿ ತಿಂದಿರುವದಾಗಿ ತಿಳಿಸಿದರು.
ನಾನು ಕೂಡಲೇ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ ವಿಷಯ ತಿಳಿಸಿದ ತಕ್ಷಣ ಅರಣ್ಯ ಇಲಾಖೆಯವರು ಕರೆಗೆ ಸ್ಪಂದಿಸಿ ಅಲ್ಲಿಗೆ ಬಂದು ಸುಮಾರು ಸಿ.ಸಿ ಕ್ಯಾಮರಾಗಳನ್ನು ಅಳವಡಿಸಿ ದೃಶ್ಯಗಳನ್ನು ವಿಕ್ಷೀಸಲಾಗಿ ಚಿರತೆ ತಿರುಗಾಡುವ ದೃಶ್ಯಕಂಡು ಬಂದಿದೆ ಇದರಿಂದ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಯಾಗಿದೆ.
ಚಿರತೆಯು ಪ್ರತಿ ನಿತ್ಯ ರಾತ್ರಿ ಅಲ್ಲಿಗೆ ಬಂದು ಬೇಟೆಯಾಡಿದ ನಾಯಿಯನ್ನು ತಿಂದು ತೆಗೆದುಕೊಂಡು ಹೋಗಿದೆ. ರಾತ್ರಿ ಮತ್ತೆ ಅದೇ ಸ್ಥಳದಲ್ಲಿ ಸುಮಾರು ಬಾರಿ ತಿರುಗಾಡಿದೆ. ಈಗ ಅರಣ್ಯ ಇಲಾಖೆ ಸಿಬ್ಬಂದಿ ಕುಂಬಾರಹಳ್ಳದಲ್ಲಿ ಬಿಡುಬಿಟ್ಟು ಚಿರತೆಗಾಗಿ ಬಲೆ ಬಿಸಿದ್ದಾರೆ.
ಆದಷ್ಟು ಬೇಗ ಚಿರತೆಯನ್ನು ಹಿಡಿದು ಕಾಡಿಗೆ ಕಳುಹಿಸಲಿ ಎಂದು ಪ್ರಾರ್ಥಿಸುತ್ತೇನೆ.

ವರದಿ. ಮಹಾಲಿಂಗ ಗಗ್ಗರಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend